ಸುದ್ದಿ ಸಂಕ್ಷೇಪ
ಇಂದು ಬೈಕ್ರ್ಯಾಲಿ
ಬಳ್ಳಾರಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಭೂ ಸ್ವಾಧೀನ ಕಾಯ್ದೆ- 2013ನ್ನು ವಿರೋಧಿಸಿ ಭೂ ಸಂತ್ರಸ್ಥ ರೈತರ ಹೋರಾಟ ಸಮಿತಿ ಅ. 21ರಂದು ಕುಡಿತಿನಿ ಗ್ರಾಮದಿಂದ ಬಳ್ಳಾರಿ ನಗರದವರೆಗೆ ಬೈಕ್ ರ್ಯಾಲಿ ಹಮ್ಮಿಕೊಂಡಿದೆ. ಈ ಹಿಂದಿನ (1894ರ) ಭೂ ಸ್ವಾಧೀನ ಕಾಯ್ದೆಯಲ್ಲಿ ರೈತ ವಿರೋಧಿ ಅಂಶಗಳೇ ಹೆಚ್ಚಾಗಿದ್ದುದರಿಂದ ರೈತರಿಗೆ, ಭೂ ಸಂತ್ರಸ್ತರಿಗೆ ಅನ್ಯಾಯವಾಗುತ್ತಿದೆ. ಇದನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಗಮನಿಸಿ, ಆದೇಶಗಳನ್ನು ಹೊರಡಿಸಿದ್ದದರ ಫಲವಾಗಿ ಹಾಗೂ ರೈತಪರ ಸಂಘಟನೆಗಳ ಹೋರಾಟದ ಫಲವಾಗಿ ನೂತನ ಭೂ ಸ್ವಾಧೀನ ಕಾಯ್ದೆ ಜಾರಿಗೊಳಿಸಬೇಕೆನ್ನುವ ಒಕ್ಕೊರಲ ಒತ್ತಾಯಗಳಿಂದ ಕೆಂದ್ರ ಸರ್ಕಾರ ಹೊಸದಾಗಿ ಭೂ ಸ್ವಾಧೀನ ಕಾಯ್ದೆ ರೂಪಿಸಿದೆ. ಆದರೆ ಈ ಕಾಯ್ದೆದೆಯಲ್ಲಿ ಭೂ ಸ್ವಾಧೀನಕ್ಕೊಳಗಾಗಿ ಭೂಮಿ ಕಳೆದುಕೊಂಡು ಅನ್ಯಾಯಕ್ಕೊಳಗಾಗಿರುವ ರೈತರಿಗೆ ಯಾವುದೇ ರೀತಿಯ ಪರಿಹಾರ ಇಲ್ಲದಿರುವುದು ನಿಜಕ್ಕೂ ದುರದೃಷ್ಟಕರ ಎಂದು ಹೋರಾಟ ಸಮಿತಿ ಹೇಳಿದೆ. ಈ ಕಾಯ್ದೆಯಲ್ಲಿನ ಹಲವು ರೈತ ವಿರೋಧಿ ಅಂಶಗಳನ್ನು ತೆಗೆದು ಹಾಕಲು, ಸರಿಪಡಿಸಲು ಹಾಗೂ ಈಗಾಗಲೆ ಭೂಸ್ವಾಧೀನಗೊಂಡಿರುವ ರೈತರಿಗೆ ಪರಿಹಾರ ನೀಡುವಂತೆ ಒತ್ತಾಯಿಸುವುದು ಮತ್ತು ಮುಖ್ಯವಾಗಿ ಭೂ ಸಂತ್ರಸ್ತ ರೈತರೆಲ್ಲರಿಗೂ ಪರಿಹಾರ ನೀಡಿದ ನಂತರವಷ್ಟೇ ಅನ್ವಯಿಸಲು ಒತ್ತಾಯಿಸಿ, ಅ. 21ರಂದು ಕುಡಿತಿನಿಯಿಂದ ಬಳ್ಳಾರಿಗೆ ರೈತರು ಬೈಕ್ ರ್ಯಾಲಿ ನಡೆಸಲಿದ್ದಾರೆ. ಬೈಕ್ ರ್ಯಾಲಿಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಬಿ. ರವಿಪ್ರಕಾಶ್, ಪೋಲಪ್ಪ, ಯು. ಬಸವರಾಜ್, ಉದ್ದಾರೆಡ್ಡಿ, ಸಿ. ದೊಡ್ಡಬಸಪ್ಪ, ಅಡಿವೆಪ್ಪ, ಗವಿಸಿದ್ದಪ್ಪ, ನಾಗದೇವಪ್ಪ, ಡಾ. ವಿರೂಪಾಕ್ಷಪ್ಪ, ವೀರನಗೌಡ ಕೋರಿದ್ದಾರೆ.
