ಟ್ರಕ್ ಟರ್ಮಿನಲ್ ಕಾಮಗಾರಿ ಶೀಘ್ರ: ಚೆನ್ನಾರಡ್ಡಿ
ಹೊಸಪೇಟೆ: ನಗರದ ಹೊರವಲಯದಲ್ಲಿ ಟ್ರಕ್ ಟರ್ಮಿನಲ್ ಕಾಮಗಾರಿ ಶೀಘ್ರ ಕೈಗೊಳ್ಳುವುದಾಗಿ ಬೆಂಗಳೂರಿನ ಡಿ.ದೇವರಾಜು ಅರಸ್ ಟ್ರಕ್ ಟರ್ಮಿನಲ್ ನಿರ್ದೇಶಕ ಚೆನ್ನಾರೆಡ್ಡಿ ಹೇಳಿದರು. ನಗರದ ಹೊರವಲಯದ ಟ್ರಕ್ ಟರ್ಮಿನಲ್ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದರು. ಸಂಪರ್ಕ ರಸ್ತೆಗಾಗಿ ರಾಷ್ಟ್ರೀಯ ಹೆದ್ದಾರಿಗೆ ಪತ್ರ ಬರೆದು ಒತ್ತಾಯಿಸಿದ್ದರಿಂದ ಸಂಪರ್ಕ ರಸ್ತೆ ನಿರ್ಮಿಸಲು ಮುಂದೆ ಬಂದಿದ್ದಾರೆ. ತಕ್ಷಣ ಕಾಮಗಾರಿ ಆರಂಭಿಸಬೇಕು ಎಂದರು. ಹೊಸಪೇಟೆ ಟ್ರಾನ್ಸ್ಪೋರ್ಟ್ ಮತ್ತು ಏಜೆಂಟ್ಸ್ ಅಸೋಸಿಯೇಶನ್ ಉಪಾಧ್ಯಕ್ಷ ಅಲ್ಲಾಭಕ್ಷಿ, ಕಾರ್ಯದರ್ಶಿ ಬಿ. ರಾಮಣ್ಣ, ಸದಸ್ಯ ಹಾಗೂ ನಗರಸಭೆ ಸದಸ್ಯ ಚಂದ್ರಕಾಂತ ಕಾಮತ್, ನಿರ್ದೇಶಕ ರಮೇಶ್ ಇದ್ದರು.
ನಾಳೆ ಉಚಿತ ಖತ್ನಾ ಶಿಬಿರ
ಗಂಗಾವತಿ: ನಗರದ ಕೆಎಸ್ಡಿ ಶಿಕ್ಷಣ ಮತ್ತು ಕಲ್ಯಾಣ ಟ್ರಸ್ಟ್ ವತಿಯಿಂದ ಏ. 28ರಂದು ಶಾದಿಮಹಲ್ನಲ್ಲಿ ಬಡ ಹಾಗೂ ಗ್ರಾಮೀಣ ಮುಸ್ಲಿಂ ಬಾಂಧವರ ಮಕ್ಕಳಿಗೆ ಉಚಿತ ಖತ್ನಾ (ಮುಂಜಿ) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಅನ್ವರ ಹುಸೇನ್ ಹೇಳಿದರು. ಅವರು ನಗರದ ಮೀಡಿಯಾ ಕ್ಲಬ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೆಎಸ್ಡಿ ಸಂಸ್ಥೆ ವತಿಯಿಂದ ಈಗಾಗಲೇ ಅರಬ್ಬಿ ಮದರಸಾ ಸ್ಥಾಪನೆ ಮಾಡಿ ಅರ್ಹರಿಗೆ ಉರ್ದು ಅರಬ್ಬಿ ಶಿಕ್ಷಣ ಹಾಗೂ ಉಚಿತ ಪಠ್ಯಪುಸ್ತಕ ನೀಡಲಾಗುತ್ತಿದೆ. ಏ. 28ರಂದು ಸುಮಾರು ನೂರು ಮಕ್ಕಳಿಗೆ ಉಚಿತ ಮುಂಜಿ ಶಿಬಿರ ನಡೆಸಲಾಗುತ್ತದೆ. ಆಸಕ್ತರು ಸದುಪಯೋಗ ಪಡೆದುಕೊಳ್ಳಬೇಕು. ಶಿಬಿರವನ್ನು ಶಾಸಕ ಇಕ್ಬಾಲ್ ಅನ್ಸಾರಿ, ನಗರಸಭೆ ಅಧ್ಯಕ್ಷ ಶಾಮೀದ ಮನಿಯಾರ್ ಉದ್ಘಾಟನೆ ಮಾಡಲಿದ್ದಾರೆ. ಡಾ. ಜಿಬೇರ್ ಅಹಮ್ಮದ್, ಜಾಫರ್, ಅಲಿಖಾನ, ಖಾಜವಲಿ ಸೇರಿ ತಜ್ಞ ವೈದ್ಯರು ಆಗಮಿಸಲಿದ್ದಾರೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

