ಪಿಎಸ್ಐ ಆನಂದ್ಗೆ ಬೀಳ್ಕೊಡುಗೆ
ಕಂಪ್ಲಿ: ಕಂಪ್ಲಿ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸಿ, ಕೊಳ್ಳೆಗಾಲಕ್ಕೆ ವರ್ಗಾವಣೆಗೊಂಡ ಪಿಎಸ್ಐ ಎನ್. ಆನಂದ್ ಅವರನ್ನು ಗೌರವಿಸಿ ಬೀಳ್ಕೊಡಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪಿಎಸ್ಐ ಎನ್. ಆನಂದ್, ಈ ಭಾಗದ ಜನ ಹೃದಯ ವೈಶಾಲ್ಯತೆ ಹೊಂದಿದ್ದು, ಕಾನೂನನ್ನು ಗೌರವಿಸುತ್ತಾರೆ ಎಂದರು. ಡಿವೈಎಸ್ಪಿ ರಶ್ಮಿ ಪರಡ್ಡಿ ಮಾತನಾಡಿದರು. ಮುಖ್ಯ ಪೇದೆಯಾಗಿದ್ದ ಎಚ್.ಬಿ. ಹುಲುಗಪ್ಪ ಎಎಸ್ಐ ಆಗಿ ಬಡ್ತಿ ಹೊಂದಿರುವುದಕ್ಕೆ ಹಾಗೂ ಪಿ.ಸಿ. ಕೊಟ್ರೇಶ್ ಸೇರಿದಂತೆ 10 ಪಿಸಿಗಳು ವಿವಿಧೆಡೆ ವರ್ಗಾವಣೆಗೊಂಡಿದ್ದರಿಂದ ಅವರೆಲ್ಲರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಸಿಪಿಐ ಆರ್. ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು. ಜಮಾದಾರ್ ತಿಮ್ಮಪ್ಪ ಮಾತನಾಡಿದರು. ತಾಪಂ ಸದಸ್ಯ ವೆಂಕಟರಾಮರಾಜು, ಪುರಸಭೆ ಸದಸ್ಯ ಎಂ. ಸುದೀರ್, ಸಣ್ಣ ಹುಲುಗಪ್ಪ, ಡಾ.ವಿ.ಎಲ್. ಬಾಬು, ಭಟ್ಟ ಪ್ರಸಾದ್, ಮಾಜಿ ಅಧ್ಯಕ್ಷ ಅಯೋದಿ ವೆಂಕಟೇಶ, ಮಾಜಿ ಸದಸ್ಯರಾದ ಕೆ.ಎಂ. ಹೇಮಯ್ಯಸ್ವಾಮಿ, ಜಿ. ರಾಜರಾವ್, ವಿ. ವಿದ್ಯಾಧರ, ಯು. ರಾಮದಾಸ, ಬಳ್ಳಾರಿ ನಿರಂಜನಗುಪ್ತ, ಗ್ರಾಪಂ ಅಧ್ಯಕ್ಷ ಬಳ್ಳಾರಿ ಮಾರುತಿ, ಸದಸ್ಯ ಮಠದ ಮಲ್ಲಿಕಾರ್ಜುನ ಸ್ವಾಮಿ, ಮಾಜಿ ಅಧ್ಯಕ್ಷ ಬಿ. ನಾರಾಯಣಪ್ಪ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಿ. ಲಿಂಗನಗೌಡ, ಮುಖಂಡರಾದ ಕೆ. ಮನೋಹರ, ಟಿ. ಕೋಟಿರೆಡ್ಡಿ, ಡಿ. ಮೌನೇಶ್, ಶಾಂತಿಲಾಲ್ ಸಿಂಘ್ವಿ, ಮುರುಗೇಶ್, ವೈ. ಮುನಾಫ್, ಜವುಕು ಮಲ್ಲಿಕಾರ್ಜುನ, ಎಸ್. ಸುರೇಶ್, ಬಾವಿಕಟ್ಟೆ ದೇವೇಂದ್ರ, ಗೃಹರಕ್ಷಕ ದಳದ ಘಟಕಾಧಿಕಾರಿ ಪಿ. ಸುಬಾನ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

