ಬಳ್ಳಾರಿ

ಕೋಳಿ ಫಾರಂ ತೆರವುಗೊಳಿಸಲು ಗ್ರಾಪಂಗೆ ಮನವಿ

Published On :

ಹಗರಿಬೊಮ್ಮನಹಳ್ಳಿ: ಕೋಳಿ ಫಾರಂ ತೆರವುಗೊಳಿಸುವಂತೆ ಆಗ್ರಹಿಸಿ ಗುರುವಾರ ಹಗರಿಬೊಮ್ಮನಹಳ್ಳಿ ತಾಲೂಕಿನ ಕಡ್ಲಬಾಳು ಗ್ರಾಮ ಪಂಚಾಯ್ತಿ ಮುಂಭಾಗ ತಾಲೂಕಿನ ಕಾತ್ಯಾಯಿನಿಮರಡಿ ಮತ್ತು ಓಬಾಳಪುರ ಗ್ರಾಮಸ್ಥರು ಸಾಂಕೇತಿಕವಾಗಿ ಧರಣಿ ಕುಳಿತು, ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು.
ಎರಡು ಗ್ರಾಮಗಳ ಮಧ್ಯೆ ಇರುವ ಕೋಳಿ ಫಾರಂನಿಂದಾಗಿ ಗ್ರಾಮದಲ್ಲಿ ಸ್ವಚ್ಛತೆಯಿಲ್ಲದಂತಾಗಿದೆ. ಇದರಿಂದಾಗಿ ಗ್ರಾಮದಲ್ಲಿ ನೊಣಗಳ ಸಂಖ್ಯೆ ಹೆಚ್ಚಳವಾಗಿದ್ದು, ಕೂಡಲೆ ಅಲ್ಲಿಂದ ಕೋಳಿ ಫಾರಂ ತೆರವುಗೊಳಿಸಬೇಕೆಂದು ಒತ್ತಾಯಿಸಿದರು. ಒಂದು ತಿಂಗಳ ಹಿಂದೆ ಕೋಳಿ ಫಾರಂ ತೆರವುಗೊಳಿಸಲು ಆಗ್ರಹಿಸಿ ಮನವಿಪತ್ರ ಸಲ್ಲಿಸಿದ್ದೆವು. ಆದರೆ ಈ ಕುರಿತಂತೆ ಯಾವುದೆ ಕ್ರಮವನ್ನು ತಾಲೂಕಾಡಳಿತ ಕೈಗೊಂಡಿಲ್ಲ ಎಂದು ಧರಣಿನಿರತರು ಆರೋಪಿಸಿದರು.
ಧರಣಿ ನಿರತರಿಂದ ಮನವಿ ಸ್ವೀಕರಿಸಿದ ಕಾರ್ಯದರ್ಶಿ ಬಸವರಾಜ, ಮೇಲಧಿಕಾರಿಗಳಿಗೆ ಮನವಿಪತ್ರವನ್ನು ತಲುಪಿಸುವುದಾಗಿ ಭರವಸೆ ನೀಡಿದರು. ಮನವಿಪತ್ರ ನೀಡಿದ ಕೂಡಲೆ ಸಾಂಕೇತಿಕ ಧರಣಿ ಅಂತ್ಯಗೊಂಡಿತು.
ಕಾತ್ಯಾಯಿನಿಮರಡಿ ಗ್ರಾಮದ ಮಲ್ಲಿಕಾರ್ಜುನಯ್ಯ, ಬಸವರಾಜಯ್ಯ, ಶಂಕರಯ್ಯ, ಓಬಳಾಪುರದ ಫಕ್ಕಿರಪ್ಪ, ಅಂಜನೇಯ, ಭೀಮಪ್ಪ, ಹುಲುಗಪ್ಪ, ಯು. ಬಸವರಾಜ, ಭರ್ಮಪ್ಪ, ರುದ್ರಪ್ಪ, ಲಿಂಗರಾಜು, ಹೊಸಳ್ಳಿ ಜಂಭಣ್ಣ, ಗೌರಮ್ಮ, ಶಾಂತಮ್ಮ ಸೇರಿದಂತೆ ಹಲವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.