ಬಳ್ಳಾರಿ

ದಾಂಪತ್ಯ ಜೀವನಕ್ಕೆ ಕಾಲಿಟ್ಟ 13 ಜೋಡಿ

Published On :

ಹೂವಿನಹಡಗಲಿ: ಪಟ್ಟಣದ ಶ್ರೀ ಗವಿಸಿದ್ಧೇಶ್ವರರ 19ನೇ ವರ್ಷದ ಜಾತ್ರೆ ಹಾಗೂ ರಥೋತ್ಸವ ಪ್ರಯುಕ್ತ ಗುರುವಾರ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 13 ಜೋಡಿ ವಧು-ವರರು ನವ ದಾಂಪತ್ಯಕ್ಕೆ ಕಾಲಿಟ್ಟರು.
ಸಾಮೂಹಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ನೀಲಗುಂದ ವಿರಕ್ತಮಠದ ಚನ್ನಬಸವ ಶಿವಯೋಗಿ ಮಾತನಾಡಿ, ಮಠಗಳು ಜಾತ್ರೆ ಸಂದರ್ಭದಲ್ಲಿ ಇಂತಹ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಂಡು ಬಡವರಿಗೆ ನೆರವಾಗುವ ಪುಣ್ಯದ ಕೆಲಸ ಮಾಡುತ್ತಿವೆ ಎಂದರು.
ಇಂತಹ ದುಬಾರಿ ದಿನಗಳಲ್ಲಿ ಬಡ ಕುಟುಂಬಗಳಿಗೆ ಮದುವೆ ಮಾಡುವುದು ಬಹು ದೊಡ್ಡ ಹೊರೆಯಾಗಿದ್ದು, ಅನವಶ್ಯಕ ವೆಚ್ಚಗಳಿಗೆ ಕಡಿವಾಣ ಹಾಕುವ ಮೂಲಕ ಸರಳ ರೀತಿಯ ಮದುವೆಗಳಿಗೆ ಮಾನ್ಯತೆ ನೀಡಿ, ಮಠ ಮಾನ್ಯಗಳ ಇಂತಹ ಸಾಮೂಹಿಕ ವಿವಾಹ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಂಡು ಉತ್ತಮ ಜೀವನ ಸಾಗಿಸಿ ಎಂದು ಆಶೀರ್ವಚನ ನೀಡಿದರು.
ಗವಿಮಠದ ಹಿರಿಶಾಂತವೀರ ಸ್ವಾಮೀಜಿ ಮಾತನಾಡಿ, ನವ ವಧು- ವರರು ಭವಿಷ್ಯತ್ತಿನ ಬದುಕಿನಲ್ಲಿ ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ, ಮನೆಯಲ್ಲಿನ ಗುರು ಹಿರಿಯರನ್ನು ಗೌರವದಿಂದ ಕಂಡು ಅವರ ಪ್ರೀತಿಗೆ ಪಾತ್ರರಾಬೇಕೆಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಸ್ವಾಮೀಜಿ, ಕುರುಬಗೊಂಡ ಪ್ರವಚನಕಾರ ಪಂಚಾಕ್ಷರಿ ಹಿರೇಮಠ, ಮಾಂಗಲ್ಯ ದಾನಿ ಎಪಿಎಂಸಿ ಮಾಜಿ ಅಧ್ಯಕ್ಷ ಪಿ. ವಿಜಯಕುಮಾರ, ಕಾಲುಂಗುರ, ಕಡಗ, ದಂಡೆ ಬಾಸಿಂಗ ದಾನಿ ಕರೆಎತ್ತಿನ ಸೋಮಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.