ಬಳ್ಳಾರಿ

ರಫ್ತು ಅಕ್ರಮ: ಸಿಬಿಐ ಪರಿಶೀಲನೆ

Published On :

ಬಳ್ಳಾರಿ: ಪರವಾನಗಿ ಇಲ್ಲದೆ ಅದಿರು ಸಾಗಿಸಿರುವ 22 ಗಣಿ ಕಂಪನಿಗಳ ವಿರುದ್ಧದ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿಬಿಐ ಚೆನ್ನೈನ ಆರ್ಥಿಕ ಅಪರಾಧ ದಳದ ಅಧಿಕಾರಿ ಶ್ರೀಧರನ್ ನೇತೃತ್ವದ ಸಿಬಿಐ ತಂಡ ಶುಕ್ರವಾರ ಹೊಸಪೇಟೆ ತಾಲೂಕಿನ ವಿವಿಧ ಗಣಿ ಪ್ರದೇಶ ಹಾಗೂ ಸ್ಟಾಕ್‌ಯಾರ್ಡ್‌ಗಳನ್ನು ಪರಿಶೀಲಿಸಿತು. ಶ್ರೀಧರನ್ ನೇತೃತ್ವದಲ್ಲಿ ಆಗಮಿಸಿದ ಐದು ಸಿಬಿಐ ಅಧಿಕಾರಿಗಳ ತಂಡ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ ದಾಲ್ಮೀಯ ಮೈನ್ಸ್, ಆರ್‌ಎಂಎ ಮೈನ್ಸ್, ಶ್ರೀ ಲಕ್ಷ್ಮಿ ವೆಂಕೇಶ್ವರ ಸ್ಟಾಕ್‌ಯಾರ್ಡ್, ವಿ.ಎಂ. ಸ್ಟಾಕ್‌ಯಾರ್ಡ್, ಶಾಂತಲಕ್ಷ್ಮಿ ಜಯರಾಂ ಸ್ಟಾಕ್‌ಯಾರ್ಡ್‌ಗೆ ಭೇಟಿ ನೀಡಿತ್ತು. ಶುಕ್ರವಾರ ಬೆಳಗ್ಗೆಯಿಂದ ಸಂಜೆವರೆಗೆ ಪರಿಶೀಲನಾ ಕಾರ್ಯ ನಡೆಸಿದ್ದು, ಸಂಜೆ ಬೆಂಗಳೂರಿಗೆ ಹಿಂದಿರುಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪರವಾನಗಿ ಇಲ್ಲದೆ 50 ಸಾವಿರ ಮೆಟ್ರಿಕ್ ಟನ್‌ಗಿಂತ ಹೆಚ್ಚಿನ ಅದಿರನ್ನು ಅಕ್ರಮವಾಗಿ ಅದಿರು ರಫ್ತು ಮಾಡಿರುವ 22 ಕಂಪನಿಗಳ ಮೇಲೆ ಸಿಬಿಐ ತನಿಖೆ ನಡೆಸುತ್ತಿದ್ದು, ಈಗಾಗಲೇ 22 ಕಂಪನಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.