ಬಳ್ಳಾರಿ

ಕಸ್ತೂರಿ ಕರ್ನಾಟಕ ಜನಪರ ವೇದಿಕೆ ತಾಲೂಕು ಘಟಕ ಉದ್ಘಾಟನೆ

Published On :

ಕುಷ್ಟಗಿ: ಸಂಘಟನೆಗಳು ಸಮಾಜದಲ್ಲಿ ಶೋಷಣೆಗೆ ಒಳಗಾದವರಿಗೆ ನ್ಯಾಯ ಕೂಡಿಸುವುದರ ಜೊತೆಗೆ ಭ್ರಷ್ಟಾಚಾರ, ಅಕ್ರಮಗಳ ವಿರುದ್ಧ ಧ್ವನಿಎತ್ತಬೇಕು. ಆದರೆ, ಸಂಘಟನೆಗಳು ಬರಿ ಆರಂಭಶೂರತ್ವವನ್ನು ಪ್ರದರ್ಶಿಸಬಾರದು ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ಸ್ಥಳೀಯ ಬುತ್ತಿಬಸವೇಶ್ವರ ದೇವಸ್ಥಾನದ ಸಂಭಾಗಣದಲ್ಲಿ ಬುಧವಾರ ಏರ್ಪಡಿಸಿದ್ದ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ತಾಲೂಕು ಘಟಕದ ಉದ್ಘಾಟಿಸಿ ಮಾತನಾಡಿ, ಯುವಕರು ಹಾಗೂ ಸಂಘಟನೆಗಳು ನಾಡು-ನುಡಿಯ ರಕ್ಷಣೆ ಸೇರಿದಂತೆ ಸಮಾಜಮುಖಿಯಾಗಿ ಕೆಲಸ ನಿರ್ವಹಿಸಬೇಕು ಎಂದರು. ರಾಜ್ಯ ಜನಪರ ಸಂಘಟನೆಯ ರಾಜ್ಯ ಅಧ್ಯಕ್ಷ ರಮೇಶಗೌಡ ಮಾತನಾಡಿ, ನಾಡಿನಲ್ಲಿ ಹಲವಾರು ದಿನಗಳಿಂದ ಪರ ಭಾಷಿಕರ ದೌರ್ಜನ್ಯ ಹೆಚ್ಚುತ್ತಿದೆ. ಅಲ್ಲದೆ ಬೇರೆ ಬೇರೆ ರಾಜ್ಯಗಳಿಂದ ಬಂದು ರಾಜ್ಯದಲ್ಲಿ ಭೂಮಿ ಕಬಳಿಸುವುದನ್ನು ತೀವ್ರವಾಗಿ ಖಂಡಿಸುವ ಕೆಲಸ ಸಂಘಟನೆಯಿಂದ ನಡೆಸಲಾಗುವುದು ಎಂದರು.
ತಾಲೂಕು ಘಟಕದ ಗೌರವ ಅಧ್ಯಕ್ಷ ಚಂದ್ರಶೇಖರ ನಾಲತ್ವಾಡ ಮಾತನಾಡಿ, ತಾಲೂಕಿನಲ್ಲಿ ಉದಯವಾಗುತ್ತಿರುವ ನಮ್ಮ ಸಂಘಟನೆ ಜನ ಸಾಮಾನ್ಯರ, ತೂಳಿತಕ್ಕೆ ಹಾಗೂ ಅನ್ಯಾಯಕ್ಕೆ ಒಳಗಾದವರ, ಭ್ರಷ್ಟರ ವಿರುದ್ಧ ಧ್ವನಿಎತ್ತವುದು ಮೂಲ ಉದ್ದೇಶವಾಗಿದೆ ಎಂದರು. ಸಂಜೆ ಗಂಗಾವತಿಯ ಹಾಸ್ಯ ಕಲಾವಿದ ಬಿ. ಪ್ರಾಣೇಶ, ನರಸಿಂಹ ಜೋಶಿ, ಬಸವರಾಜ ಮಾಮನಿ ಅವರಿಂದ ಹಾಸ್ಯಸಂಜೆ ಕಾರ್ಯಕ್ರಮ ನಡೆಸಲಾಯಿತು. ವಿಜಯಕುಮಾರ ಗದ್ದಿ, ಉಮೇಶ, ಅನ್ನಪೂರ್ಣಾ ಸಿಂಗ್, ತಾಲೂಕು ಘಟಕದ ಅಧ್ಯಕ್ಷ ನಾರಯಣಸಿಂಗ್ ಗುಡಿಸಲಿ, ಬಿಜೆಪಿ ತಾಲೂಕು ಅಧ್ಯಕ್ಷ ಶಶಿಧರ ಕವಲಿ, ದುರಗಪ್ಪ ವಡಗೇರಿ, ಪಿ.ವೈ. ದಂಡಿನ, ದಿನೇಶ, ಕೃಷ್ಣಮೂರ್ತಿ, ಬಾಳಪ್ಪ, ಸೇರಿದಂತೆ ಮೊದಲಾದವರು ವೇದಿಕೆಯಲ್ಲಿದ್ದರು. ಉಮೇಶ ಸ್ವಾಗತಿಸಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.