ಬಳ್ಳಾರಿ

ಆಧುನಿಕ ಜಂಜಾಟದಲ್ಲಿ ಜನಪದ ಉಳಿಸಿ

Published On :

ಹೂವಿನಹಡಗಲಿ: ದೇಶಿಯ ನೆಲಗಟ್ಟಿನಲ್ಲಿ ಶ್ರಮ ಸಂಸ್ಕೃತಿಯನ್ನು ಉಳಿಸಿ, ಬೆಳೆಸುತ್ತ  ಆಧುನಿಕ ಜಂಜಾಟದಲ್ಲಿ ಸಾಂಸ್ಕೃತಿಕ ಜನಪದ ಪರಂಪರೆಯನ್ನು ಉಳಿಸುವ ಮೂಲಕ ನೆಮ್ಮದಿ ಬದುಕು ಕಂಡುಕೊಳ್ಳಬೇಕು ಎಂದು ಸಾಹಿತಿ ಡಾ. ನಿಂಗು ಸೊಲಗಿ ಹೇಳಿದರು.
ಇಲ್ಲಿನ ರುದ್ರಾಂಬಾ ಎಂ.ಪಿ. ಪ್ರಕಾಶ ಸರ್ಕಾರಿ ಪದವಿ ಕಾಲೇಜಿನಲ್ಲಿ ನಾಡೋಜ ಡಾ.ಎಚ್.ಎಲ್. ನಾಗೇಗೌಡರ ಸ್ಮರಣಾರ್ಥ ಶಾಲಾ ಕಾಲೇಜಿಗೊಂದು ಜನಪದ ಬಂಡಿ ಕಾರ್ಯಕ್ರಮದಲ್ಲಿ ಪ್ರಸ್ತುತ ನೆಮ್ಮದಿ ಬದುಕಿಗೆ ಜನಪದ ಸಂಸ್ಕೃತಿ ಕುರಿತು ವಿಶೇಷ ಉಪನ್ಯಾಸ ನೀಡಿ, ಬೀಸೋ ಪದ, ಕಟ್ಟುವ ಪದ, ಸೋಬಾನೆ ಪದಗಳ ಮೂಲಕ ವೈಚಾರಿಕತೆ ಜತೆಗೆ ಜನಪದ ಸಾಹಿತ್ಯ ಹಾಗೂ ಕಲಾವಿದರ ಮಾಹಿತಿಯನ್ನು ವಿದ್ಯಾರ್ಥಿಗಳು ಸಂಗ್ರಹಿಸಿ, ಸಂಸ್ಕೃತಿ, ಕಲೆಯನ್ನು ಉಳಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಹಸೀಲ್ದಾರ್ ಎ.ಬಿ. ವಿಜಯಕುಮಾರ್, ಸಾಹಿತ್ಯದ ಮೂಲಕ ಸಂಸ್ಕೃತಿ ಉಳಿಸಿಕೊಳ್ಳಲು ಸಾಧ್ಯ. ಜನಪದ ಕಾರ್ಯಕ್ರಮಗಳು ಹೆಚ್ಚು ಹೆಚ್ಚಾಗಿ ನಡೆಯುವ ಮೂಲಕ ವಿದ್ಯಾರ್ಥಿಗಳಲ್ಲಿ ಜನಪದ ಆಚಾರ, ವಿಚಾರಗಳನ್ನು ಅರಿಯಲು ಅನುಕೂಲವಾಗುತ್ತದೆ ಎಂದರು.
ಸಾಹಿತಿ ಶೇಷಗಿರಿರಾವ್ ಪ್ರಾಸ್ತವಿಕವಾಗಿ ಮಾತನಾಡಿದರು. ಜಾನಪದ ಜಿಲ್ಲಾ ಕಾರ್ಯದರ್ಶಿ ಮೇಟಿ ಕೊಟ್ರಪ್ಪ, ತಾಲೂಕು ಅಧ್ಯಕ್ಷ ಎಲ್. ಖಾದರ್ ಬಾಷಾ, ಬೀಚಿ ಬಳಗದ ಅಧ್ಯಕ್ಷ ಎಂ. ತವನಪ್ಪ, ಎಚ್. ಚಂದ್ರಪ್ಪ, ಕಾದಂಬರಿಗಾರ್ತಿ ಅಂಜನಾ ಕೃಷ್ಣಪ್ಪ ಮಾತನಾಡಿದರು.
ಜಿಪಿಜಿ ಕಾಲೇಜು ಪ್ರಾಚಾರ್ಯ ಎಚ್.ಎಂ. ಗುರುಬಸವರಾಜ, ಉಪ ಪ್ರಾಚಾರ್ಯ ಎಸ್. ಬಸವನಗೌಡ, ಪ್ರಭಾರಿ ಪ್ರಾಚಾರ್ಯ ಬೂದನೂರು ಸುರೇಶ, ಉಪನ್ಯಾಸಕ ಕೆ. ವೆಂಕಟೇಶ, ಕೋಶಾಧ್ಯಕ್ಷ ಬಸವರಾಜ ಕೊಳ್ಳಿ, ಕಾರ್ಯದರ್ಶಿ ಎಲ್. ಮಧುನಾಯ್ಕ ಉಪಸ್ಥಿತರಿದ್ದರು.
ಉಪನ್ಯಾಸಕ ಗಂಟೆಪ್ಪ, ಡಾ. ಸತೀಶ, ಬಸವರಾಜ ಹೆಬ್ಬಾಳ ಕಾರ್ಯಕ್ರಮ ನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.