ಸುದ್ದಿ ಸಂಕ್ಷೇಪ
ಜೂಜು ಅಡ್ಡೆ ಮೇಲೆ ದಾಳಿ
ಬಳ್ಳಾರಿ: ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿ, ಆರೋಪಿಗಳನ್ನು ಬಂಧಿಸಿ, ಅವರಿಂದ ರು. 24,490 ವಶಪಡಿಸಿಕೊಂಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ. ಬೆಂಗಳೂರು ರಸ್ತೆಯ ಗ್ರಾಂಡ್ ಇನ್ ಹೋಟೆಲ್ ಪಕ್ಕದಲ್ಲಿಯೇ ಇಸ್ಪೀಟ್ ಆಡುತ್ತಿದ್ದಾಗ ಎಪಿಎಂಸಿ ಠಾಣೆಯ ಪಿಎಸ್ಐ ಸೋಮಶೇಖರ ದಾಳಿ ಮಾಡಿದ್ದಾರೆ. ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾರಿ ಕ್ಲೀನರ್ ಸಾವು
ಬಳ್ಳಾರಿ: ಚಲಿಸುತ್ತಿರುವ ಲಾರಿಯಲ್ಲಿದ್ದ ಕ್ಲೀನರ್ ಕೆಳಗೆ ಬಿದ್ದು, ಚಕ್ರಕ್ಕೆ ಸಿಲುಕಿ ಮೃತಪಟ್ಟಿರುವ ಘಟನೆ ಹರಗಿನಡೋಣಿ ಸಮೀಪದಲ್ಲಿ ನಡೆದಿದೆ. ವಿನೋದ್ ನಾಯ್ಕ ಮೃತಪಟ್ಟ ಕ್ಲೀನರ್. ಅ. 16ರಂದು ರಾತ್ರಿ 11 ಗಂಟೆಗೆ ಹರಗಿನಡೋಣಿ ಸಮೀಪದಲ್ಲಿ ಟಿ.ಬಿ. ಮೈನ್ಸ್ಗೆ ಹೋಗುವ ರಸ್ತೆಯಲ್ಲಿ ಚಲಿಸುತ್ತಿರುವ ಲಾರಿಯಿಂದ ವಿನೋದ್ ಕೆಳಗೆ ಬಿದ್ದಿದ್ದಾನೆ. ಆತನ ಮೇಲೆ ಲಾರಿ ಹಾದುಹೋಗಿದೆ. ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಗಾರ, ನಗದು ಕಳವು
ಬಳ್ಳಾರಿ: ಬೀಗ ಹಾಕಿದ ಮನೆಯ ಪತ್ತವನ್ನು ಕಳ್ಳರು ಜಖಂಗೊಳಿಸಿ, ಮನೆಯಲ್ಲಿದ್ದ ರು. 93 ಸಾವಿರ ಮೌಲ್ಯದ ಬಂಗಾರದ ಆಭರಣ ಹಾಗೂ ನಗದು ದೋಚಿಕೊಂಡು ಹೋಗಿರುವ ಘಟನೆ ಬಳ್ಳಾರಿಯ ವಿದ್ಯಾನಗರದಲ್ಲಿ ನಡೆದಿದೆ. ಮನೆಯ ಒಡೆಯ ಬಿ. ಸುಧಾಕರ ಅವರು ಮನೆಗೆ ಬೀಗ ಹಾಕಿ ಹೋಗಿದ್ದಾಗ ಕಳ್ಳರು ಮನೆಗೆ ನುಗ್ಗಿದ್ದಾರೆ. ಬೀರುವಿನಲ್ಲಿದ್ದ ರು. 93 ಸಾವಿರ ಮೌಲ್ಯದ ಬಂಗಾರದ ಆಭರಣ, ನಗದು ದೋಚಿಕೊಂಡು ಪರಾರಿಯಾಗಿದ್ದಾರೆ. ಕೌಲ್ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುರುಪ್ರಕಾಶ್ ನಿಧನ: ಸಂತಾಪ
