ಬಳ್ಳಾರಿ

ಸ್ಟಿಕ್ಕರ್ ಕಿತ್ತ ಸಾರಿಗೆ ಸಂಸ್ಥೆ ವಿರುದ್ಧ ಎಸಿಗೆ ದೂರು

Published On :

ಕನ್ನಡಪ್ರಭ ವಾರ್ತೆ, ಹೊಸಪೇಟೆ, ಏ. 16
ನಗರದ ಬಸ್ ನಿಲ್ದಾಣನಲ್ಲಿ ಮತ್ತು ಬಸ್‌ಗಳ ಮೇಲೆ ಚುನಾವಣೆ ಪ್ರಚಾರಕ್ಕಾಗಿ ಬಳ್ಳಾರಿ ಜಿಲ್ಲಾಡಳಿತ ಪ್ರಕಟಿಸಿದ್ದ ಸ್ಟಿಕ್ಕರ್‌ಗಳನ್ನು ಬಸ್‌ಗಳಿಗೆ ಅಂಟಿಸದೇ ಈಕರಸಾ ಸಂಸ್ಥೆ ಅಧಿಕಾರಿಗಳು ಬೇಜವಾಬ್ದಾರಿ ತೋರಿಸಿದ್ದು, ಸಾವಿರಾರು ಸ್ಟಿಕ್ಕರ್‌ಗಳನ್ನು ಬಸ್ ಸ್ಟ್ಯಾಂಡ್‌ನ ಟ್ರಾಫಿಕ್ ಕಂಟ್ರೋಲರ್ ಅಧಿಕಾರಿಗಳ ಕೋಣೆಯಲ್ಲಿ ಬೇಕಾಬಿಟ್ಟಿಯಾಗಿ ಬಿಸಾಕಲಾಗಿತ್ತು ಎಂದು ಭ್ರಷ್ಟಾಚಾರ ಮುಕ್ತ ಕರ್ನಾಟಕ ಸಂಘಟನೆ ಹೊಸಪೇಟೆ ಪದಾಧಿಕಾರಿಗಳು ಚುನಾವಣಾಧಿಕಾರಿ ಮತ್ತು ಸಹಾಯಕ ಆಯುಕ್ತ ಪಿ. ಸುನೀಲ್‌ಕುಮಾರ್ ಅವರಿಗೆ ಮೌಖಿಕ ದೂರು ನೀಡಿ ಒತ್ತಾಯಿಸಲಾಗಿದೆ.
ಸ್ಟಿಕ್ಕರ್‌ಗಳು ಸರಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಇದ್ದು, ಈ ಸ್ಟಿಕ್ಕರ್‌ಗಳನ್ನು ಎಲ್ಲ ಬಸ್‌ಗಳಿಗೆ ಅಂಟಿಸುವುದರ ಮೂಲಕ ಪ್ರಯಾಣಿಕರು ಚುನಾವಣೆಯಲ್ಲಿ ಮತ ಚಲಾಯಿಸಲಿ ಎಂಬ ಆಶಯದೊಳಗೆ ಜಿಲ್ಲಾಡಳಿತ ಲಕ್ಷಾಂತರ ರು. ಖರ್ಚು ಮಾಡಿ ಸ್ಟಿಕ್ಕರ್, ಕರಪತ್ರಗಳನ್ನು, ಟಿವಿ, ಪತ್ರಿಕೆಗಳಲ್ಲಿ, ಮೈಕ್, ಬೀದಿ ನಾಟಕಗಳ ಮೂಲಕ ಮತದಾರರಲ್ಲಿ ಚುನಾವಣಾ ಆಯೋಗ ಮತ್ತು ಜಿಲ್ಲಾಧಿಕಾರಿ ಆದೇಶದಂತೆ ಜಾಗೃತಿ ಮೂಡಿಸಲಾಗಿದೆ.
ನಿರ್ಲಕ್ಷ್ಯ ತೋರಿದ ಹೊಸಪೇಟೆಯ ಈಕರಸಾ ಸಂಸ್ಥೆ ಅಧಿಕಾರಿಗಳ ಮೇಲೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಭ್ರಷ್ಟಾಚಾರ ಮುಕ್ತ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಪ.ಯ. ಗಣೇಶ್, ಕಾರ್ಯದರ್ಶಿ ಎನ್. ಕಿರಣ್, ತಾಲೂಕು ಮುಖಂಡರಾದ ಡೇವಿಡ್, ವಡ್ರ ಸುರೇಶ್, ಹೇಮಣ್ಣ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.