ಪ್ರಾಣಿಗಳನ್ನು ಆಧ್ಯಾತ್ಮಿಕ ನೆಲೆಯಲ್ಲಿ ಕಾಣಿ: ಡಾ. ಉಮೇಶ್
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಅ. 7
ಕಾಡನ್ನು ರಕ್ಷಿಸಿದರೆ ನಾವು ಬದುಕಲು ಸಾಧ್ಯ ಹಾಗೂ ಪ್ರಾಣಿ ಮತ್ತು ಪಕ್ಷಿ ಜಗತ್ತನ್ನು ನಮ್ಮ ಧರ್ಮ ಮತ್ತು ಆಧ್ಯಾತ್ಮದ ನೆಲೆಯಲ್ಲಿ ಕಾಣಬೇಕು ಎಂದು ಸಹಕಾರ ಸಂಘಗಳ ಸಹಾಯಕ ನಿಬಂಧಕ ಡಾ. ಜಿ. ಉಮೇಶ ಹೇಳಿದರು.
ತಾಲೂಕಿನ ಕಮಲಾಪುರದ ನಿಸರ್ಗ ಧಾಮದಲ್ಲಿ ನಡೆದ 59ನೇ ವನ್ಯಜೀವಿ ಸಪ್ತಾಹ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ನಾಗರಿಕತೆಯಿಂದ ಅನಾಗರಿಕತೆಯೆಡೆಗೆ ಸಾಗುತ್ತಿದ್ದು, ಕಾಡಿದ್ದರೆ ನಾಡು ಎನ್ನುವುದನ್ನು ಪ್ರತಿಯೊಬ್ಬರು ಮರೆತಂತಿದೆ. ಕಾಡು ನಾಶವಾದಂತೆ ಕಾಡು ಪ್ರಾಣಿಗಳು ನಾಶದ ಜೊತೆಗೆ ನಾಡಿನ ಜನರು ಸಾಕಷ್ಟು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಪರಿಸರಕ್ಕೆ ಆಗುವ ದುಷ್ಪರಿಣಾಮಗಳ ಬಗ್ಗೆ ಹಾಗೂ ಅಗತ್ಯ ವಸ್ತುಗಳ ಮಿತ ಬಳಕೆ ಕುರಿತು ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ ಮೂಡಿಸಬೇಕಾಗಿದೆ ಎಂದರು.
ಪಶು ವೈದ್ಯಾಧಿಕಾರಿ ಡಾ. ಜೆ.ಎಸ್. ಅಶ್ವತ್ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಜಗತ್ತು ಕಂಡ ಅತ್ಯಂತ ಕ್ರೂರಿ ಮತ್ತು ದಡ್ಡ ಪ್ರಾಣಿ ಮನುಷ್ಯನಾಗಿದ್ದಾನೆ. ಭೂಮಿಯಲ್ಲಿ ಯಾವುದು ಇರಬೇಕು ಅದನ್ನು ನಾಶಪಡಿಸಿ, ಯಾವುದು ಇರಬಾರದೋ ಅದನ್ನು ಬೆಳೆಸುತ್ತಿದ್ದಾನೆ. ಭೂಮಿಯನ್ನು ಸುಂದರವಾಗಿಡಬೇಕು, ಹಸಿರಾಗಿಡಬೇಕು ಮತ್ತು ಜೀವ ವೈವಿಧ್ಯತೆ ಕಾಳಜಿ ಕುರಿತು ನಮ್ಮನ್ನು ನಾವು ಮೊದಲು ತಿದ್ದಿಕೊಳ್ಳಬೇಕು. ನಂತರ ನಾವು ನಮ್ಮ ಪರಿಸರ ರಕ್ಷಣೆಗೆ ಮುಂದಾಗಬೇಕು. ಈ ಸುಂದರ ಭೂಮಿಯ, ಸುಂದರ ವಾತಾವರಣವನ್ನು ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ನಾವು ಬಳುವಳಿಯಾಗಿ ನೀಡಬೇಕು ಎಂದರು.
ಕಮಲಾಪುರ ಜಂಗಲ್ ಲಾಡ್ಜ್ನ ಸ್ಥಾನಿಕ ವ್ಯವಸ್ಥಾಪಕ ಸಿ. ಅನಿಕೇತನ್, ವಲಯ ಅರಣ್ಯಾಧಿಕಾರಿ (ಕರಡಿಧಾಮ) ಎಂ. ನಾಗರಾಜ್, ನಿವೃತ್ತ ವಲಯ ಅರಣ್ಯಾಧಿಕಾರಿ ಬಿ. ವೆಂಕಟೇಶಲು, ಕಮಲಾಪುರ ಬಾಲಕಿಯರ ಪ್ರೌಢಶಾಲೆ ಶಿಕ್ಷಕ ವೀರಣ್ಣ ಶೀಲವಂತರ್, ವನ್ಯಜೀವಿ ಛಾಯಾಗ್ರಾಹಕ ಪಂಪಯ್ಯಸ್ವಾಮಿ ಮಳೇಮಠ್, ಉಪ ವಲಯ ಅರಣ್ಯಾಧಿಕಾರಿ ಎಂ. ಗೌರಿಶಂಕರ್, ಈರಪ್ಪ ಎಸ್. ಹಳಿಯಾಳ, ಅರಣ್ಯ ರಕ್ಷಕ ವಿಶ್ವನಾಥ ಎಸ್. ಹಿರೇಮನಿ, ವಿ. ಸೋಮಸುಂದರ್ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

