ಹಂಪಿ ಉತ್ಸವ 2014: ವಿವಿಧ ಕ್ರೀಡಾ ಸ್ಪರ್ಧೆಗಳಿಗೆ ಆಹ್ವಾನ
ಬಳ್ಳಾರಿ: ಹಂಪಿ ಉತ್ಸವ 2014ರ ಅಂಗವಾಗಿ ಜ. 10ರಿಂದ ಕ್ರೀಡಾ ಸ್ಪರ್ಧೆಗಳನ್ನು ನಡೆಸಲಾಗುವುದು. ಆಸಕ್ತ ಕ್ರೀಡಾಪಟುಗಳು ತಮ್ಮ ಹೆಸರನ್ನು ನಿಗದಿತ ದಿನಾಂಕದಂದು ಹೊಸಪೇಟೆ ಸಹಾಯಕ ಆಯುಕ್ತರ ಕಚೇರಿಯಲ್ಲಿಯರುವ ಹಂಪಿ ಉತ್ಸವ ಶಾಖೆಯಲ್ಲಿ ನೋಂದಾಯಿಸಬೇಕೆಂದು ಡಿಸಿ ಅಮ್ಲಾನ್ ಆದಿತ್ಯ ಬಿಸ್ವಾಸ್ ತಿಳಿಸಿದ್ದಾರೆ.
ಜ. 10ರಂದು ಗಾಳಿಪಟ ಹಾರಾಟ ಪ್ರದರ್ಶನ (ಅತಿ ಎತ್ತರ), ಗಾಳಿಪಟ ಹಾರಾಟ ಪ್ರದರ್ಶನ (ಅತಿ ಸುಂದರ), ಅಂತಾರಾಷ್ಟ್ರೀಯ ಶಿಲಾರೋಹಣ (ಪುರುಷ, ಮಹಿಳೆ), ಏರ್ ರೈಫಲ್ ಶೂಟಿಂಗ್ (ಪುರುಷ, ಮಹಿಳೆ), 11ರಂದು ಗಾಳಿಪಟ ಹಾರಾಟ ಪ್ರದರ್ಶನ (ಅತಿ ಚಿಕ್ಕ), ಗಾಳಿಪಟ ಹಾರಾಟ ಪ್ರದರ್ಶನ (ಅತಿ ಉದ್ದ), ಮೀನುಗಾರರ ತೆಪ್ಪ ತೇಲಿಸುವ ಓಟ, ಬಿಲ್ಲುಗಾರಿಕೆ (ಹಂಪಿ ಅರ್ಜುನ(ಪುರುಷ, ಮಹಿಳೆ), 12ರಂದು ಗಾಳಿಪಟ ಹಾರಾಟ ಪ್ರದರ್ಶನ (ಹೆಚ್ಚು ಸರಣಿ), ಗಾಳಿಪಟ ಹಾರಾಟ (ಗಾಳಿಪಟ ಸಮರ), ಕ್ರಾಸ್ ಕಂಟ್ರಿ ಸೈಕ್ಲಿಂಗ್ ಸ್ಪರ್ಧೆ (ಗೇರ್ ಸಹಿತ), ಕ್ರಾಸ್ ಕಂಟ್ರಿ ಸೈಕ್ಲಿಂಗ್ ಸ್ಪರ್ಧೆ (ಗೇರ್ ರಹಿತ)ಗಳು ನಡೆಯಲಿವೆ.
