ಮದ್ಯದಂಗಡಿ ಮುಂದೆ ದೊಡ್ಡ ಸಾಲು
ಕೊಟ್ಟೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮದ್ಯದಂಗಡಿಗಳನ್ನು ಬಂದ್ ಮಾಡಿಸುವಲ್ಲಿ ಯಶಸ್ವಿಯಾದ ಜಿಲ್ಲಾಡಳಿತದ ಕ್ರಮದಿಂದ ಮದ್ಯಪ್ರಿಯರು ಬಹಳಷ್ಟು ಬೇಸತ್ತು ಪುನಃ ಮದ್ಯದಂಗಡಿಗಳನ್ನು ತೆರೆಯುವುದನ್ನೇ ಕಾದುಕುಳಿತ ಪ್ರಸಂಗ ಪಟ್ಟಣದಲ್ಲಿ ಗುರುವಾರ ನಡೆಯಿತು. ಚುನಾವಣೆ ಮುನ್ನಾ ಎರಡು ದಿನದಿಂದ ಬಂದಾಗಿದ್ದ ಮದ್ಯದಂಗಡಿಗಳು ಮತದಾನ ಮುಗಿದ ಗುರುವಾರ ಸಂಜೆ 6ಗಂಟೆಯಿಂದ ತೆರೆಯಲು ಅವಕಾಶವಿತ್ತು.
ಮದ್ಯದಂಗಡಿ ಬಂದಾಗುವ ಮಾಹಿತಿ ಅರಿತ ಮದ್ಯಪ್ರಿಯರು ಸ್ವಲ್ಪ ಬುದ್ಧಿ ಉಪಯೋಗಿಸಿ ಎರಡು ದಿನಗಳಿಗಾಗುವಷ್ಟು ಮದ್ಯವನ್ನು ಖರೀದಿಸಿ ಮನೆಯಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದರು. ಇದರ ಗೋಜಿಗೆ ಹೋಗದೇ ದಿನ ಮದ್ಯದಂಗಡಿಯಿಂದಲೇ ಖರೀದಿಸುವುದನ್ನು ರೂಢಿಮಾಡಿಕೊಂಡ ಬಹುತೇಕರು ಗುರುವಾರ ಸಂಜೆ 6 ಗಂಟೆಯಾಗುವುದನ್ನೇ ಕಾಯತೊಡಗಿದ್ದರು. ಇದಕ್ಕಾಗಿ ಪಟ್ಟಣದ ಮದ್ಯಪ್ರಿಯರು ಗುರುವಾರ ಮಧ್ಯಾಹ್ನ 4 ಗಂಟೆಯಿಂದಲೇ ಇಲ್ಲಿನ ವೆಂಕಟೇಶ್ವರ ವೈನ್ಶಾಪ್ ಬಳಿ ಅಧಿಕ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಗುಂಪುಗುಂಪಾಗಿ ಕಂಡುಬಂದ ಈ ಜನತೆಯಲ್ಲಿ ಯಾವಾಗ ಶಾಪ್ ತೆರೆಯುತ್ತಾರೋ, ಆಗ ಮುಗಿಬಿದ್ದು ಮದ್ಯವನ್ನು ಖರೀದಿಸುವ ತವಕ ವ್ಯಕ್ತಪಡಿಸುತ್ತಿದ್ದರು. ಸರ್ಕಾರ ಮದ್ಯದಂಗಡಿಯನ್ನು ಮತದಾನ ಮುಗಿದ 6 ಗಂಟೆ ನಂತರ ಪುನಃ ತೆರೆಯಲು ಪರವಾನಗಿಯನ್ನು ತಮಗೆ ನೀಡಿದೆ. ಆದರೂ 1 ಗಂಟೆ ತಡವಾಗಿ 6 ಗಂಟೆ ಬದಲಾಗಿ 7 ಗಂಟೆಗೆ ತೆರೆಯುವ ತೀರ್ಮಾನ ಕೈಗೊಂಡಿದ್ದೇವೆ ಎಂದು ಮದ್ಯದಂಗಡಿ ಮಾಲೀಕ ಕೇಶವ ಕನ್ನಡಪ್ರಭಕ್ಕೆ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

