ಧರ್ಮದ ಆಶ್ರಯವಿಲ್ಲದೆ ಅಭಿವೃದ್ಧಿ ಅಸಾಧ್ಯ: ಶ್ರೀ
ಕನ್ನಡಪ್ರಭ ವಾರ್ತೆ, ಕೊಟ್ಟೂರು, ಅ. 3
ಧಾರ್ಮಿಕ ತಳಹದಿಯ ಮೇಲೆ ಪ್ರತಿಯೊಂದು ಧರ್ಮದ ಅಭಿವೃದ್ಧಿ ನಿಂತಿದ್ದು, ಧರ್ಮದ ಆಶ್ರಯವಿಲ್ಲದೇ ಯಾವುದೆ ಸಮುದಾಯ ಸರ್ವಾಂಗೀಣ ಅಭಿವೃದ್ಧಿ ಕಾಣಲು ಅಸಾಧ್ಯ ಎಂದು ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಮಠದ ಶ್ರೀ ಶಿವಸುಜ್ಞಾನತೀರ್ಥ ಸ್ವಾಮೀಜಿ ಅಭಿಪ್ರಾಯಿಸಿದರು.
ಗುರುವಾರ ಪಟ್ಟಣದ ವಿಶ್ವಕರ್ಮ ಸಮಾಜ ಆಯೋಜಿಸಿದ್ದ ವಿಶ್ವಕರ್ಮ ಪೂಜಾ ಮಹೋತ್ಸವ ಮತ್ತು ಸಮಾಜ ಪತ್ತಿನ ಸಹಕಾರ ಸಂಘದ ಉದ್ಘಾಟನೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ವಿಶ್ವಕರ್ಮ ಸಮಾಜದ ಸ್ವಾಮಿಗಳು ಗೃಹಸ್ಥಾಶ್ರಮ ಸೇರಿದೆ ಯತಿಗಳಾಗಿ ಸೇರುವುದು ಒಳಿತು ಎಂದು ಹೇಳಿದ ಅವರು, ವಿಶ್ವಕರ್ಮ ಸಮಾಜ ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಸಮುದಾಯ ಧಾರ್ಮಿಕ ಸಮಾನತೆಯಲ್ಲಿ ತೀರಾ ಹಿಂದುಳಿದಿದೆ. ವಿಶ್ವಕರ್ಮದವರು ವೇದೋತ್ತಕವಾಗಿ ಬ್ರಾಹ್ಮತ್ವ ಹೊಂದಿದ್ದರು. ವಿಶ್ವಬ್ರಾಹ್ಮಣತ್ವ ಅರಿಯದ ಸಂಶೋಧಕರು ಅವರನ್ನು ಗುರುತಿಸದೆ ಇರುವುದು ನಿಜಕ್ಕೂ ದುರಂತ ಎಂದರು.
ಸಮಾಜದ ಹಿರಿಯ ಮುಖಂಡ ಜಟಿಂಗಾಚಾರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಮುಖಂಡ ಮಾಬಾ ಸೋಮಣ್ಣ ವಿಶೇಷ ಉಪನ್ಯಾಸ ನೀಡಿದರು. ಶಿವಶಂಕರ ಸ್ವಾಮೀಜಿ, ಚಾನುಕೋಟಿ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಪಪಂ ಅಧ್ಯಕ್ಷೆ ಅನುಸೂಯ ಸೆರೆಗಾರ ಉಪಾಧ್ಯಕ್ಷ ಗುರುಶಾಂತಪ್ಪ, ಸದಸ್ಯೆ ಹೇಮಲತಾ ನಾಗಪ್ಪ, ಗುರುಬಸವರಾಜ, ಪಿ.ಎಚ್. ದೊಡ್ಡರಾಮಣ್ಣ, ಎಸ್. ರಾಜೇಂದ್ರ ಪ್ರಸಾದ್, ಡಿ. ಶಿವಚರಣ, ತೋಟದ ರಾಮಪ್ಪ, ತಿಪ್ಪಾಚಾರಿ ಮತ್ತಿತರರು ವೇದಿಕೆಯಲ್ಲಿದ್ದರು.
ಮೆರವಣಿಗೆ: ಭಗವಾನ್ ವಿಶ್ವಕರ್ಮ ಪತ್ತಿನ ಸಹಕಾರ ಸಂಘದ ಉದ್ಘಾಟನೆ ಅಂಗವಾಗಿ ಪಟ್ಟಣದ ವಿಶ್ವಕರ್ಮ ಸಮಾಜ ಬಾಂಧವರು ಗುರುವಾರ ಏರ್ಪಡಿಸಿದ್ದ ಬೃಹತ್ ಮೆರವಣಿಗೆಯಲ್ಲಿ ವಿಶ್ವಕರ್ಮ ಪೀಠಾಧ್ಯಕ್ಷ ಶಿವಶಂಕರ ಸ್ವಾಮೀಜಿ, ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮಿಗಳನ್ನು ಸ್ವಾಗತಿಸಲಾಯಿತು. ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿತು. ಮೆರವಣಿಗೆಯಲ್ಲಿ ಮೌನಾಚಾರಿ ವೇಷದ ನವೀನ, ಕಮ್ಮಾರ್ ವೇಷಧಾರಿ ಭರತ್, ಬಡಿಗೇರ ವೃತ್ತಿಯ ವೇಷಧಾರಿ ಚೇತನ, ಶಿಲ್ಪಿಯ ವೇಷದಾರಿ ಮೌನೇಶ ಎಂಬ ಬಾಲಕರು ಎಲ್ಲರ ಗಮನ ಸೆಳೆದರು.
ವೀರಣ್ಣಾಚಾರಿ, ವಕೀಲ ರಮೇಶ್, ಚಕಣಾಚಾರಿ, ಯುವ ಮುಖಂಡ ಮಹಾಬಲೇಶ್ವರಾಚಾರಿ, ನಾಗರಾಜ, ವಾಸುದೇವ, ಮೌನಾಚಾರಿ, ಗಂಗಾಧರ, ಸುಧಾಚಾರಿ, ಹರೀಶ್ ಮೆರವಣಿಗೆಯಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

