ಉತ್ತಂಗಿ ಚನ್ನಪ್ಪರಿಂದ ಕನ್ನಡದ ಅದ್ವಿತೀಯ ಸೇವೆ: ಹುರುಕಡ್ಲಿ ಶಿವಕುಮಾರ
ಹೂವಿನಹಡಗಲಿ: ವಚನ ಸಾಹಿತ್ಯ ಹಾಗೂ ಸರ್ವಜ್ಞನ ತ್ರಿಪದಿಗಳನ್ನು ಸಂಗ್ರಹಿಸಿ ಉತ್ತಂಗಿ ಚನ್ನಪ್ಪ ಅವರು ಕನ್ನಡ ಸಾಹಿತ್ಯಕ್ಕೆ ಅದ್ವಿತೀಯ ಸೇವೆ ಸಲ್ಲಿಸಿದ್ದಾರೆ ಎಂದು ಸಾಹಿತಿ ಹುರಕಡ್ಲಿ ಶಿವಕುಮಾರ ಹೇಳಿದರು.
ತಾಲೂಕಿನ ಉತ್ತಂಗಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ಕರ್ನಾಟಕ ಏಕೀಕರಣ ಹೋರಾಟಕ್ಕೆ ಬಳ್ಳಾರಿ ಜಿಲ್ಲೆ ಕೊಡುಗೆ ಹಾಗೂ ರೆ. ಉತ್ತಂಗಿ ಚನ್ನಪ್ಪ ಅವರ ಬದುಕು ಕುರಿತು ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ತಾಂಡವವಾಡುತ್ತಿದ್ದ ಜ್ವಲಂತ ಸಮಸ್ಯೆಗಳಾದ ಜಾತಿ, ಅಸಮಾನತೆ ವಿರುದ್ಧ ಜನಜಾಗೃತಿ ಮೂಡಿಸಿದರು. ತುಳಿತಕ್ಕೆ ಒಳಿಗಾದ ಜನಸಮುದಾಯದ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಬದಲಾವಣೆಗೆ ಅವರು ಶ್ರಮಿಸಿದ್ದರು ಎಂದರು. ಮೂಲತಃ ಗದಗ ಬೇಟಗೇರಿ ಗ್ರಾಮದಲ್ಲಿ ಜನಿಸಿದ್ದ ಚನ್ನಪ್ಪನವರು ಕ್ರೈಸ್ತ ಸಮುದಾಯಕ್ಕೆ ಸೇರಿ ಸರ್ವಜ್ಞನ ವಿಚಾರಗಳನ್ನು ದಾಖಲಿಸಿ ಉತ್ತಂಗಿ ಗ್ರಾಮದ ಹೆಸರನ್ನು ನಾಡಿಗೆ ಪರಿಚಯಿಸಿದ್ದಾರೆ ಎಂದು ಹೇಳಿದರು.
ಕಸಾಪ ದತ್ತಿ ದಾನಿ ಗುಡೆಕೋಟೆ ಬಸವರಾಜ, ಕಸಾಪ ಹಿರಿಯ ಸದಸ್ಯ ಕೆ. ಶಾಂತನಗೌಡ, ಪ್ರಾಚಾರ್ಯ ಕುಲಕರ್ಣಿ, ಕಸಾಪ ಅಧ್ಯಕ್ಷ ಸುರೇಶ ಅಂಗಡಿ ಉಪಸ್ಥಿತರಿದ್ದರು. ಮುಖ್ಯಗುರು ಕೆ. ರಾಜಶೇಖರ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಮಲ್ಲನಗೌಡ ನಿರ್ವಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

