ಸಮಾಜಕ್ಕೆ ಧರ್ಮದ ತಳಹದಿ ಮುಖ್ಯ
ಕೂಡ್ಲಿಗಿ: ಸಮಾಜದಲ್ಲಿ ನೈತಿಕತೆ, ಶಾಂತಿ, ಮಾನವೀಯ ಮೌಲ್ಯಗಳು ನೆಲಸಲು ಧರ್ಮದ ತಳಹದಿ ಮುಖ್ಯವಾಗಿದ್ದು, ಮಹಾಭಾರತದಲ್ಲಿ ಶ್ರೀಕೃಷ್ಣ ನೂರಾರು ಕೌರವರ ಕಡೆಗೆ ನಿಲ್ಲದೆ ಪಂಚ ಪಾಂಡವರ ಕಡೆಯಾಗಿ ನಿಂತು ಧರ್ಮದ ಮಹತ್ವ ಸಾರಿದ್ದಾರೆ ಎಂದು ಕೂಡ್ಲಿಗಿ ಹಿರೇಮಠದ ಶ್ರೀ ಪ್ರಶಾಂತಸಾಗರ ಸ್ವಾಮೀಜಿ ತಿಳಿಸಿದರು.
ಅವರು ಶನಿವಾರ ಪಟ್ಟಣದ ಶ್ರೀ ಜ್ಞಾನಭಾರತಿ ಶಾಲೆಯಲ್ಲಿ ನಡೆದ ಕೃಷ್ಣಜನ್ಮಾಷ್ಟಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಾತ್ವಿಕತೆ, ಸಂಯಮ, ತ್ಯಾಗ, ಅಹಿಂಸೆ, ಪರೋಪಕಾರ ಗುಣಗಳನ್ನು ಮೈಗೂಡಿಸಿಕೊಳ್ಳಲು ಧರ್ಮದಿಂದಲೆ ನಡೆದುಕೊಳ್ಳಬೇಕಾಗಿದೆ. ಧರ್ಮ ಎಂದರೆ ಯಾವುದೆ ಜಾತಿಯಲ್ಲ, ಇಂದು ಧರ್ಮದ ಅರ್ಥ ತಿಳಿಯದ ಮೂಲಭೂತವಾದಿಗಳು ಧರ್ಮದ ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದು ದೇಶಕ್ಕೆ ಮಾರಕವಾಗಿದೆ. ಯಾವುದೇ ಧರ್ಮ ಇರಲಿ ಸಕಲರಿಗೂ ಒಳ್ಳೆಯದನ್ನೇ ಬಯಸುತ್ತದೆ ಹೊರತು, ಕೆಟ್ಟದ್ದನ್ನಲ್ಲ ಎಂಬುದನ್ನು ನಮ್ಮ ಯುವಪೀಳಿಗೆ ತಿಳಿದುಕೊಳ್ಳುವ ಅಗತ್ಯವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜ್ಞಾನಭಾರತಿ ಶಾಲಾ ಅಧ್ಯಕ್ಷ ಕೆ.ಎಂ. ತಿಪ್ಪೇಸ್ವಾಮಿ ಮಾತನಾಡಿದರು. ಪ್ರಾಚಾರ್ಯ ಜಾತಪ್ಪ, ವೀರಭದ್ರಪ್ಪ, ಗಂಗಾಧರ ಹಿರೇಮಠ, ವೃದ್ಧಾಶ್ರಮದ ಅಧೀಕ್ಷಕ ಕೆ.ಎಚ್. ಮಠದ್, ಮುಖ್ಯಗುರುಗಳಾದ ಜಿ. ಓಬಳೇಶ, ಗುಪ್ಪಲಾ ಕೊಟ್ರೇಶ್, ರಾಧಿಕಾ ಪ್ರಿಯದರ್ಶಿನಿ, ರೀಟಾ ಮುಂತಾದವರು ಉಪಸ್ಥಿತರಿದ್ದರು. ಚಂದ್ರಪ್ಪ ನಿರೂಪಿಸಿದರು. ಮಂಜುನಾಥ ಸ್ವಾಗತಿಸಿದರು. ಸವಿತಾ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