ಗಾಳಿಪಟ ಹಾರಾಟ ಪ್ರದರ್ಶನವು ರಾಣಿ ಸ್ನಾನ ಗೃಹದ ಪಕ್ಕದಲ್ಲಿ ನಿಗದಿತ ದಿನಾಂಕಗಳಂದು ನಡೆಯಲಿದೆ. ಅತಿ ಎತ್ತರ, ಅತಿ ಚಿಕ್ಕ, ಸರಣಿ ಸ್ಪರ್ಧೆಗಳು ಬೆಳಗ್ಗೆ 9ಕ್ಕೆ ಆರಂಭವಾಗಲಿದ್ದು, ಸ್ಪರ್ಧಾಳುಗಳು ಬೆಳಗ್ಗೆ 8ಕ್ಕೆ ವರದಿ ಮಾಡಿಕೊಳ್ಳಬೇಕು. ಗಾಳಿಪಟ ಹಾರಾಟದಲ್ಲಿ ಅತಿ ಸುಂದರ, ಅತಿ ಉದ್ದ ಹಾಗೂ ಸಮರ ಸ್ಪರ್ಧೆ ಮಧ್ಯಾಹ್ನ 3ರಿಂದ ಆರಂಭವಾಗಲಿದ್ದು, ಕ್ರೀಡಾಪಟುಗಳು ಮಧ್ಯಾಹ್ನ 2ಕ್ಕೆ ವರದಿ ಮಾಡಿಕೊಳ್ಳಬೇಕು. ಶಿಲಾರೋಹಣ ಸ್ಪರ್ಧೆ ಬಸವಣ್ಣ ಮಂಟಪದ ಬಳಿ ಬೆಳಗ್ಗೆ 7ಕ್ಕೆ ನಡೆಯಲಿದ್ದು, ಸ್ಪರ್ಧಿಗಳು ಬೆ. 6ಕ್ಕೆ ವರದಿ ಮಾಡಿಕೊಳ್ಳಬೇಕು. ಶೂಟಿಂಗ್, ಬಿಲ್ಲುಗಾರಿಕೆಯು ರಾಣಿ ಸ್ನಾನಗೃಹದ ಎದುರು ಬೆ. 10ಕ್ಕೆ ನಡೆಯಲಿದ್ದು, ಕ್ರೀಡಾಪಟುಗಳು ಬೆ. 9ಕ್ಕೆ ವರದಿ ಮಾಡಿಕೊಳ್ಳಬೇಕು. ತೆಪ್ಪ ತೇಲಿಸುವ ಸ್ಪರ್ಧೆಯು ಬೆ. 7ಕ್ಕೆ ಕಮಲಾಪುರ ಕೆರೆಯಲ್ಲಿ ನಡೆಯಲಿದ್ದು, ಬೆ. 6ಕ್ಕೆ ವರದಿ ಮಾಡಿಕೊಳ್ಳಬೇಕು. ಕೊಂಡನಾಯಕನ ಹಳ್ಳಿಯಲ್ಲಿ ನಡೆಯಲಿರುವ ಸೈಕ್ಲಿಂಗ್ (ಗೇರ್ ಸಹಿತ) ಸ್ಪರ್ಧೆಯು ಬೆ. 9ಕ್ಕೆ ಪ್ರಾರಂಭವಾಗಲಿದ್ದು, 8ಕ್ಕೆವರದಿ ಮಾಡಿಕೊಳ್ಳಬೇಕು. ಗೇರ್ ರಹಿತ ಸ್ಪರ್ಧೆಯು ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾಗಲಿದ್ದು, ಸ್ಪರ್ಧಿಗಳು ಮ. 1 ಗಂಟೆಗೆ ವರದಿ ಮಾಡಿಕೊಳ್ಳಬೇಕು.
ಪ್ರಮಾಣ ಪತ್ರ: ಏರ್ ರೈಫಲ್ ಶೂಟಿಂಗ್ (ಪುರುಷ), ಬಿಲ್ಲುಗಾರಿಕೆ (ಪುರುಷ), ಕ್ರಾಸ್ ಕಂಟ್ರಿ ಸೈಕ್ಲಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿದ ಕನಿಷ್ಠ 50 ಸ್ಪರ್ಧಾಳುಗಳಿಗೆ ಪ್ರಮಾಣ ಪತ್ರ ನೀಡಲಾಗುವುದು. ಇನ್ನುಳಿದ ಸ್ಪರ್ಧೆಗಳಲ್ಲಿ ಕನಿಷ್ಠ 25 ಸ್ಪರ್ಧಾಳುಗಳಿಗೆ ಪ್ರಮಾಣ ಪತ್ರ ನೀಡಲಾಗುವುದು.
