ಪಠ್ಯಕ್ರಮ ಕಾರ್ಯಾಗಾರ
ಬಳ್ಳಾರಿ: ಆಯುರ್ವೇದ ವೈದ್ಯಕೀಯ ಪಠ್ಯ ಪುಸ್ತಕಗಳು ವಿದ್ಯಾರ್ಥಿಗಳಿಗೆ ಹೆಚ್ಚಿನ ಜ್ಞಾನ ಸಂಪಾದನೆಗೆ ಅನುಕೂಲವಾಗಿರಬೇಕು. ಯಾವುದೇ ಒತ್ತಡಕ್ಕೊಳಗಾಗಿ, ಗೊಂದಲ ಮೂಡಿಸುವಂತಿರಬಾರದು ಎಂದು ನವದೆಹಲಿಯ ಸಿಸಿಐಎಂ ಸದಸ್ಯ ಡಾ. ರಾಜಶೇಖರ್ ಗಾಣಿಗೇರ ತಿಳಿಸಿದರು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಮತ್ತು ತಾರನಾಥ ಸರ್ಕಾರಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಜಂಟಿಯಾಗಿ ನಗರದಲ್ಲಿ ಮೊದಲ ಮತ್ತು 2ನೇ ವರ್ಷದ ಬಿಎಎಂಎಸ್ ಪದವಿಯ ರಾಜ್ಯ ಮಟ್ಟದ 2 ದಿನಗಳ ಪಠ್ಯಕ್ರಮ (ಅಧ್ಯಾಪನಾ) ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ನೂತನವಾಗಿ ಪಠ್ಯಕ್ರಮಗಳನ್ನು ತಿದ್ದುಪಡಿ ಮಾಡಲು ಸಂಪನ್ಮೂಲ ವ್ಯಕ್ತಿಗಳಿಂದ, ತಜ್ಞರೊಂದಿಗೆ ಚರ್ಚಿಸಿ, ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಎಲ್ಲಾ ವಿವರವನ್ನು ಕೌನ್ಸೆಲ್ ಮುಂದಿಟ್ಟು ಚರ್ಚಿಸಿ, ಕ್ರಮ ಕೈಗೊಳ್ಳಲಾಗುವುದು ಎಂದರು. ಡಾ.ಎ.ಎಂ. ಗೌಡರ, ಡಾ. ಶಾಬುದ್ದೀನ್, ಡಾ. ಗಜಾನನ ಹೆಗಡೆ, ವಿವಿಧ ಸಂಪನ್ಮೂಲ ವ್ಯಕ್ತಿಗಳು ಆಯುರ್ವೇದ ಉನ್ನತಿ ಕುರಿತು ತಿಳಿಸಿದರು. ತಾರನಾಥ ಸರ್ಕಾರಿ ಆಯುರ್ವೇದ ಮೆಡಿಕಲ್ ಕಾಲೇಜು ಪ್ರಾಚಾರ್ಯ ಡಾ. ಈ.ಆರ್. ವಸ್ತ್ರದ ಮಾತನಾಡಿ, ಅಧ್ಯಾಪನಾ ಕಾರ್ಯಾಗಾರದಲ್ಲಿ ತಮ್ಮ ಕಾಲೇಜಿನ ಪ್ರಾಧ್ಯಾಪಕರು ಸಕ್ರೀಯವಾಗಿ ಪಾಲ್ಗೊಂಡು, ಯಶಸ್ವಿಗೊಳ್ಳಲು ಶ್ರಮಿಸಲಿದ್ದಾರೆ. ವಿದ್ಯಾರ್ಥಿಗಳಿಗೆ ಸುಲಲಿತವಾಗಿ ಜ್ಞಾನಾರ್ಜನೆಗೆ ಅನುಕೂಲವಾಗುವ ವಿಷಯ, ವಿವರಗಳನ್ನು ಸಂಗ್ರಹಿಸಲಾಗುವುದು ಎಂದು ಹೇಳಿದರು. ಡಾ. ಮಾಧವ ದಿಗ್ಗಾವಿ ಸ್ವಾಗತಿಸಿದರು.
ಇಲಾಖೆ ಸ್ಥಳಾಂತರ
ಬಳ್ಳಾರಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯನ್ನು ಬಿಡಿಎಎ ಮೈದಾನದಲ್ಲಿ ನೂತನವಾಗಿ ನಿರ್ಮಿಸಿರುವ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ ಎಂದು ಇಲಾಖೆಯ ಸಹಾಯಕ ನಿರ್ದೇಶಕ ರಾಜು ಬಾವಿಹಳ್ಳಿ ತಿಳಿಸಿದ್ದಾರೆ. ಕಚೇರಿಗೆ ಪೂಜೆ ಸಲ್ಲಿಸುವ ಮೂಲಕ ಸ್ಥಳಾಂತರಿಸಲಾಯಿತು. ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶ್ರೀನಿವಾಸ ಕುಲಕರ್ಣಿ, ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಷಕೀಬ್, ರಾಜ್ಯ ಪ್ರಶಸ್ತಿ ವಿಜೇತ ಗಾದೆಪ್ಪ, ಫುಟ್ಬಾಲ್ ತರಬೇತುದಾರ ದಾದಾಪಿರ್ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

