ಶ್ರೀರಾಮುಲುಗೆ ಶಾಸಕ ಸ್ಥಾನ ಆಟದ ವಸ್ತು: ನಾಯ್ಕ
ಹಗರಿಬೊಮ್ಮನಹಳ್ಳಿ: 4 ವರ್ಷ ಬಾಕಿ ಇದ್ದರೂ ರಾಜಿನಾಮೆ ನೀಡಿ, ಲೋಕಸಭೆಗೆ ಸ್ಪರ್ಧಿಸಿದ ಬಿ. ಶ್ರೀರಾಮುಲು ಶಾಸಕ ಸ್ಥಾನವನ್ನು ಆಟದ ವಸ್ತುವೆಂದು ತಿಳಿದಿದ್ದಾರೆ. ಮತದಾರರ ತೀರ್ಪು ಧಿಕ್ಕರಿಸುವ ಇಂಥವರಿಗೆ ಜನತೆ ಪಾಠ ಕಲಿಸಬೇಕೆಂದು ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ತಿಳಿಸಿದರು. ತಾಲೂಕಿನ ತಂಬ್ರಹಳ್ಳಿಯಲ್ಲಿ ಮಂಗಳವಾರ ಮಧ್ಯಾಹ್ನ ಕಾಂಗ್ರೆಸ್ ಅಭ್ಯರ್ಥಿ ಎನ್.ವೈ. ಹನುಮಂತಪ್ಪ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರೆಡ್ಡಿ ಬ್ರದರ್ಸ್ನಿಂದ ಜಿಲ್ಲೆ ರಾಜಕಾರಣ ಅಸಹ್ಯಪಟ್ಟುಕೊಳ್ಳುವಷ್ಟು ಹದಗೆಟ್ಟಿದೆ. ಅದಕ್ಕೆ ಶ್ರೀರಾಮುಲು ಸಹ ಕಾರಣ. ನೈಸರ್ಗಿಕ ಸಂಪತ್ತು ಲೂಟಿ ಮಾಡಿದ ಹಣದಿಂದ ರಾಜಕೀಯ ಮಾಡುತ್ತಿರುವ ಇವರನ್ನು ಸೋಲಿಸಿ ಬುದ್ಧಿ ಕಲಿಸಬೇಕೆಂದರು. ಇದಕ್ಕೂ ಮುನ್ನ ತಾಲೂಕಿನ ಹಂಪಾಸಾಗರ, ಬನ್ನಿಗೋಳ, ಸಿಗೇನಹಳ್ಳಿ ಮುಂತಾದೆಡೆ ಮತ ಯಾಚಿಸಿದರು. ಅಭ್ಯರ್ಥಿ ಎನ್.ವೈ. ಹನುಮಂತಪ್ಪ, ಕೊಳೂರು ಬಸವನಗೌಡ, ಎಂ. ಕೊಟ್ರೇಶ್, ಎಸ್. ಕೃಷ್ಣಾ ನಾಯ್ಕ, ಬಿ.ವಿ. ಶಿವಯೋಗಿ, ಕಲ್ಲುಕಂಬ ಪಂಪಾಪತಿ, ಕೃಷ್ಣಾ, ಹಂಪಾಪಟ್ಟಣ ಭೀಮಪ್ಪ, ಎಚ್. ರಾಮಣ್ಣ, ಸೊನ್ನದ ಮಹೇಶ, ಬಿ. ದೇವಿಪ್ರಸಾದ್, ಹ್ಯಾಟಿ ವೆಂಕಣ್ಣ, ಎಣ್ಣಿ ಬಾಷಾ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

