ಪರಿಸರ ರಕ್ಷಣೆ ಎಲ್ಲರ ಹೊಣೆ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಜ. 3
ರಾಷ್ಟ್ರೀಯ ಸೇವಾ ಯೋಜನೆಗಳಲ್ಲಿ ಪರಿಸರ ಸಂರಕ್ಷಣೆಯೂ ಒಂದು ಮುಖ್ಯ ಭಾಗವಾಗಿದ್ದು, ದತ್ತು ಪಡೆದುಕೊಂಡು ಗ್ರಾಮಸ್ಥರಿಗೆ ಪರಿಸರ ಸಂರಕ್ಷಣೆ ಕುರಿತು ಜನಜಾಗೃತಿ ಮೂಡಿಸುವ ಅಗತ್ಯವಿದೆ. ಆ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕೆಂದು ಹಗರಿಬೊಮ್ಮನಹಳ್ಳಿ ಉಪನ್ಯಾಸಕ ಡಿ.ಎಚ್. ಖಾಸಿಂಸಾಬ್ ಹೇಳಿದರು.
ತಾಲೂಕಿನ ಗುಜನೂರು ಗ್ರಾಮದಲ್ಲಿ ಸೊಪ್ಪಿನ ಕಾಳಮ್ಮ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಎನ್ಎಸ್ಎಸ್ ಶಿಬಿರದಲ್ಲಿ ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತು ಉಪನ್ಯಾಸ ನೀಡಿದರು.
ಒಂದು ಮರ ಕಡಿದರೆ 10 ಮರಗಳನ್ನು ನೆಡಬೇಕೆಂಬ ನಿಯಮವನ್ನು ಯಾರೂ ಪಾಲನೆ ಮಾಡುತ್ತಿಲ್ಲ. ಇದರಿಂದ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿನ ಕಾಡು ವಿನಾಶದ ಅಂಚಿಗೆ ಸಾಗಿದೆ. ಇದರಿಂದ ಮಳೆಗಾಲ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದ್ದರಿಂದ ದೇಶದಲ್ಲಿ ತಾಪಮಾನ ಏರಿಕೆಯಾಗುತ್ತಿದೆ ಎಂದರು.
ಇಂತಹ ಸೇವಾ ಶಿಬಿರಗಳಲ್ಲಿ ಭಾಗವಹಿಸುವುದು ವಿದ್ಯಾರ್ಥಿಗಳು ಒಗ್ಗಟ್ಟಿನಿಂದ ಜನರಿಗೆ ಸ್ವಚ್ಛತೆ, ಪರಿಸರ ಮಾಲಿನ್ಯ ಇತರ ಸಾಮಾಜಿಕ ಜವಾಬ್ದಾರಿಗಳ ಕುರಿತು ತಿಳಿವಳಿಕೆ ನೀಡಬೇಕೆಂದು ಕರೆ ನೀಡಿದರು. ವಿವಿಧ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೇತರಿಗೆ ಸಸಿಗಳನ್ನು ಬಹುಮಾನವಾಗಿ ವಿತರಿಸಿ ಆ ಮೂಲಕ ಎಲ್ಲರೂ ಸಸಿಗಳನ್ನು ಬೆಳೆಸಿ ಸುಂದರ ಸ್ವಚ್ಛ ಪರಿಸರ ಕಾಪಾಡಬೇಕೆಂದು ಹೇಳಿದರು.
ಶಿಕ್ಷಕ ಎಚ್.ಜಿ. ಪಾಟೀಲ್ ಮಾತನಾಡಿ, ಶರಣರ ವಚನಗಳ ಮಹತ್ವ ತಿಳಿಸುವ ಮೂಲಕ ಗುಜನೂರು ಗ್ರಾಮಸ್ಥರು ಶಿಬಿರಾರ್ಥಿಗಳಿಗೆ ಎಲ್ಲ ರೀತಿಯ ಸಹಕಾರ ನೀಡಿ ಶಿಬಿರ ಯಶಸ್ವಿಗೊಳಿಸಬೇಕೆಂದು ಹೇಳಿದರು.
ಹೊಸಮನಿ ಅಂಜಿನಪ್ಪ ಮಾತನಾಡಿದರು. ಉಪನ್ಯಾಸಕ ಜಿ.ಎಸ್. ವಿರೂಪಾಕ್ಷಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಕೋರಿ ಹಾಲೇಶ, ಎಲ್.ಪಿ. ನಾಗಪ್ಪ, ಬಸೆಟ್ಟಿ ಪ್ರಕಾಶ, ಡಿ. ಬಂದಮ್ಮ, ಮೆಹತಾಜ್, ದೇವಗೊಂಡನಹಳ್ಳಿ ಗ್ರಾಪಂ ಕಾರ್ಯದರ್ಶಿ ಜಗದೀಶ, ಕಟಗಾಲಿ ದೇವಪ್ಪ, ಕರ್ಕಿಹಳ್ಳಿ ದುರುಗಪ್ಪ, ಎಚ್. ಹನುಮಂತಪ್ಪ ಇದ್ದರು.
ಲಲಿತಾ ಸ್ವಾಗತಿಸಿದರು, ಆಶ್ಮಾ ನಿರೂಪಿಸಿದರು. ಚೈತ್ರಾ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

