ರಾಜ್ಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡೆಬಳ್ಳಾರಿ ಕ್ರೀಡಾಪಟುಗಳಿಗೆ 18 ಪದಕ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜ. 3
ಕರ್ನಾಟಕ ರಾಜ್ಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಈಚೆಗೆ ಬೆಂಗಳೂರಿನಲ್ಲಿ ಆಯೋಜಿಸಿದ್ದ 33ನೇ ರಾಜ್ಯ ಮಾಸ್ಟರ್ಸ್ (ಸೀನಿಯರ್ಸ್) ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಬಳ್ಳಾರಿಯ ಹಿರಿಯ ಕ್ರೀಡಾಪಟುಗಳು ಉತ್ತಮ ಸಾಧನೆಗೈದು 18 ಪದಕಗಳನ್ನು ಪಡೆದಿದ್ದಾರೆ.
ಸ್ಥಳೀಯ ಕ್ರೀಡಾಪಟು ಸತ್ಯನಾರಾಯಣರಾವ್ 65 ವರ್ಷ ವಯೋವುತಿಯ ಪುರುಷರ ವಿಭಾಗದಲ್ಲಿ ಶಾಟ್ಪುಟ್, ಡಿಸ್ಕ್ಸ್, ಜಾವೆಲಿನ್ ಥ್ರೋ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಮೂರು ಚಿನ್ನದ ಪದಕ ಪಡೆದಿದ್ದಾರೆ. ಅಬ್ದುಲ್ ಮುನಾಫ್ 65ರ ವಯೋವುತಿಯ ಪುರುಷರ ವಿಭಾಗದಲ್ಲಿ ಫೋಲ್ವಾಲ್ಟ್, ನೂರು ಮೀಟರ್ ಓಟ ಹಾಗೂ ಹರ್ಡಲ್ಸ್ ಸ್ಪರ್ಧೆಗಳಲ್ಲಿ ಭಾಗವಹಿಸಿ 2 ಬಂಗಾರದ ಪದಕ ಹಾಗೂ ಟ್ರಿಪಲ್ ಜಂಪ್ನಲ್ಲಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ದತ್ತಾತ್ರೇಯ ರೆಡ್ಡಿ 50ರ ವಯೋವುತಿಯ ಪುರುಷರ ವಿಭಾಗದಲ್ಲಿ, ಜಾವೆಲಿನ್ ಥ್ರೋನಲ್ಲಿ ಒಂದು ಚಿನ್ನದ ಪದಕ, ಡಿಸ್ಕ್ಸ್ ಮತ್ತು ಹ್ಯಾಮರ್ ಥ್ರೋ ಸ್ಪರ್ಧೆಗಳಲ್ಲಿ ಎರಡು ಕಂಚಿನ ಪದಕ ಪಡೆದಿದ್ದಾರೆ.
ಆರ್. ರಾಮದಾಸ್ 65ರ ವಯೋವುತಿಯ ಪುರುಷರ ವಿಭಾಗದಲ್ಲಿ ಟ್ರಿಪಲ್ ಜಂಪ್, ಲಾಂಗ್ಜಂಪ್ ಹಾಗೂ ಶಾಟ್ಪುಟ್ ಎಸೆತದಲ್ಲಿ ಒಟ್ಟಾರೆ 3 ಕಂಚಿನ ಪದಕಗಳನ್ನು ಪಡೆದಿದ್ದಾರೆ.
60 ವರ್ಷ ವಯೋವುತಿಯ ಮಹಿಳೆಯರ ವಿಭಾಗದಲ್ಲಿ ಕ್ರೀಡಾಪಟು ನಾಗರತ್ನಮ್ಮ ಡಿಸ್ಕ್ಸ್ ಹಾಗೂ ಹ್ಯಾಮರ್ ಥ್ರೋನಲ್ಲಿ ಎರಡು ಚಿನ್ನದ ಪದಕ, ಶಾಟ್ಪುಟ್ ಥ್ರೋನಲ್ಲಿ ಒಂದು ಬೆಳ್ಳಿ ಪದಕ ಪಡೆದಿದ್ದಾರೆ ಹಾಗೂ 50 ವರ್ಷ ವಯೊವುತಿಯ ಮಹಿಳೆಯರ ವಿಭಾಗದಲ್ಲಿ ಶಾಂತಾಬಾಯಿ 400 ಮೀಟರ್ ಓಟ, ಡಿಸ್ಕ್ಸ್ ಥ್ರೋ ಹಾಗೂ ಜಾವೆಲಿನ್ ಥ್ರೋ ಸ್ಪರ್ಧೆಗಳಲ್ಲಿ ಮೂರು ಬೆಳ್ಳಿ ಪದಕಗಳನ್ನು ಪಡೆದುಕೊಂಡಿದ್ದಾರೆ.
ಸ್ಥಳೀಯ ಆರು ಜನ ಕ್ರೀಡಾಪಟುಗಳು 33ನೇ ರಾಜ್ಯ ಮಾಸ್ಟರ್ಸ್ (ಸೀನಿಯರ್ಸ್) ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿ, 8 ಬಂಗಾರ, 5 ಬೆಳ್ಳಿ, 5 ಕಂಚಿನ ಪದಕಗಳನ್ನು ಪಡೆಯುವ ಮೂಲಕ ಬಳ್ಳಾರಿಗೆ ಕೀರ್ತಿ ತಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