ಪದಾಧಿಕಾರಿಗಳ ಆಯ್ಕೆ
ಬಳ್ಳಾರಿ: ನ್ಯಾಯಬೆಲೆ ಅಂಗಡಿಗಳ, ಸೀಮೆಎಣ್ಣೆ ಮಾರಾಟಗಾರರ ಎಸ್ಸಿ, ಎಸ್ಟಿ ಸಂಘದ ಜಿಲ್ಲಾ ಘಟಕದ ಉದ್ಘಾಟನಾ ಕಾರ್ಯಕ್ರಮ ಭಾನುವಾರ ನಗರದ ಮರ್ಚೇಡ್ ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮವನ್ನು ಮಾಜಿ ಜಿಪಂ ಸದಸ್ಯ, ನ್ಯಾಯಬೆಲೆ ಅಂಗಡಿಗಳ, ಸೀಮೆಎಣ್ಣೆ ಮಾರಾಟಗಾರರ ಎಸ್ಸಿ, ಎಸ್ಟಿ ಸಂಘದ ಜಿಲ್ಲಾಧ್ಯಕ್ಷ ಮಾನಯ್ಯ ಉದ್ಘಾಟಿಸಿ, ನಂತರ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ತೆಕ್ಕಲಕೋಟೆ ಮಾರುತಿ, ಅಧ್ಯಕ್ಷರಾಗಿ ಮಾನಯ್ಯ, ಕಾರ್ಯಾಧ್ಯಕ್ಷರಾಗಿ ಅ. ಅರುಣ್ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಬಿ. ಪರಶುರಾಮುಡು, ಖಜಾಂಚಿಯಾಗಿ ಕೆ. ವೆಂಕಟೇಶ್, ಕಾನೂನು ಸಲಹೆಗಾರರಾಗಿ ಎ.ಕೆ. ನಿಂಗಪ್ಪ, ಸದಸ್ಯರಾಗಿ ಎಂ. ಸುಗ್ಲಪ್ಪ, ಕೆ. ವೆಂಕಟೇಶ್, ಕೆ. ಮೋಹನ್, ಎಸ್. ಹುಸೇನಪ್ಪ, ಸಿದ್ದೇಶ್, ಕೆ. ಮಾರುತಿ, ಮಹಾನಂದಿಕೊಟ್ಟಂ ಮೋಹನ್, ಕೆ. ಗಾದಿಲಿಂಗಪ್ಪ, ಎಚ್. ಪರಶುರಾಮ, ಕೆಂಚಪ್ಪ ಹಾಗೂ ಇತರರನ್ನು ಆಯ್ಕೆ ಮಾಡಲಾಯಿತು ಎಂದು ಪ್ರಕಟಣೆ ತಿಳಿಸಿದೆ.
ವಾಲ್ಮೀಕಿ ಜಯಂತಿ ಆಚರಣೆ
ಬಳ್ಳಾರಿ: ತಾಲೂಕಿನ ಎತ್ತಿನಬೂದಿಹಾಳದಲ್ಲಿ ನೇತಾಜಿ ಯುವಕ ಸಂಘದಿಂದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಕಾವಲಿ ಕಟ್ಟೇಬಸಪ್ಪ, ಹನುಮಂತ, ಸಂಘದ ಅಧ್ಯಕ್ಷ ಕೆ. ವೆಂಕಟೇಶ, ಕೃಷ್ಣಮೂರ್ತಿ, ಶ್ರೀನಿವಾಸ, ಕಾವಲಿ ಬಸವರಾಜ, ನಟರಾಜ್, ಲೋಕೇಶ್, ಹೊನ್ನೂರಸ್ವಾಮಿ ಇದ್ದರು.
