ಬಳ್ಳಾರಿ

ಸ್ವಾಭಿಮಾನ ಬಿಟ್ಟ ಶ್ರೀರಾಮುಲು

Published On :

ಕೂಡ್ಲಿಗಿ: ಸ್ವಾಭಿಮಾನದ ಹೆಸರಿನಲ್ಲಿ ಬಡವರ, ಶ್ರಮಿಕರ, ರೈತರ ಪಕ್ಷವಾಗಿ ಬಿಎಸ್ಸಾರ್ ಸ್ಥಾಪಿಸಿದ ಶ್ರೀರಾಮುಲು ಸ್ವಾಭಿಮಾನ ಬಿಟ್ಟವರು. ಅವರನ್ನು ನಂಬಿ ರಾಜ್ಯಾದ್ಯಂತ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್ಸಾರ್ ಪಕ್ಷದಿಂದ ಸ್ಪರ್ಧಿಸಿದ್ದ 186  ಅಭ್ಯರ್ಥಿಗಳನ್ನು ಬೀದಿಪಾಲು ಮಾಡಿ ಸ್ವಾರ್ಥಕ್ಕೆ ಬಿಜೆಪಿ ಸೇರಿದ್ದಾರೆ ಎಂದು    ಮುಳಬಾಗಿಲು ಜಗದೀಶ ತಿಳಿಸಿದರು.
ಕೂಡ್ಲಿಗಿ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಶ್ರೀರಾಮುಲು ಲೂಟಿಕೋರತನ ಮರೆಮಾಚಲು, ಲೂಟಿ ಹೊಡೆದ ಸಂಪತ್ತು ರಕ್ಷಿಸಿಕೊಳ್ಳಲು ಬಿಜೆಪಿ ಸೇರಿದ್ದಾರೆ. ಅವರ ಕೀರ್ತಿಗೆ ಕಾರಣವಾಗಿದ್ದ ಬಿಎಸ್ಸಾರ್ ಕಾಂಗ್ರೆಸ್ ತೊರೆದಿದ್ದಾರೆ. ಬಿಜೆಪಿ ಸೇರುವಾಗ ಕನಿಷ್ಠ ಸೌಜನ್ಯಕ್ಕಾದರೂ ಕಾರ್ಯಕರ್ತರ ಜತೆ ಸಮಾಲೋಚನೆ ನಡೆಸಿಲ್ಲ. ಹಾಗಾಗಿ, ಅವರನ್ನು ನಂಬಿದ ಬಿಎಸ್ಸಾರ್ ಕಾಂಗ್ರೆಸ್‌ನ ಸಾವಿರಾರು ಕಾರ್ಯಕರ್ತರನ್ನು ಶ್ರೀರಾಮುಲು ಸಮಾಧಿ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗೆದ್ದಾಗಲೆಲ್ಲ ಪಟ್ಟಣದ ಜನತೆಯ ಅಭಿಮಾನ ನಿರ್ಲಕ್ಷಿಸಿ ಪದೇ ಪದೇ ರಾಜಿನಾಮೆ ನೀಡುವ ಶ್ರೀರಾಮುಲುಗೆ ಚುನಾವಣೆ ಗೊಂಬೆಯಾಟವಿದ್ದಂತಾಗಿದೆ. ಈ ಬಾರಿ ಶ್ರೀರಾಮುಲು ಅವರನ್ನು ಸೋಲಿಸಿ ಎಂದು ಜಿಲ್ಲಾದ್ಯಂತ ಪ್ರಚಾರ ಕೈಗೊಳ್ಳಲಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.
ಬೆಂಗಳೂರಿನ ಗಾಂಧಿನಗರ ನಾಗರಾಜ್, ಭದ್ರಾವತಿ ಬಾಲಕೃಷ್ಣ, ಚಿಕ್ಕನಾಯಕನಹಳ್ಳಿ ದೇವರಾಜ್, ಅರಕಲಗೂಡು ಮುರಳಿ, ಶ್ರವಣಬೆಳಗೊಳ ಪ್ರೇಮಾ, ಅರಬಾವಿ ಎಂ.ಎಸ್. ಪಾಟೀಲ್, ಗೋಕಾಕ್ ಬಸವರಾಜ, ಮುದ್ದೆಬಿಹಾಳ ನಾಗಪ್ಪಗೌಡ, ಹುಣಸೂರು ದೇವಪ್ಪ ನಾಯಕ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.