ಸಕಾಲ ಘಟಕ ಉದ್ಘಾಟನೆ
ಬಳ್ಳಾರಿ: ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಸಕಾಲ ಘಟಕದ ಉದ್ಘಾಟನಾ ಕಾರ್ಯಕ್ರಮ ಜರುಗಿತು. ಸರ್ಕಾರದ ನಿರ್ದೇಶನದಂತೆ ವಿಶ್ವವಿದ್ಯಾಲಯದ ಎಲ್ಲ ವಿಭಾಗಗಳ ಸೇವೆಗಳನ್ನು ಸಕಾಲದ ವ್ಯಾಪ್ತಿಗೆ ಒಳಪಡಿಸುವ ಹಿನ್ನೆಲೆಯಲ್ಲಿ ತೆರೆಯಲಾಗಿರುವ ಸಕಾಲ ಘಟಕವನ್ನು ಹಣಕಾಸು ಅಧಿಕಾರಿ ಎಂ.ಎ. ಜುಬೇರ್ ಉದ್ಘಾಟಿಸಿದರು. ವಿವಿ ಅಧೀನದಲ್ಲಿ ಬರುವ ಮಹಾವಿದ್ಯಾಲಯಗಳ ಪ್ರಾಂಶುಪಾಲರು, ವಿವಿ ಸಿಬ್ಬಂದಿ ಪಾಲ್ಗೊಂಡಿದ್ದರು. ನೋಡೆಲ್ ಅಧಿಕಾರಿ ಕೆ.ಸಿ. ಪ್ರಶಾಂತ್, ಜಿಲ್ಲಾ ಸಲಹಾಧಿಕಾರಿ ಆಯೇಶಾ ಉಪಸ್ಥಿತರಿದ್ದರು.
ಜೂಜಾಟ: ಒಟ್ಟು 11 ಜನರ ಬಂಧನ
ಬಳ್ಳಾರಿ: ಮಟ್ಕಾ ಜೂಜಾಟ ಅಡ್ಡೆಯ ಮೇಲೆ ಪೊಲೀಸರು ದಾಳಿ ಮಾಡಿ ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ ರು. 6,010 ವಶಪಡಿಸಿಕೊಂಡಿರುವ ಘಟನೆ ಬಳ್ಳಾರಿಯ ಇಂದಿರಾ ನಗರದಲ್ಲಿ ನಡೆದಿದೆ. ಇಂದಿರಾ ನಗರದ ಶಾಲೆಯ ಸಮೀಪದಲ್ಲಿ ಮಟ್ಕಾ ಜೂಜಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಕೌಲ್ಬಜಾರ್ ಇನ್ಸ್ಪೆಪೆಕ್ಟರ್ ಕೋಳಿವಾಡ ದಾಳಿ ಮಾಡಿ ಮಲ್ಲಪ್ಪ, ವೀರೇಶ್ಗೌಡ ಅವರನ್ನು ಬಂಧಿಸಿದ್ದಾರೆ. ಕೌಲ್ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರು. 5630, ಇಬ್ಬರ ಬಂಧನ: ನಗರದ ಕೋಟೆ ಪ್ರದೇಶದ ಜೂಜಾಟ ಅಡ್ಡೆ ಮೇಲೆ ಗುರುವಾರ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿ, ಅವರಿಂದ ರು. 5,630 ವಶಪಡಿಸಿಕೊಂಡಿದ್ದಾರೆ. ಬಿಸಿಸಿ ಗ್ರೌಂಡ್ನಲ್ಲಿ ಗುರುವಾರ ಸಂಜೆ ಮಟ್ಕಾ ಜೂಜಾಟ ಆಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಕೌಲ್ಬಜಾರ್ ಪೊಲೀಸರು ದಾಳಿ ಮಾಡಿ ನಾಗರಾಜ್, ಖಾಜಾ ಅವರನ್ನು ಬಂಧಿಸಿದ್ದಾರೆ. ಕೌಲ್ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಡೂರು: ಅಂದರ್ ಬಾಹರ್ ಆಡುತ್ತಿದ್ದ ಅಡ್ಡೆ ಮೇಲೆ ಸಂಡೂರು ಪೊಲೀಸರು ದಾಳಿ ಮಾಡಿ, ಏಳು ಆರೋಪಿಗಳನ್ನು ಬಂಧಿಸಿದ್ದು, ಅವರಿಂದ ರು. 7,215 ವಶಪಡಿಸಿಕೊಂಡಿದ್ದಾರೆ. ಸಂಡೂರಿನ ಐಶ್ವರ್ಯ ಲಾಡ್ಜ್ ಹಿಂದಿನ ಗೇಟ್ ಹೊರಗಡೆ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದಾಗ ಪೊಲೀಸರು ದಾಳಿ ಮಾಡಿ ಶಿವಕುಮಾರ್, ಸುಭಾನ್, ಎರ್ರಿಸ್ವಾಮಿ, ಕುಮಾರಸ್ವಾಮಿ, ಶಿವಪ್ಪ, ಕೆ. ದೇವರಾಜ್, ರಾಘವೇಂದ್ರ, ರಾಘು ಎನ್ನುವವರನ್ನು ಬಂಧಿಸಿದ್ದಾರೆ. ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

