ಬಳ್ಳಾರಿ

ಕುಗ್ರಾಮದಲ್ಲೂ ಜನಪರ ಕಾಳಜಿ ಅಮೂಲ್ಯ

Published On :

ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಸೆ. 7
ತಾಲೂಕಿನ ಕಾನಾಮಡಗು ಗ್ರಾಮದ ಶ್ರೀ ಶರಣಬಸವೇಶ್ವರ ದಾಸೋಹ ಮಠಕ್ಕೆ ಶುಕ್ರವಾರ ರಾತ್ರಿ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ, ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಶಂಕರ್ ಬಿದರಿ ಭೇಟಿ ನೀಡಿ ಮೂಲ ಶರಣಾರ್ಯರ ಗದ್ದುಗೆಯ ದರ್ಶನಪಡೆದರು.
ಶ್ರೀ ಶರಣಬಸವೇಶ್ವರ ಸ್ವಾಮಿ ದರ್ಶನ ಪಡೆದ ಬಿದರಿ ಅವರನ್ನು ಮಠದ ಧರ್ಮಾಧಿಕಾರಿ ಶ್ರೀ ಐಮಡಿ ಶರಣಾರ್ಯರು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿದರಿ, ನಾಡಿನಲ್ಲಿ ನಿತ್ಯಾನ್ನ ದಾಸೋಹಕ್ಕೆ ಪ್ರಸಿದ್ಧಿ ಪಡೆದ ಮಠಗಳಲ್ಲಿ ಕಾನಾಮಡುಗು ದಾಸೋಹ ಮಠ ಪ್ರಮುಖವಾಗಿದೆ. ಕುಗ್ರಾಮದಲ್ಲೂ ಈ ಮಠ ಜನಪರ ಕಾಳಜಿ ಮೆರೆದಿರುವುದು ಅಮೂಲ್ಯವಾದುದು ಎಂದು ಹೇಳಿದರು.
2 ಶತಮಾನಗಳಿಂದ ಶ್ರೀಮಠ ಅನ್ನ ದಾಸೋಹಕ್ಕೆ ಹೆಸರಾಗಿದ್ದು, ಸ್ವಾತಂತ್ರ್ಯ ಪೂರ್ವದಿಂದಲೆ ಶೈಕ್ಷಣಿಕವಾಗಿ ಸೇವೆ ಸಲ್ಲಿಸುತ್ತಾ ಬಂದಿರುವುದು ಶ್ಲಾಘನೀಯ. ಕೋ. ಚನ್ನಬಸಪ್ಪ, ಹಿ.ಮ. ನಾಗಯ್ಯ, ಎಚ್.ಎಂ. ಮರುಳಸಿದ್ದಯ್ಯ ಅವರಂತ ಹೆಸರಾಂತ ವ್ಯಕ್ತಿಗಳನ್ನು ಕೊಡುಗೆಯಾಗಿ ನೀಡಿದ್ದು, ಸ್ಥಳೀಯವಾಗಿ ಗ್ರಾಮೀಣ ಭಾಗದ  ಸಹಸ್ರಾರು ಯುವಕರಿಗೆ ಶಿಕ್ಷಕರ ತರಬೇತಿ ನೀಡಿ ಮಠದಲ್ಲಿ ಆಶ್ರಯ ನೀಡಿ ನಾಡಿಗೆ ನೀಡಿರುವುದು ಶ್ರೇಷ್ಠ ಸಾಧನೆ ಎಂದು ಮಠದ ಹಿರಿಮೆಯನ್ನು ಕೊಂಡಾಡಿದರು.
ಈ ಸಂದರ್ಭದಲ್ಲಿ ಮಠದ ಮಾತೇಯರಾದ ಪಾರ್ವತಮ್ಮ, ಲಲಿತಮ್ಮ, ರೇಖಮ್ಮ, ಗ್ರಾಮದ ತಳವಾರ ಶರಣಪ್ಪ, ಮೂಗನಗೌಡ, ಗಂಗಣ್ಣ, ಎನ್. ಶರಣಪ್ಪ, ನಾಗರಾಜ, ಎ.ಜಿ. ದಿನೇಶ್, ಮಂಜಯ್ಯ, ಎನ್. ಶರಣಪ್ಪ, ರುದ್ರಪ್ಪ ಹಾಗೂ ಮಠದ ಶಿಕ್ಷಣ ಸಂಸ್ಥೆ ಸಿಬ್ಬಂದಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.