ಬಾದನಹಟ್ಟಿ: ಪೂಜಾ ಮಂದಿರ ಉದ್ಘಾಟನೆ
ಕುರುಗೋಡು: ಪಟ್ಟಣಕ್ಕೆ ಸಮೀಪದ ಬಾದನಹಟ್ಟಿ ಗ್ರಾಮದಲ್ಲಿ ಅಯ್ಯಪ್ಪ ಸ್ವಾಮಿ ಪೂಜಾ ಮಂದಿರದ ಉದ್ಘಾಟನಾ ಕಾರ್ಯಕ್ರಮ ಜರುಗಿತು.
ಕರಿಬಸವ ಶಿವಶರಣರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಇಂದಿನ ಯುವಕರು ನೈತಿಕ ಶಿಕ್ಷಣದಿಂದ ವಂಚಿತರಾಗಿ, ಭಯೋತ್ಪದಾನೆ ಮತ್ತು ಜಾತಿ ಮತ ಸಂಘರ್ಷದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದನ್ನು ನಿಯಂತ್ರಿಸಲು ಇಂತಹ ಧಾರ್ಮಿಕ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದರು.
ಬೆಳಗ್ಗೆ ಅಯ್ಯಪ್ಪ, ಗಣೇಶ ಮತ್ತು ಷಣ್ಮುಖಸ್ವಾಮಿ ವಿಗ್ರಹದ ಮೆರವಣಿಗೆ 108 ಕುಂಭ ಕಳಸ ಮತ್ತು ಡೊಳ್ಳು, ನಂದಿಕೋಲು, ಭಜನೆ, ಕೋಲಾಟ ಮಂಗಳವಾದ್ಯಗಳೊಂದಿಗೆ ನಡೆಯಿತು. ನಂತರ ಪೂಜಾ ಮಂದಿರದಲ್ಲಿ ಕುಂಭ, ಪಂಚಾಮೃತ, ಅಷ್ಟೋತ್ತರ ಅಭಿಷೇಕ ಮಾಡಲಾಯಿತು. ರಾಮ್ಬಾಬು ಗುರುಸ್ವಾಮಿ ಪೂಜಾ ವಿಧಿ ವಿಧಾನ ನಡೆಸಿದರು. ಕೃಷ್ಣಾನಗರ ಕ್ಯಾಂಪಿನ ಮಹಿಳೆಯರು ಭಗವದ್ಗೀತೆ ಗಾಯನ ಮಾಡಿದರು. ಕಟ್ಟಡ ನಿರ್ಮಾಣಕ್ಕೆ ಸ್ಥಳದಾನ ನೀಡಿದ ಎಪಿಎಂಸಿ ಮಾಜಿ ಅಧ್ಯಕ್ಷ ಜಿ. ಗೋವಿಂದರೆಡ್ಡಿ, ಸಿ. ನಾಗರಾಜ್, ಶಾಪುರ ಮಲ್ಲಿಕಾರ್ಜುನ, ಸತ್ಯನಾರಯಣ ರೆಡ್ಡಿ, ಶ್ರೀನಿವಾಸಲು, ಪಿ. ಬಸಪ್ಪ ದಮ್ಮೂರು ಸತ್ಯನಾರಾಯಣ ರೆಡ್ಡಿ, ಕರಿಬಸಪ್ಪ, ಗೋವಿಂದ ರೆಡ್ಡಿ, ಪಾಲಾಕ್ಷಿ ಮತ್ತಿತರರು ಇದ್ದರು. ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು. ಬಸಪ್ಪ ಕೆ. ಕರಿಸಬವ, ಗಾಳಿ ಕರೆಪ್ಪ ಹಾಗೂ ತ್ರಿಮೂರ್ತಿ ಕಾರ್ಯಕ್ರಮ ನಿರ್ವಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

