ಬಳ್ಳಾರಿ

ಹ.ಬೊ.ಹಳ್ಳಿಗೂ ಬಂತು ಶುದ್ಧ ನೀರು

Published On :

ಹಗರಿಬೊಮ್ಮನಹಳ್ಳಿ: ಪಟ್ಟಣದಲ್ಲಿ ಎಟಿಡಬ್ಲೂ (ಎನಿ ಟೈಮ್ ವಾಟರ್ ಸೆಂಟರ್) ಯುಗ ಆರಂಭವಾಗಿದೆ. ಇಷ್ಟುದಿನ ಹಗರಿಬೊಮ್ಮನಹಳ್ಳಿ ತಾಲೂಕಿನ ಜನತೆ ಪಾಲಿಗೆ ಮರೀಚಿಕೆಯಾಗಿದ್ದ ಶುದ್ಧ ಕುಡಿಯುವ ನೀರಿನ ಘಟಕ ಆರಂಭವಾಗಿದೆ.
ಎಟಿಡಬ್ಲೂ ಘಟಕಕ್ಕೆ ಒಂದು ರುಪಾಯಿ ನಾಣ್ಯ ಹಾಕಿ ಹತ್ತು ಲೀಟರ್ ಶುದ್ಧ ನೀರು ಪಡೆಯಬಹುದು. ತಾಲೂಕಿನ ಉದ್ದಕ್ಕೂ ಅಲೆದರೂ ಒಂದೇ ಒಂದು ಬೊಗಸೆ ಶುದ್ಧ ಕುಡಿಯುವ ನೀರು ಸಿಗದು. ಶತಮಾನಗಳಿಂದಲೂ ತುಂಗಭದ್ರಾ ನದಿ ಪಕ್ಕದಲ್ಲೇ ಹರಿಯುತ್ತಿದ್ದರೂ ದಂಡೆ ಮೇಲಿರುವ ತಾಲೂಕಿನ ಐವತ್ತಕ್ಕೂ ಅಧಿಕ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿಗೆ ಹಾಹಾಕಾರ ತಪ್ಪಿಲ್ಲ. 6 ವರ್ಷದ ಹಿಂದೇ ತುಂಗಾಭದ್ರಾ ನದಿಯಿಂದ ಹಗರಿಬೊಮ್ಮನಹಳ್ಳಿಗೆ ನೀರು ಪೂರೈಸುವ ವರೆಗೂ 30 ಸಾವಿರ ಜನಸಂಖ್ಯೆಯುಳ್ಳ ಪಟ್ಟಣಕ್ಕೆ ಪ್ಲೋರೈಡ್ ಬೋರ್ ವೆಲ್ ನೀರೇ ಗತಿಯಾಗಿತ್ತು.
ಗದಗದ ಕೆ.ಎಚ್. ಪಾಟೀಲ್ ಪ್ರತಿಷ್ಠಾನ ಹಾಗೂ ರೂರಲ್ ಮೆಡಿಕಲ್ ಸರ್ವಿಸ್ ಸೊಸೈಟಿ ಬಯಲು ಸೀಮೆಗೆ ಕೈಗೆಟಕುವ ದರದಲ್ಲಿ ಶುದ್ಧ ಕುಡಿಯುವ ನೀರು ಪೂರೈಸಲು ಮುಂದಾಗಿವೆ. ತಾಲೂಕಿನ ಗಡಿಗ್ರಾಮ, ತುಂಗಭದ್ರಾ ನದಿ ದಂಡೆಯ ಮೇಲಿರುವ ಬಾಚಿಗೊಂಡನಹಳ್ಳಿಯಲ್ಲಿ ಸಂಸ್ಥೆಯಿಂದ ಶುದ್ಧ ಕುಡಿಯುವ ನೀರಿನ ಘಟಕ ಕಾರ್ಯಾರಂಭ ಮಾಡಿದೆ. ಸಮುದಾಯ ಸಹಭಾಗಿತ್ವ ಹಾಗೂ ಸ್ಥಳೀಯಾಡಳಿತದ ಅನುದಾನ ಸದ್ಬಳಕೆ ಮತ್ತು ಕೆ.ಎಚ್. ಪಾಟೀಲ್ ಪ್ರತಿಷ್ಠಾನದ ಸಹಯೋಗದೊಂದಿಗೆ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಈ ಸೌಲಭ್ಯ ಪಡೆಯಲು ಜನರು ನಾ ಮುಂದು, ತಾ ಮುಂದು ಎಂದು ಮುಗಿಬೀಳುತ್ತಿದ್ದಾರೆ.
ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಸಂಗ್ರಹವಾಗುವ ಹಣದಿಂದ ಕೇಂದ್ರದ ನಿರ್ವಹಣೆ ಮಾಡಬಹುದಾಗಿದೆ. ಇದರ ನಿರ್ವಹಣಾ ವೆಚ್ಚ ಕಡಿಮೆ. ಗ್ರಾಮವೊಂದಕ್ಕೆ ಬೋರ್‌ವೆಲ್ ಹಾಕಲು  ತಗಲುವ ವೆಚ್ಚಕ್ಕೆ ಹೋಲಿಸಿದರೆ ಎಟಿಡಬ್ಲ್ಯೂ ಮೇಲೆ ಮಾಡುವ ವೆಚ್ಚ ತುಂಬಾ ಕಡಿಮೆ. ಲೀಟರ್ ನೀರಿಗೆ ರು. 20 ಇರುವಾಗ ಕೇವಲ ಹತ್ತು ಪೈಸೆಗೆ ಲೀಟರ್ ಶುದ್ಧ ನೀರು ನೀಡುವ ಎಟಿಡಬ್ಲೂಜನರ ಆರೋಗ್ಯ ದೃಷ್ಟಿಯಿಂದಲೂ ಉತ್ತಮ.
ನಮ್ಮ ಗ್ರಾಮ ನದಿ ದಂಡೆಯ ಮೇಲಿದೆ. ಕನಿಷ್ಠ ಪಕ್ಷ ಆರೇಳು ತಿಂಗಳ ಕಾಲ ಗ್ರಾಮದ ಬಳಿಯೇ ನೀರು ನಿಲ್ಲುತ್ತದೆ. ಆದರೆ, ಇಂದಿಗೂ ನದಿ ನೀರು ಬಳಸಿ ಶುದ್ಧ ನೀರು ನೀಡುವ ಶಾಶ್ವತ ಕಾರ್ಯಕ್ರಮಗಳು ಜಾರಿಯಾಗಲಿಲ್ಲ. ಪಾಟೀಲ್ ಪ್ರತಿಷ್ಠಾನದ ಮೂಲಕ ಈಗ ಕೇವಲ ಒಂದು ರುಪಾಯಿಗೆ ಹತ್ತು ಲೀಟರ್ ಶುದ್ಧ ನೀರು ಕುಡಿಯುವ ಸೌಲಭ್ಯ ಸಿಕ್ಕಿರುವುದು ಸಂತೋಷದ ವಿಷಯ.
- ಎಲಿಗಾರ್ ಶಿವಣ್ಣ, ಗ್ರಾಪಂ ಸದಸ್ಯ


ಹುಳ್ಳಿಪ್ರಕಾಶ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.