ಶಾಶ್ವತ ಕುಡಿಯುವ ನೀರು ಒದಗಿಸಿ
ಹೊಸಪೇಟೆ: ನಗರದಲ್ಲಿ ಶಾಶ್ವತ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿ ಇಲ್ಲಿನ ಸ್ಲಂ ಜನಾಂದೋಲನ-ಕರ್ನಾಟಕ, ಹೊಸಪೇಟೆ ಸ್ಲಂ ಜನಜಾಗೃತಿ ಆಂದೋಲನ ಸಮಿತಿ, ಮಹಿಳಾ ಘಟಕ ಶುಕ್ರವಾರ ನಗರಸಭೆ ಮುಂದೆ ಪ್ರತಿಭಟನೆ ನಡೆಸಿ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು. ಪ್ರತಿಭಟನಾ ಸಭೆ ಉದ್ದೇಶಿಸಿ ಸ್ಲಂ ಜನಾಂದೋಲನ- ಕರ್ನಾಟಕ, ಸ್ಲಂ ಜನಜಾಗೃತಿ ಅಂದೋಲನ ಸಮಿತಿ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ. ರಾಮಚಂದ್ರ ಮಾತನಾಡಿ, ನಗರದಲ್ಲಿ ಮುಖ್ಯವಾಗಿ ಆಶ್ರಯ ಕಾಲೊನಿ, ಸಿರುಸಿನಕಲ್ಲು, ವರಕೇರಿ, ಸ್ಟೇಷನ್ ರಸ್ತೆ (ಮಸೀದ್ ಹಿಂಭಾಗ) ಮಲ್ಲಮ್ಮನಗದ್ದೆ, ಊರಮ್ಮನಬೈಲು, ಪ್ರೇಮನಗರ ಈ ಸ್ಲಂಗಳಲ್ಲಿ ಹೆಚ್ಚಿನ ಸಮಸ್ಯೆ ಕಾಣುತಿದ್ದೇವೆ ಎಂದರು. ಹೊಸಪೇಟೆ ಸ್ಲಂ ಸಮಿತಿ ಪ್ರಧಾನ ಕಾರ್ಯದರ್ಶಿ ಎನ್. ಹುಲಿಗೆಮ್ಮ, ಖಜಾಂಚಿ ರಾಮಚಂದ್ರ, ಸಂಚಾಲಕ ಹನುಮಂತರಾಯ, ಸಂಘಟನಾ ಸಂಚಾಲಕಿ ವೆಂಕಮ್ಮ ಇತರರಿದ್ದರು.
ಕ್ರೀಡಾ ಮನೋಭಾವವಿರಲಿ
ಹನುಮಸಾಗರ: ಯುವಕರು ಶಿಸ್ತು, ಸಮಯ ಪ್ರಜ್ಞೆ ಅಳವಡಿಸಿಕೊಳ್ಳುವುದರ ಜತೆಗೆ ಕ್ರೀಡಾ ಮನೋಭಾವನೆಯಿಂದ ಆಟವಾಡಿದಾಗ ಯಶಸ್ಸು ಸಾಧ್ಯ ಎಂದು ಉದ್ಧಿಮೆದಾರ ಉಸ್ಮಾನ್ ಗಣೆ ಅಭಿಪ್ರಾಯಪಟ್ಟರು. ಅವರು ಇಲ್ಲಿನ ಎಪಿಎಂಸಿ ಆವರಣದಲ್ಲಿ ನಡೆದ ಎಚ್ಸಿಎಲ್ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ತಾಲೂಕು ಯೂತ್ ಕಾಂಗ್ರೇಸ್ ಘಟಕಾಧ್ಯಕ್ಷ ಮಹಾಂತೇಶ, ಬಿಜೆಪಿ ಪ್ರಮುಖ ಬಸವರಾಜ ಹಳ್ಳೂರ, ನಾರಾಯಣಸಾ ಸಾಕ್ರೆ, ಅಣ್ಣಪ್ಪ, ಶರಣಪ್ಪ ವಡ್ಡರ್, ದೈಹಿಕ ಶಿಕ್ಷಕ ಅಬ್ದುಲ್ಕರೀಂ ವಂಟೇಳಿ, ಕಾಂಗ್ರೆಸ್ ಮುಖಂಡ ಸೂಚಪ್ಪ ಬೊವಿ, ಬಾಬುಮಿಯಾ ಚೌದರಿ, ಗ್ರಾ.ಪಂ. ಸದಸ್ಯ ಚಂದ್ರು ಹಿರೇಮನಿ, ದುರ್ಗಪ್ಪ ಮಡಿವಾಳರ, ಶಿವುಪುತ್ರಪ್ಪ ಕಂಪ್ಲಿ, ನಜೀರಸಾಬ್ ಮೂಲಿಮನಿ, ಶಿವು ಮೇಲ್ಸಕ್ಕರಿ, ಶ್ರೀಶೈಲ ಮೊಟಗಿ ಸೇರಿದಂತೆ ಕ್ರಿಕೆಟ್ ತಂಡದ ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

