ದೇಸಿ ಕ್ರೀಡೆಗಳ ಬೆಳೆಸಿ
ಹೊಸಪೇಟೆ: ಮನುಷ್ಯನ ಸರ್ವಾಂಗೀಣ ಅಭಿವೃದ್ಧಿಗೆ ದೇಸಿ ಕ್ರೀಡೆಗಳು ಸಹಕಾರಿ ಎಂದು ಸ್ಥಳೀಯ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಕಡ್ಲಬಾಳ ಪನ್ನಂಗಧರ ಹೇಳಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 2013-14ನೇ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆ ಸಮಾರೋಪ ಸಮಾರಂಭದಲ್ಲಿ ದೇಸಿ ಕ್ರೀಡಾ ಸಂಭ್ರಮ ಆಟೋಟಗಳ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ವಿದೇಶಿ ಕ್ರೀಡೆಗಳೇ ಪ್ರಾಧಾನ್ಯತೆ ಪಡೆದು ಗ್ರಾಮೀಣ ಕ್ರೀಡೆಗಳು ಮರೆಯಾಗುತ್ತಿವೆ. ಮನುಷ್ಯನ ಬುದ್ಧಿ ಮತ್ತು ಬಲದ ಸಮತೋಲನ ಕಾಯ್ದುಕೊಳ್ಳುವಲ್ಲಿ ಹಗ್ಗ ಜಗ್ಗುವ ಆಟ, ಸಂಗೀತ ಕುರ್ಚಿ ಆಟ, ನಿಂಬೆ ಹಣ್ಣಿನ ಓಟ, ಲಗೋರಿ, ಕುಂಟೆಬಿಲ್ಲೆ ಆಟ ಮೊದಲಾದ ದೇಸಿ ಆಟಗಳು ತುಂಬಾ ಉತ್ತೇಜನಕಾರಿ. ಈ ಕ್ರೀಡೆಗಳನ್ನು ಪ್ರತಿಯೊಬ್ಬರೂ ಪ್ರೋತ್ಸಾಹಿಸಬೇಕೆಂದರು.
ವಿದ್ಯಾರ್ಥಿಗಳು, ಯುವಕರು ತಮ್ಮ ನೆನಪಿನ ಶಕ್ತಿ ಪರೀಕ್ಷೆಯನ್ನು ಹೆಚ್ಚಿಸಿಕೊಳ್ಳಲು ಇವು ಅಗತ್ಯ. ಚಿತ್ರಕ್ಕೆ ಬಿಂದಿ ಹಚ್ಚುವುದು, ಹೂವು ಕಟ್ಟುವುದು ಮುಂತಾದ ದೇಸಿ ಆಟಗಳನ್ನು ಸ್ನೇಹಿತರೊಂದಿಗೆ ಆಡುವಾಗ ಮತ್ತು ಸ್ಪರ್ಧೆಯಲ್ಲಿ ತೊಡಗಿದಾಗ ಅತ್ಯಂತ ಉತ್ಸಾಹದಿಂದ ಭಾಗವಹಿಸಿ ದೇಸಿ ಕ್ರೀಡೆಗಳನ್ನು ಬೆಳೆಸಬೇಕೆಂದರು.
ಕಾಲೇಜಿನ ಸಾಂಸ್ಕೃತಿಕ ಚಟುವಟಿಕೆ ಕಾರ್ಯದರ್ಶಿ ಡಾ. ಬಿ.ಜಿ. ಕನಕೇಶಮೂರ್ತಿ, ಕ್ರೀಡಾ ಸಂಚಾಲಕ ಡಿ.ಎಂ. ಮಲ್ಲಿಕಾರ್ಜುನಯ್ಯ, ಸಮಾಜಶಾಸ್ತ್ರ ಸಹ ಪ್ರಾಧ್ಯಾಪಕ ಡಿ.ಡಿ. ಮುತಾಲಿಕ್ ದೇಸಾಯಿ, ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಡಾ. ಕೆ. ವೆಂಕಟೇಶ್, ಇಂಗ್ಲಿಷ್ ಸಹಾಯಕ ಪ್ರಾಧ್ಯಾಪಕ ಟಿ.ಎಚ್. ಬಸವರಾಜ, ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಡಾ. ಕೆ. ಸಿದ್ದಪ್ಪ, ಟಿ.ವಿ. ವಾರುಣಿ, ಪಿ.ಸಿ. ರೂಪಾ, ಅತಿಥಿ ಉಪನ್ಯಾಸಕರಾದ ಡಾ. ಜೆ. ವಿಜಯಲಕ್ಷ್ಮೀ, ಡಾ. ತ್ರಿವೇಣಿ, ಕುಸುಮಾ ರಾಜಶೇಖರ್, ಅಕ್ಕಿ ಮಲ್ಲಿಕಾರ್ಜುನ, ಮೋಹನ್ ಪಾಟೀಲ್, ಇ.ಎಸ್. ಸರಸ್ವತಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

