ಸಿಪಿಐ ಮಲ್ಲೇಶ್ ದೊಡ್ಡಮನಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.
ಹೊಸಪೇಟೆ: ಮುಸ್ಲಿಂ ಧರ್ಮಗುರು ಮಹ್ಮದ್ ಪೈಗಂಬರ್ ಅವರ ಜನ್ಮ ದಿನಾಚರಣೆ ಅಂಗವಾಗಿ ಆಚರಿಸುತ್ತಿರುವ ಈದ್ ಮಿಲಾದ್ ಹಬ್ಬವನ್ನು ಮುಸ್ಲಿಂ ಬಾಂಧವರು ನಗರ ಸೇರಿದಂತೆ ತಾಲೂಕಿನಲ್ಲಿ ಶ್ರದ್ಧಾ, ಭಕ್ತಿಯಿಂದ ಮಂಗಳವಾರ ಆಚರಿಸಿದರು.
ಹಬ್ಬದ ನಿಮಿತ್ತ ನಗರದ ಐಎಸ್‌ಆರ್ ರಸ್ತೆಯಲ್ಲಿನ ಈದ್ಗಾ ಮೈದಾನದಿಂದ ಆರಂಭವಾದ ಈದ್ ಮೆರವಣಿಗೆ, ಮದಕರಿ ನಾಯಕ ವೃತ್ತ, ಹಳೆ ಬಸ್ ನಿಲ್ದಾಣ, ರೋಟರಿ ವೃತ್ತ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಪುಣ್ಯಮೂರ್ತಿ ವೃತ್ತ, ಮೂರರಂಗಡಿ ವೃತ್ತ, ಗಾಂಧಿ ಚೌಕ ಮೂಲಕ ಟೌನ್ ರೀಡಿಂಗ್ ರೂಂ ಆವರಣದಲ್ಲಿ ಸಮಾವೇಶಗೊಂಡರು. ಮೆರವಣಿಗೆಯಲ್ಲಿ ನಗರದ ಸಾವಿರಾರು ಮುಸ್ಲಿಂ ಬಾಂಧವರು ಭಾಗವಹಿಸಿ, ಪರಸ್ಪರ ಈದ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಅಂಜುಮನ್ ಕಮಿಟಿ ಅಧ್ಯಕ್ಷ ಸಿರಾಜ್ ಸಾಬ್, ನಗರಸಭಾ ಸದಸ್ಯ ಕೆ. ಬಡಾವಲಿ, ಕೆ. ಗೌಸ್, ಅಬ್ದುಲ್ ಖದೀರ್‌ಸಾಬ್, ಮುಖಂಡ ಶಾದಾಬ್ ವಹಾಬ್, ರೆಹಮಾನ್, ಬಿ.ಕಾಂ. ಮಾಬುಸಾಬ್, ಖಾಜಾ ಹುಸೇನ್ ನಿಯಾಜಿ, ಎಚ್.ಎನ್. ಮಹ್ಮದ್ ಇಮಾಮ್ ನಿಯಾಜಿ, ಫಹೀಂ ಬಾಷಾ, ಜಾಫರ್ ಸಾಬ್, ಅಬೀದ್ ಹುಸೇನ್, ನಾಸೀರ್, ಅಲ್ಲಾಭಕ್ಷಿ, ಮೆಹಬೂಬ್ ಖಾದ್ರಿ, ನೂರ್‌ಸಾಬ್ ಸೇರಿದಂತೆ ಸಾವಿರಾರು ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.
ಯಾವುದೆ ಅಹಿತಕರ ಘಟನೆಗಳು ನಡೆಯದಂತೆ ಎಸ್ಪಿ ಚೇತನ್‌ಸಿಂಗ್ ರಾಥೋಡ್, ಡಿವೈಎಸ್ಪಿ ಡಿ.ಡಿ. ಮಾಳಗಿ ಮಾರ್ಗದರ್ಶನದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮರಿಯಮ್ಮನಹಳ್ಳಿ, ಕಮಲಾಪುರ ಸೇರಿದಂತೆ ವಿವಿಧೆಡೆ ಈದ್ ಆಚರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