ಬಳ್ಳಾರಿ: ಹೈಕೋರ್ಟ್ ನ್ಯಾಯವಾದಿ ಎನ್.ವೈ. ಗುರುಪ್ರಕಾಶ್ ಅವರ ನಿಧನಕ್ಕೆ ಜಿಲ್ಲಾ ವಾಲ್ಮೀಕಿ ನಾಯಕರ ವಿದ್ಯಾಭಿವೃದ್ಧಿ ಸಂಘದ ಕಚೇರಿಯಲ್ಲಿ ಸಂತಾಪ ಸೂಚಕ ಸಭೆ ಜರುಗಿತು. ಸಂಘದ ಅಧ್ಯಕ್ಷ ವಿ.ಎನ್. ಗಿರಿಮಲ್ಲಪ್ಪ ಹಾಗೂ ಪದಾಧಿಕಾರಿಗಳು ಎನ್.ವೈ. ಗುರುಪ್ರಕಾಶ್ ನಿಧನಕ್ಕೆ ಶೋಕ ವ್ಯಕ್ತಪಡಿಸಿದರು. ಬಿ. ರುದ್ರಪ್ಪ, ಎಚ್. ರಾಮಯ್ಯ, ಬಿ. ಕುಮಾರಸ್ವಾಮಿ, ಟಿ. ಮಲ್ಲಿಕಾರ್ಜುನ, ಎನ್.ಕೆ. ಸದಾಶಿವಪ್ಪ, ಬಿ. ಜಯರಾಂ, ಬಾದಾಮಿ ಶಿವಲಿಂಗ ನಾಯಕ, ಪಿ. ಓಬಳೇಶ್, ಜಿ. ರುದ್ರಪ್ಪ, ಕೆ. ವೆಂಕಟಸ್ವಾಮಿ, ಬಿ. ಗೌರಯ್ಯ, ಬಿ. ನಾರಾಯಣಸ್ವಾಮಿ, ಬಿ. ಭೀಮಣ್ಣ, ಬಿ. ಸಿದ್ದಪ್ಪ, ಬಿ. ಗೋಪಾಲ್, ಗಾದಿಲಿಂಗಪ್ಪ, ರಾಮಣ್ಣ, ಸುಂಕಪ್ಪ, ವಿಠೋಬ, ಬಿ. ರಾಮಯ್ಯ ಸೇರಿದಂತೆ ಇತರರು ಇದ್ದರು.
ವ್ಯಕ್ತಿ ಕಾಣೆ: ದೂರು
ಕುರುಗೋಡು: ವ್ಯಕ್ತಿಯೋರ್ವ ಕಾಣೆಯಾಗಿರುವ ದೂರು ಕುರುಗೋಡು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಎಚ್. ನಾಗರೆಡ್ಡಿ (28) ಎಂಬುವವನೇ ಕಾಣೆಯಾದ ವ್ಯಕ್ತಿ. ಈತನು ಸೆಪ್ಟೆಂಬರ್ 14ರಂದು ಬೆಳಗ್ಗೆ ಬೆಂಗಳೂರಿಗೆ ದುಡಿಯಲು ಹೋಗುತ್ತೇನೆ ಎಂದು ಹೇಳಿ ಹೋಗಿದ್ದು, ಇದುವರೆಗೆ ಮನೆಗೆ ಬಂದಿಲ್ಲ ಎಂದು ಈತನ ಪತ್ನಿ ಕುರುಗೋಡು ಠಾಣೆಗೆ ದೂರು ನೀಡಿದ್ದಾಳೆ.
ಕಾಣೆಯಾದವನು 5.5 ಅಡಿ ಎತ್ತರ, ಕೋಲುಮುಖ, ಗೋದಿ ಮೈ ಬಣ್ಣ ಕನ್ನಡ ಭಾಷೆ ಬಲ್ಲವನಾಗಿದ್ದಾನೆ. ಈತನ ಕುರಿತು ಸುಳಿವು ಸಿಕ್ಕಲ್ಲಿ ಕುರುಗೋಡು ಠಾಣೆಗೆ ತಿಳಿಸುವಂತೆ ಹಾಗೂ ದೂ.ಸಂ-08392-263433, ಮೊಬೈಲ್ ಸಂಖ್ಯೆ-9480803051, 9480803033ಗೆ ಸಂಪರ್ಕಿಸುವಂತೆ ಪಿಎಸ್ಐ ಸೋಮಶೇಖರ್ ಪ್ರಕಟಣೆಯಲ್ಲಿ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