ವಿವಿಧೆಡೆ ವಾಲ್ಮೀಕಿ ಜಯಂತಿ ಆಚರಣೆ
ಬಳ್ಳಾರಿ: ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಕಾಂಗ್ರೆಸ್ ವತಿಯಿಂದ ಶುಕ್ರವಾರ ನಗರದ ಎಸ್ಪಿ ವೃತ್ತದಲ್ಲಿರುವ ವಾಲ್ಮೀಕಿ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಜಯಂತಿ ಆಚರಿಸಲಾಯಿತು.
ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಕಾರ್ಯದರ್ಶಿ ಕಂದಾರಿ ನಾಗರಾಜ, ರಾಜ್ಯ ಯುವ ಕಾಂಗ್ರೆಸ್ ಮುಖಂಡ ಬಿ.ಎಂ. ಪಾಟೀಲ್, ಮುಖಂಡರಾದ ಹೊನ್ನಪ್ಪ, ಹುಲಿಯಪ್ಪ, ಶಿವರಾಮ, ಧನಂಜಯ, ಯುಗಂಧರ್, ಅನಿಲ್ಕುಮಾರ್, ಚಂದ್ರ, ಪ್ರಸಾದ್ ಸೇರಿದಂತೆ ಇತರರು ಇದ್ದರು.
ಹಡ್ಲಿಗಿ: ತಾಲೂಕಿನ ಹಡ್ಲಿಗಿ ಗ್ರಾಮದಲ್ಲಿ ವಾಲ್ಮೀಕಿ ಜಯಂತಿ ಅಂಗವಾಗಿ ಶುಕ್ರವಾರ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಶ್ರೀ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ನಡೆಯಿತು.
ಪ್ರಾರಂಭದಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಲಾಯಿತು. ನಂತರ ವಿವಿಧ ವಾದ್ಯ ಮೇಳಗಳೊಂದಿಗೆ ಮೆರವಣಿಗೆ ನಡೆಯಿತು. ಗ್ರಾಪಂ ಅಧ್ಯಕ್ಷ, ಸದಸ್ಯರು, ಎಸ್ಡಿಎಂಸಿ ಪದಾಧಿಕಾರಿಗಳು, ಗ್ರಾಮದ ಮುಖಂಡರು ಇದ್ದರು.
ಜಾಲಿಹಾಳು: ಜಾಲಿಹಾಳು ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಶುಕ್ರವಾರ ವಿಜೃಂಭಣೆಯಿಂದ ಆಚರಿಸಲಾಯಿತು. ವಾಲ್ಮೀಕಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಪೂಜೆ ಸಲ್ಲಿಸಲಾಯಿತು. ಮೋಕ ಠಾಣೆಯ ಪಿಎಸ್ಐ ಶಿವಾನಂದ ಶೆಟ್ಟಿ, ವಕೀಲ ಕೆ.ಗವಿಸಿದ್ದಪ್ಪ, ಗ್ರಾಪಂ ಅಧ್ಯಕ್ಷೆ ಡಿ.ಗಂಗಮ್ಮ, ಓಬಳೇಶಪ್ಪ, ಎಸ್ಡಿಎಂಸಿ ಅಧ್ಯಕ್ಷ ಕೆ. ಉರುಕುಂದಪ್ಪ, ಬಿ. ಪರಶುರಾಮ, ನಾಗರಾಜ, ಕೃಷ್ಣಯ್ಯ, ಸೋಮಪ್ಪ, ಚನ್ನಬಸವ, ಬಸವ, ವನ್ನೂರ ಗ್ರಾಮಸ್ಥರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

