ಯೋಜನೆಗಳಿಂದ ಬೋಧನೆಗೆ ಕುತ್ತು
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಸೆ. 4
ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ನಾನಾ ಯೋಜನೆಗಳನ್ನು ಜಾರಿಗೆ ತರುತ್ತಿರುವುದು ಸಂತೋಷದ ವಿಚಾರ, ಆದರೆ ಇವು ಶಿಕ್ಷಕರನ್ನು ಒತ್ತಡಗಳಿಗೆ ಸಿಲುಕಿಸಿ ಬೋಧನಾ ಶಕ್ತಿಯನ್ನು ಕುಂದಿಸುತ್ತದೆ ಎಂದು ಜಿಬಿಆರ್ ಕಾಲೇಜು ಪ್ರಾಧ್ಯಾಪಕ ಎಸ್.ಎಸ್. ಪಾಟೀಲ ಹೇಳಿದರು.
ಪಟ್ಟಣದ ಪಾಟೀಲ್ ಅನ್ನದಾನಗೌಡರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕಿ ಎನ್.ಡಿ. ರೇಖಾ ಅವರು ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದಿರುವ ಹಿನ್ನೆಲೆಯಲ್ಲಿ ಶಾಲಾ ದಾನಿಗಳಿಂದ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೋಧನೆ ಅಸಾಧ್ಯ: ಬದಲಾದ ಶೈಕ್ಷಣಿಕ ವ್ಯವಸ್ಥೆಯಿಂದ ಶಿಕ್ಷಕರಲ್ಲಿ ಉತ್ತಮ ಗುಣಮಟ್ಟದ ಬೋಧನೆ ಅಸಾಧ್ಯ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಜತೆಗೆ ವಿದ್ಯಾರ್ಥಿಗಳಲ್ಲಿ ವಿಕಸನ ಮೂಡಿಸುವ ಕೆಲಸ ಪ್ರಾಥಮಿಕ ಹಂತದಲ್ಲೇ ನಡೆಯಬೇಕಿದೆ. ಆಗ ಉತ್ತಮ ವಿದ್ಯಾರ್ಥಿಗಳನ್ನು ರಚನೆ ಮಾಡಲು ಸಾಧ್ಯ ಎಂದರು.
ಪ್ರಶಸ್ತಿ ಹಿಂದೆ ಬೀಳಬಾರದು: ಬಿಇಒ ಬಿ. ವಿಜಯಕುಮಾರ ಮಾತನಾಡಿ, ಉತ್ತಮ ವ್ಯಕ್ತಿಗಳಿಗೆ ಪ್ರಶಸ್ತಿಗಳು ಹುಡುಕಿಕೊಂಡು ಬರುತ್ತವೆ, ಆದರೆ ಪ್ರಶಸ್ತಿಯ ಹಿಂದೆ ಬೀಳಬಾರದು. ವ್ಯಕ್ತಿ ತನ್ನ ಕರ್ತವ್ಯ ಪ್ರಜ್ಞೆಯಿಂದ ಕೆಲಸ ನಿರ್ವಹಿಸಿದರೆ ಸಮಾಜ ಅಂಥವರನ್ನು ಗುರುತಿಸಿ ಸನ್ಮಾನಿಸುತ್ತದೆ. ಈ ಶಾಲೆಗೆ ಸರ್ಕಾರ ಸೌಲಭ್ಯಗಳನ್ನು ನೀಡಲು ಆಗುತ್ತಿಲ್ಲವೆಂಬ ನೋವು ಕಾಡುತ್ತಿದೆ. ಶಾಲಾ ಕಾಂಪೌಂಡ್ ನಿರ್ಮಾಣಕ್ಕೆ ರು. 1.70 ಲಕ್ಷ ಬಂದ ಅನುದಾನ ಬಳಸಲು ಅವಕಾಶವೇ ಇಲ್ಲ. ಕೊಠಡಿಗಳ ನಿರ್ಮಾಣಕ್ಕೆ ನಿವೇಶನವಿಲ್ಲ ಮತ್ತು ಶೌಚ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ನೀಡಲು ಆಗುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕಿ ಎನ್.ಡಿ. ರೇಖಾ, ಶ್ರಾವಣ ಮಾಸದಲ್ಲಿ ತವರು ಮನೆಯಿಂದ ನೀಡಿದ ಉಡುಗೊರೆ ಇದು ಎಂದು ಭಾವಿಸಿದ್ದೇನೆ. ನಾನು ಪ್ರಶಸ್ತಿ ಪಡೆಯುವ ಮುನ್ನವೆ ಶಾಲಾ ದಾನಿಗಳಿಂದ ಸನ್ಮಾನ ಸ್ವೀಕರಿಸುತ್ತಿರುವುದು ಹೆಚ್ಚು ಸಂತೋಷ ತಂದಿದೆ ಎಂದರು. ವಿಜಯಕುಮಾರ ಪಾಟೀಲ ಮಾತನಾಡಿದರು. ಶಾಲಾ ಮುಖ್ಯಶಿಕ್ಷಕಿ ಶೋಭಾ, ಶಿಕ್ಷಕ ನಾಗರಾಜ, ಶಿಕ್ಷಕಿಯರು ಇದ್ದರು.
ಶಿಕ್ಷಕರಿಗೆ ಸರ್ಕಾರ ನೀಡಿರುವ ಜವಾಬ್ದಾರಿಗಳನ್ನು ಸಮಯ ಪ್ರಜ್ಞೆಯಿಂದ ಪರಿಪಾಲನೆ ಜತೆಗೆ ವಿದ್ಯಾರ್ಥಿಗಳಲ್ಲಿ ಕಲಿಕಾ ಸಾಮರ್ಥ್ಯ ಹೆಚ್ಚಿಸಬೇಕು, ಕೆಲಸದಲ್ಲಿ ಆಸಕ್ತಿ, ಶ್ರದ್ಧೆ ಇಟ್ಟುಕೊಂಡು ಪಠ್ಯ ಚಟುವಟಿಕೆಗಳನ್ನು ಮಾಡುವ ಶಿಕ್ಷಕರಿಗೆ ತಾನಾಗಿಯೇ ಪ್ರಶಸ್ತಿಗಳು ಹುಡುಕಿಕೊಂಡು ಬರುತ್ತವೆ.
- ಎಸ್.ಎಸ್. ಪಾಟೀಲ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

