ಬಳ್ಳಾರಿ

ಶಾಲೆ ವಂಚಿತ ಮಕ್ಕಳ ಸಮೀಕ್ಷೆಗೆ ಸಿದ್ಧತೆ

Published On :

ಕೂಡ್ಲಿಗಿ: ಶಾಲೆಯಿಂದ ಯಾವುದೇ ಮಗು ಹೊರಗುಳಿಯಬಾರದು ಎನ್ನುವ ಉದ್ದೇಶದಿಂದ ನವೆಂಬರ್‌ನಲ್ಲಿ ಶಾಲಾ ಮತ್ತು ಕುಟುಂಬ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ತಹಸೀಲ್ದಾರ್ ಜವರೇಗೌಡ ತಿಳಿಸಿದರು.
ಕೆಲ ಪ್ರದೇಶದಲ್ಲಿ ವಾಸಿಸುವ ಮಕ್ಕಳ ಸಹಜ ಜೀವನಕ್ಕೆ ಆತಂಕಗಳು ಇರುವುದರಿಂದ ಅಂತಹ ಪ್ರದೇಶಗಳಲ್ಲಿ ತುಂಬಾ ಸೂಕ್ಷ್ಮವಾಗಿ ಸಮೀಕ್ಷೆ ನಡೆಸಿ ಶಾಲೆ ವಂಚಿತ ಮಕ್ಕಳನ್ನು ಪುನಃ ಶಾಲೆಗೆ ಕರೆತರುವ ಕೆಲಸ ಆಗಬೇಕು ಎಂದು ತಿಳಿಸಿದರು.
ಅವರು ತಾಲೂಕು ಕಚೇರಿಯಲ್ಲಿ ನಡೆದ ಸಮಿಕ್ಷಾ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂತಹ ಸಮೀಕ್ಷೆ ಜಾಗೃತಿಗಾಗಿ ಗ್ರಾಮಗಳಲ್ಲಿ ಡಂಗುರ ಸಾರುವ ಮೂಲಕ ಪೋಷಕರಿಗೆ ಮನವರಿಕೆ ಮಾಡಿಕೊಡಲು ಮುಂದಾಗಬೇಕು. ತಾಲೂಕಿನ ಯಾವುದೇ ಶಾಲೆಯಿಂದ ಹೊರಗುಳಿದ 6ರಿಂದ 16 ವರ್ಷದ ಮಕ್ಕಳು ಮತ್ತೆ ಶಾಲೆಗೆ ಬರುವಂತಾಗಬೇಕು ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಮೈಲೇಶ್ ಬೇವೂರ ಮಾತನಾಡಿ, ತಾಲೂಕಿನಲ್ಲಿ ಇಪ್ಪತ್ತೊಂದು ವಲ್‌ನರೇಬಲ್ ಕ್ಲಸ್ಟರ್‌ಗಳೆಂದು ಗುರುತಿಸಲಾಗಿದೆ. ಈ ಪ್ರದೇಶದ ಪ್ರತಿ ಮನೆಯ ಕುಟುಂಬ ಸಮೀಕ್ಷೆ ನಡೆಸಲಾಗುವುದು. ಹಾಗೂ ಎರಡು ಕ್ಲಸ್ಟರ್‌ಗಳಲ್ಲಿ ಕೇವಲ ಶಾಲೆ ಬಿಟ್ಟ ಮಕ್ಕಳ ಕುಟುಂಬದ ಮನೆಗಳಿಗೆ ಮಾತ್ರ ಸಮೀಕ್ಷೆ ನಡೆಯಲಿದೆ. ಇದಕ್ಕಾಗಿ ಶಾಲಾ ಸಮೀಕ್ಷೆಗೆ 212 ಹಾಗೂ ಕುಟುಂಬ ಸಮೀಕ್ಷೆಗೆ 253 ತಂಡಗಳನ್ನು ಈಗಾಗಲೆ ರಚಿಸಲಾಗಿದೆ. ಅ. 31ರೊಳಗೆ ಸಮೀಕ್ಷಾದಾರರಿಗೆ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ಶಿಕ್ಷಣ ಇಲಾಖೆಯ ಸಮೀಕ್ಷಾ ಕಾರ್ಯಕ್ಕೆ ಎಲ್ಲ ಇಲಾಖೆಗಳು ಸಹಕಾರ ನೀಡುವಂತೆ ತಾಪಂ ಇಒ ಸೈಯದ್ ಹಜರತ್‌ಷಾ ಮನವಿ ಮಾಡಿದರು. ಸಭೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ವಿನಯ್, ಸಂಪನ್ಮೂಲ ವ್ಯಕ್ತಿ ಪ್ರದೀಪ್‌ಕುಮಾರ್, ಸಮಾಜ ಕಲ್ಯಾಣಾಧಿಕಾರಿ ಎನ್.ಎ.ಎಂ. ಮೂರ್ತಿ, ಬ್ಯಾಳಿ ವಿಜಯಕುಮಾರಗೌಡ  ಸೇರಿದಂತೆ ಪಪಂ, ಸಿಡಿಪಿಒ, ಗ್ರಾಪಂ ಪಿಡಿಒಗಳು, ಎನ್‌ಜಿಒಗಳ ಪದಾಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.