ಶುಲ್ಕ ನಿಗದಿ: ಗಾಳಿಪಟ ಪ್ರದರ್ಶನದ ಎಲ್ಲ ವಿಭಾಗಗಳು, ಬಿಲ್ಲುಗಾರಿಕೆ ಸ್ಪರ್ಧೆಗಾಗಿ ರು. 100 ಶುಲ್ಕ, ಶಿಲಾರೋಹಣ ಕ್ರೀಡೆಗೆ ರು. 2 ಸಾವಿರ ಶುಲ್ಕ, ಶೂಟಿಂಗ್, ಸೈಕ್ಲಿಂಗ್ (ಗೇರ್ ರಹಿತ) ಸ್ಪರ್ಧೆಗೆ ರು. 200, ತೆಪ್ಪ ತೇಲಿಸುವ ಓಟಕ್ಕೆ ರು. 250, ಕ್ರಾಸ್ ಕಂಟ್ರಿ ಸೈಕ್ಲಿಂಗ್ ಸ್ಪರ್ಧೆ(ಗೇರ್ ಸಹಿತ)ಗೆ ರು. 300 ಶುಲ್ಕ ನಿಗದಿಪಡಿಸಲಾಗಿದೆ.
ಬಹುಮಾನ: ಗಾಳಿಪಟ ಪ್ರದರ್ಶನದ ಪ್ರತಿ ವಿಭಾಗದಲ್ಲಿ ರು. 10 ಸಾವಿರ ಪ್ರಥಮ, ರು. 5 ಸಾವಿರ ದ್ವಿತೀಯ, ರು. 3 ಸಾವಿರ ತೃತೀಯ ಬಹುಮಾನ ನೀಡಲಾಗುವುದು. ಶಿಲಾರೋಹಣ ಹಾಗೂ ತೆಪ್ಪ ತೇಲಿಸುವ ಓಟದ ವಿಜೇತರಿಗೆ ರು. 25 ಸಾವಿರ ಪ್ರಥಮ, ರು. 15 ಸಾವಿರ ದ್ವಿತೀಯ ಹಾಗೂ ರು. 10 ಸಾವಿರ ತೃತೀಯ ಬಹುಮಾನ ಕೊಡಲಾಗುವುದು. ಉಳಿದ ಕ್ರೀಡೆಗಳಲ್ಲಿ ಮೊದಲನೇ ಸ್ಥಾನ ಪಡೆದವರಿಗೆ ರು. 10 ಸಾವಿರ, ದ್ವಿತೀಯ ರು. 5 ಸಾವಿರ ಹಾಗೂ ತೃತೀಯ ರು. 2,500 ಬಹುಮಾನ ನೀಡಲಾಗುವುದು.
ಟ್ರೋಫಿ: ಗಾಳಿಪಟ ಪ್ರದರ್ಶನದ ಪ್ರತಿ ವಿಭಾಗಕ್ಕೂ ತಲಾ 1 ಟ್ರೋಫಿ, ಇತರ ಕ್ರೀಡಾ ವಿಜೇತರಿಗೆ ತಲಾ 2 ಸೇರಿ 24 ಟ್ರೋಫಿ ನೀಡಲಾಗುವುದು. ವಿವರಕ್ಕೆ ವೆಬ್ಸೈಟ್: ಢಿಢಿಢಿ.ಛಿಜಟಟಛ್ಠಣ.ಟ್ಝ್ಛಿ.್ಝಟಿ ಮತ್ತು ಢಿಢಿಢಿ.ಛಟಠ್ಝ್ಡಡಿಡಛಢಛ.್ಛ್ಟಟ ಸಂಪರ್ಕಿಸಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

