ಹಗರಿಬೊಮ್ಮನಹಳ್ಳಿ ಕೋರ್ಟ್ಗೆ ಹೈಕೋರ್ಟ್ ನ್ಯಾಯಾಧೀಶರ ಭೇಟಿ
ಹಗರಿಬೊಮ್ಮನಹಳ್ಳಿ: ಹೈಕೋರ್ಟ್ ನ್ಯಾಯಾಧೀಶ ಹಾಗೂ ಬಳ್ಳಾರಿ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ಅಶೋಕ ಬಿ. ಹಿಂಚಿಗೇರಿ ಭಾನುವಾರ ಮಧ್ಯಾಹ್ನ ಇಲ್ಲಿನ ಕಿರಿಯ ಶ್ರೇಣಿ ನ್ಯಾಯಾಲಯಕ್ಕೆ ಭೇಟಿ, ಈಗಿನ ಕೋರ್ಟ್ ಆವರಣದಲ್ಲಿ ಹಿರಿಯ ಶ್ರೇಣಿಯ ನ್ಯಾಯಾಲಯ ಸ್ಥಾಪನೆಗೆ ಅಗತ್ಯವಿರುವ ಸ್ಥಳ ಪರಿಶೀಲನೆ ಮಾಡಿದರು.
ಕೋರ್ಟ್ ಆವರಣದಲ್ಲಿ ಕಕ್ಷಿದಾರರಿಗೆ ಶೌಚಾಲಯ, ರಕ್ಷಣಾ ಗೋಡೆ, ಕ್ಯಾಂಟಿನ್, ವಾಹನ ನಿಲುಗಡೆಗೆ ಸ್ಥಳ ಹಾಗೂ ವಕೀಲರ ಸಂಘದ ಕಚೇರಿ ಸೇರಿದಂತೆ ನಾನಾ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಅಗತ್ಯ ಕ್ರಿಯಾಯೋಜನೆ ಸಿದ್ಧಪಡಿಸಿ ಕಳುಹಿಸುವಂತೆ ಸ್ಥಳದಲ್ಲಿ ಹಾಜರಿದ್ದ ಲೋಕೋಪಯೋಗಿ ಇಲಾಖೆ ಇಇಗೆ ಆದೇಶಿಸಿದರು.
ವಕೀಲರ ಸಂಘದ ಅಧ್ಯಕ್ಷೆ ಎಚ್.ಎಸ್. ವಿಶಾಲಾಕ್ಷೀ ಬಾಪೂಜಿ ಅವರ ನೇತೃತ್ವದಲ್ಲಿ ಪಟ್ಟಣದಲ್ಲಿ ಹಿರಿಯ ಶ್ರೇಣಿ ನ್ಯಾಯಾಲಯ ಸ್ಥಾಪನೆಗಾಗಿ ನ್ಯಾಯಾಧೀಶರಿಗೆ ಮನವಿ ಮಾಡಿಕೊಳ್ಳಲಾಗಿತ್ತು. ಭಾನುವಾರ ಭೇಟಿ ನೀಡಿದ ಹೈಕೋರ್ಟ್ ನ್ಯಾಯಾಧೀಶರು, ಹಾಲಿ ಕೋರ್ಟ್ ಕಟ್ಟಡದ ಮೇಲಿನ ಅಂತಸ್ತಿನಲ್ಲಿ ಹಿರಿಯ ಶ್ರೇಣಿ ನ್ಯಾಯಾಲಯ ಸ್ಥಾಪಿಸಲು ಸ್ಥಳ ಪರಿಶೀಸಿದರು. ಇದೇ ವೇಳೆ ಸ್ಥಳೀಯ ಕೋರ್ಟ್ಗೆ ಕಾಯಂ ನ್ಯಾಯಾಧೀಶರ ನೇಮಕಕ್ಕೆ ಸಂಘದ ಸದಸ್ಯರು ಮನವಿ ಮಾಡಿಕೊಂಡರು.
ಜಿಲ್ಲಾ ಪ್ರಧಾನ ನ್ಯಾಯಾಧೀಶ ಡಿ. ವಿಶ್ವೇಶ್ವರ ಭಟ್, ಹೊಸಪೇಟೆ ನ್ಯಾಯಾಧೀಶ ಸಿದ್ದಪ್ಪ ಪ್ರಭು ಹತ್ತಿಕಾಳು, ಸಿರುಗುಪ್ಪ ನ್ಯಾಯಾಧೀಶ ಮುಸ್ಕಿನ್, ಲೋಕೋಪಯೋಗಿ ಇಲಾಖೆ ಇಇ ಎಚ್. ಯಮನೂರಪ್ಪ, ಎಇ ಪ್ರಭಾಕರ ಶೆಟ್ಟಿ, ವಕೀಲರ ಸಂಘದ ಅಧ್ಯಕ್ಷೆ ಎಚ್.ಎಸ್. ವಿಶಾಲಾಕ್ಷೀ ಬಾಪೂಜಿ, ಪ್ರಧಾನ ಕಾರ್ಯದರ್ಶಿ ಎಚ್. ಸತ್ಯನಾರಾಯಣ, ಜಿ. ಗಂಗಾಧರ, ಜಗದೀಶ, ಬಸಣ್ಣ, ಪೂಜಾರ ರಮೇಶ, ಸುಭಾಶ್ ನಾಯ್ಕ, ಶಿವಪ್ರಕಾಶ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

