ಬಳ್ಳಾರಿ

ಸುದ್ದಿ ಸಂಕ್ಷೇಪ

Published On :

12ರಂದು ಸೀಳುತುಟಿ ಚಿಕಿತ್ಸಾ ಶಿಬಿರ: ಕೈಲಾಸ್
ಬಳ್ಳಾರಿ: ಇಲ್ಲಿನ ಲಯನ್ಸ್ ಕ್ಲಬ್‌ನಿಂದ ಪ್ರತಿವರ್ಷದಂತೆ ಈ ವರ್ಷವೂ ಸೀಳುತುಟಿ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಉಚಿತ ಶಿಬಿರವನ್ನು ಜ. 12ರಂದು ಕಪ್ಪಗಲ್ ರಸ್ತೆಯ ಕ್ಲಬ್‌ನ ಕಚೇರಿಯಲ್ಲಿ ಆಯೋಜಿಸಲಾಗಿದೆ ಎಂದು ಕ್ಲಬ್ ಜಿಲ್ಲಾ ಕಾರ್ಯದರ್ಶಿ ಕೈಲಾಸ್ ಜೈನ್ ತಿಳಿಸಿದರು. ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2006ರಿಂದ ಸೀಳುತುಟಿಯಿಂದ ಬಳಲುತ್ತಿರುವ ಮಕ್ಕಳಿಗೆ ಉಚಿತವಾಗಿ ಚಿಕಿತ್ಸೆ ಕೊಡಿಸುತ್ತಿದ್ದು, ಇಲ್ಲಿವರೆಗೆ 700ಕ್ಕೂ ಅಧಿಕ ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದೆ. ಈ ಬಾರಿಯೂ ಶಿಬಿರ ಏರ್ಪಡಿಸಿದ್ದು, ಈಗಾಗಲೆ 50 ಮಕ್ಕಳ ಹೆಸರು ನೋಂದಣಿಯಾಗಿದ್ದು, ಶಿಬಿರದ ದಿನದಂದು ಬಂದರೂ ಚಿಕಿತ್ಸೆ ಕೊಡಲಾಗುವುದು. ಈ ಕುರಿತು ಮಾಹಿತಿ ಬೇಕಿದ್ದಲ್ಲಿ ಮೊ.ಸಂ-9448052157ಗೆ ಸಂಪರ್ಕಿಸಬಹುದು ಎಂದು ವಿವರಿಸಿದರು. ಎಲ್ಲ ವಯಸ್ಸಿನವರೂ ಶಿಬಿರದಲ್ಲಿ ಪಾಲ್ಗೊಳ್ಳಬಹುದು. ತಪಾಸಣೆಗೊಳಗಾದರ ದೈಹಿಕ ಸಾಮರ್ಥ್ಯದ ಮೇಲೆ ಚಿಕಿತ್ಸಾ ದಿನಾಂಕವನ್ನು ನಿಗದಿಪಡಿಸಲಾಗುವುದು. ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ರೋಗಿ ಮತ್ತು ಪೋಷಕರೊಂದಿಗೆ ಇಬ್ಬರು ಸಹಾಯಕರು, ಪ್ರಯಾಣ, ವಸತಿ, ಊಟದ ವ್ಯವಸ್ಥೆ, ಆಪರೇಷನ್ ವೆಚ್ಚವನ್ನೆಲ್ಲ ಕ್ಲಬ್‌ನಿಂದ ಭರಿಸಲಾಗುವುದು. ಕೆಎಲ್‌ಇ ಆಸ್ಪತ್ರೆಯ 7 ವೈದ್ಯರ ತಂಡ ತಪಾಸಣೆ ನಡೆಸಲಿದೆ ಎಂದರು. ಕ್ಲಬ್ ಜಿಲ್ಲಾಧ್ಯಕ್ಷ ಎಸ್.ಕೆ. ಅಜಯ್, ಸದಸ್ಯ ವೆಂಕಟೇಶ್ ಗೋಷ್ಠಿಯಲ್ಲಿದ್ದರು.
ಸರ್ಕಾರಿ ವಾಹನ ಡಿಕ್ಕಿ ಇಬ್ಬರಿಗೆ ಗಾಯ
ಬಳ್ಳಾರಿ: ಸರ್ಕಾರಿ ವಾಹನವೊಂದು ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಾಯಗೊಂಡಿರುವ ಘಟನೆ ನಗರದ ಬೆಳಗಲ್ ರಸ್ತೆಯಲ್ಲಿ ಗುರುವಾರ ನಡೆದಿದೆ. ಗಾಯಗೊಂಡವರನ್ನು ರುದ್ರಪ್ಪ, ಸಾವಲಿ ಎಂದು ಗುರುತಿಸಲಾಗಿದೆ. ಅಂಥೋನಿ ಹಾಲ್ ಕಡೆಯಿಂದ ಕೌಲ್‌ಬಜಾರ್‌ಗೆ ಹೋಗುತ್ತಿದ್ದ ಸರ್ಕಾರಿ ವಾಹನ ಆಟೋಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಾಯಗೊಂಡಿದ್ದಾರೆ. ಈ ಕುರಿತಾಗಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.