ಇಂಪು ನೀಡಿದ ಗೋಡ್ಖಿಂಡಿ ವಾದನ
ಎಂ.ಪಿ. ಪ್ರಕಾಶ್ ವೇದಿಕೆ, ಹಂಪಿ: ಉತ್ಸವದ ರೂವಾರಿ ಮಾಜಿ ಉಪಮುಖ್ಯಮಂತ್ರಿ ದಿ.ಎಂ.ಪಿ. ಪ್ರಕಾಶ್ ವೇದಿಕೆಯಲ್ಲಿ ಮೊದಲ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಂಗಳೂರಿನ ಅಂತಾರಾಷ್ಟ್ರೀಯ ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿ ಫ್ಯೂಜನ್ ಬ್ಯಾಂಡ್ ಕೊಳಲು ವಾದನವನ್ನು ಶುಕ್ರವಾರ ರಾತ್ರಿ ಸುಶ್ರಾವ್ಯವಾಗಿ ನುಡಿಸಿದರು. ಗಣಪತಿ ಹಾಡು, ಪಹರಿ ರಾಗ್ ಮುಂತಾದ ರಾಗಗಳಲ್ಲಿ ಹಾಡುಗಳ ವಾದನ ಮಾಡಿದರು. ಭಕ್ತಿಗೀತೆ, ಜಾನಪದ ಶೈಲಿಯಲ್ಲಿ ಜನಪ್ರಿಯ ಕನ್ನಡ ಚಿತ್ರಗೀತೆಗಳನ್ನು ನುಡಿಸಿ ಕಲಾಭಿಮಾನಿಗಳನ್ನು ರಂಜಿಸಿದರು. ಜನ ಕಿಕ್ಕಿರಿದು ಸೇರಿರುತ್ತಾರೆಂದು ಭಾವಿಸಿದ್ದ ಕಲಾವಿದರಿಗೆ ಜನರಿಲ್ಲದೆ ನಿರಾಸೆಯಿಂದಲೆ ವೇದಿಕೆಗೆ ಆಗಮಿಸಿ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರವೀಣ್ ಗೋಡ್ಖಿಂಡಿ ಮಾತನಾಡಿ, ಪ್ರತಿವರ್ಷ ಹಂಪಿ ಉತ್ಸವದಲ್ಲಿ ಸಂತೋಷದಿಂದ ನಾನು ಭಾಗವಹಿಸಿದ್ದೇನೆ. ಅನೇಕ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೂ ಹಂಪಿ ಉತ್ಸವದಲ್ಲಿ ಭಾಗವಹಿಸುವುದು ನನಗೆ ಅತ್ಯಂತ ಖುಷಿ ಸಂಗತಿ. ಆದರೆ ಕಲಾಪ್ರಕ್ಷಕರು ಹಂಪಿ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಉತ್ಸವಕ್ಕೆ ಶೋಭೆ ತರಬೇಕಾಗಿತ್ತು. ಕಡಿಮೆ ಸಂಖ್ಯೆಯಲ್ಲಿ ಕಲಾಸಕ್ತರು ನೆರೆದಿದ್ದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು. ನಂತರ ಬೆಂಗಳೂರಿನ ಫಯಾಜ್ಖಾನ್ ಅವರಿಂದ ಗಜಲ್ಗಳು ಕೇಳುಗರಿಗೆ ಇಂಪು ನೀಡಿದವು. ಬೆಂಗಳೂರಿನ ಆರ್ಟಿಕ್ಯೂಲೇಟ್ ಇಂಡಿಯಾದವರಿಂದ ನೃತ್ಯ ರೂಪಕ ಸಾಲ ಬಂಜಿಕ, ಕೊಲ್ಕತ್ತಾದ ಕುಮಾರಿ ರಿಂಪಾಶಿವ ಅವರ ತಬಲ ವಾದನ, ಕೊಲ್ಕತ್ತದ ಅರ್ಪಿತಾ ವೆಂಕಟೇಶ್ ಅವರ ಒಡಿಸ್ಸಿ ನೃತ್ಯ, ಮುಂಬೈನ ಶುಭಾ ಮುದ್ಗಲ್ ಅವರ ಹಿಂದೂಸ್ತಾನಿ ಗಾಯನ ಕಾರ್ಯಕ್ರಮ, ಬೆಂಗಳೂರಿನ ಡಾ. ಸುಮಾ ಸುಧೀಂದ್ರ ಅವರ ಪಂಚವೀಣಾ ವಾದನ, ಬೆಂಗಳೂರಿನ ಪ್ರಸನ್ನ ಗುಡಿ ಅವರಿಂದ ಹಿಂದೂಸ್ತಾನಿ ಗಾಯನ ಕಾರ್ಯಕ್ರಮ ತಡ ರಾತ್ರಿವರೆಗೂ ಪ್ರೇಕ್ಷಕರ ಕೊರತೆ ಮಧ್ಯೆ ನಡೆದವು. ಹಂಪಿಯ ಕಲ್ಲು ಬಂಡೆಗಳು ಸಂಗೀತದ ಇಂಪನ್ನು ಕೇಳಿ ಉತ್ಸವ ಸವಿದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

