ಮನಸೂರೆಗೊಂಡ ಸ್ವರ ಶ್ರದ್ಧಾಂಜಲಿ
ಕನ್ನಡಪ್ರಭ ವಾರ್ತೆ, ಕೊಟ್ಟೂರು, ಅ. 20
ಪಂಡಿತ ಪುಟ್ಟರಾಜ ಕವಿಗವಾಯಿಗಳಿಗೆ ಅವರ ಶಿಷ್ಯ ಬಳಗ ಮಧುರ ಕಂಠಗಳ ನಿನಾದವನ್ನು ಸಮೃದ್ಧವಾಗಿ ಹರಿಸಿ ಅರ್ಥಪೂರ್ಣ ಸ್ವರ ಶ್ರದ್ಧಾಂಜಲಿಯನ್ನು ಅರ್ಪಿಸಿದರು.
ಇಲ್ಲಿನ ಎಪಿಎಂಸಿ ಆವರಣದಲ್ಲಿ ಡಾ. ಪುಟ್ಟರಾಜ ಕವಿಗವಾಯಿಗಳ ತುಲಾಭಾರ ಸೇವಾ ಸಮಿತಿ ಮತ್ತು ಗುರು ಕೊಟ್ಟೂರೇಶ್ವರ ದಲಾಲರು, ಖರೀದಿದಾರರ ಸಂಘ ಏರ್ಪಡಿಸಿದ್ದ ಪುಟ್ಟರಾಜ ಕವಿಗವಾಯಿಗಳ 4ನೇ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಖ್ಯಾತ ಹಿಂದುಸ್ತಾನಿ ಗಾಯಕ ರವೀಂದ್ರ ಸೂರಗಾವಿ ಮಧುಕಂಸ ರಾಗದೊಂದಿಗೆ ಗಾಯನ ಪ್ರಸ್ತುತ ಪಡಿಸುತ್ತಿದ್ದಂತೆಯೇ ನೆರೆದಿದ್ದ ಸಭಿಕರು ಅವರ ಗಾಯನಕ್ಕೆ ತಲೆದೂಗಿದರು.
ವಚನಗಾಯನ, ರಂಗಗೀತೆಗಳನ್ನು ಹಾಡುತ್ತಿದ್ದಂತೆಯೇ ಪ್ರೇಕ್ಷಕ ಸಮೂಹ ಚಪ್ಪಾಳೆಗಳ ಸುರಿಮಳೆಗೈದು ತಮ್ಮ ಅಭಿಮಾನ ಮೆರೆದರು. ಧಾರವಾಡದ ಅರುಣಕುಮಾರ್ ಕಲ್ಯಾಣಿ ರಾಗದಲ್ಲಿ ಸಿತಾರ್ ನುಡಿಸಿದರು. ಹಿಂದುಸ್ತಾನಿ ಸಂಗೀತ ಮತ್ತು ಶರಣರ ವಚನಗಳು, ಷರೀಫರ ತತ್ವಪದಗಳು, ಜಾನಪದ ಗೀತೆಗಳನ್ನು ಹಾಡಿದರು. ಸ್ಥಳೀಯ ಗಾಯಕ ಎನ್.ಎಂ. ಪ್ರಾಣಲಿಂಗಸ್ವಾಮಿ ಹಿಂದುಸ್ತಾನಿ ಮತ್ತು ಲಘು ಸಂಗೀತ ಹಾಡಿದರು. ನಾರಾಯಣ ಹಿರೇಕೊಳಚಿ ವಯಲಿನ್, ನೀರೇಶ್ ಹಿಟ್ನಾಳ ಹಾರ್ಮೋನಿಯಂ, ಶರಣಪ್ಪ ಗುತ್ತರಗಿ, ಕೂಟ್ರೇಶ್ ಪಾಟೀಲ್ ಅಯ್ಯನಹಳ್ಳಿ ತಬಲಾ ಸಾಥ್ ನೀಡಿದರು.
ಎಂ.ಎಂ.ಜೆ. ಹರ್ಷವರ್ಧನ್ ಕಾರ್ಯಕ್ರಮ ಉದ್ಘಾಟಿಸಿದರು. ವರ್ತಕರ ಸಂಘದ ಅಧ್ಯಕ್ಷ ಪತ್ತಿಕೊಂಡ ಗಣೇಶಪ್ಪ ಅಧ್ಯಕ್ಷತೆ ವಹಿಸಿದ್ದರು. ತುಲಾಭಾರ ಸಮಿತಿ ಕಾರ್ಯದರ್ಶಿ ಪಿ. ಸುಧಾಕರ ಪಾಟೀಲ, ಕಲಾವಿದರು ಇದ್ದರು. ಶಿಕ್ಷಕ ಹನುಮಂತಪ್ಪ ಕಾರ್ಯಕ್ರಮ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

