ರಾಜಕೀಯಕ್ಕೆ ಸಹಕಾರ, ಅಭ್ಯಾಸಕ್ಕೆ ಗಣಿತ ಒಗ್ಗಲಿಲ್ಲ
ಹೂವಿನಹಡಗಲಿ: ತಮ್ಮ ರಾಜಕೀಯ ಜೀವನದಲ್ಲಿ ಎಂದೂ ಸಹಕಾರ ಕ್ಷೇತ್ರ ಒಲಿಯಲಿಲ್ಲ, ಶಾಲಾ ವಿದ್ಯಾಭ್ಯಾಸದ ದಿನಗಳಲ್ಲಿ ಗಣಿತ ವಿಷಯ ಒಗ್ಗಲಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದರು.
ಪಟ್ಟಣದ ಸೊಪ್ಪಿನ ಕಾಳಮ್ಮ ಸರ್ಕಾರಿ ಪಪೂ ಕಾಲೇಜಿನಲ್ಲಿ ಶನಿವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸರ್ವ ಶಿಕ್ಷಣ ಅಭಿಯಾನ ಸಹಯೋಗದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಕಲಿಕೋತ್ಸವ ಹಾಗೂ ಸಾಂಕೇತಿಕ ಸೈಕಲ್ ವಿತರಿಸಿ ಮಾತನಾಡಿದರು.
ಕಲಿಕೆ ಎಂಬುದು ನಿರಂತರ ಹರಿಯುವ ನೀರಿನಂತೆ. ರಾಜಕಾರಣಿಗಳು, ಪತ್ರಕರ್ತರು, ವಿದ್ಯಾರ್ಥಿಗಳು, ಶಿಕ್ಷಕರು, ವೈದ್ಯರು ಸೇರಿದಂತೆ ಪ್ರತಿ ಕ್ಷೇತ್ರದಲ್ಲೂ ತಾವು ಪರಿಪೂರ್ಣರಾಗಲು ಅಸಾಧ್ಯ. ಆದರಿಂದ ಕಲಿಕೆ ನಿರಂತರವಾಗಿರಬೇಕೆಂಬ ಉದ್ದೇಶದಿಂದ ಸರ್ಕಾರಿ ಶಾಲೆಗಳಲ್ಲಿ ಹಬ್ಬದ ವಾತರಣ ಸೃಷ್ಟಿಸಿ ವಿದ್ಯಾರ್ಥಿಗಳಲ್ಲಿ ಕಲಿಕೆ ಸಾಮರ್ಥ್ಯ ಹೆಚ್ಚಿಸುವ ಕೆಲಸ ಮಾಡುತ್ತಿದೆ ಎಂದರು.
ಶ್ರೀಮಂತಿಕೆಗಿಂತ ಶಿಕ್ಷಣ ಬಹಳ ದೊಡ್ಡದು, ಆದರಿಂದ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಉತ್ತಮ ಸ್ಥಾನಮಾನ ಪಡೆಯಬೇಕು. ತಾಲೂಕಿನಲ್ಲಿ 996 ಬಾಲಕರಿಗೆ, 1049 ಬಾಲಕಿಯರಿಗೆ ಸೇರಿದಂತೆ ಒಟ್ಟು 1049 ಸೈಕಲ್ಗಳನ್ನು ವಿತರಣೆ ಮಾಡಲಾಗುವುದು ಎಂದರು.
ಕಲಿಕೋತ್ಸವದ ಗಡಿಯಾರದ ಮಾದರಿಯೊಂದನ್ನು ಹಿಡಿದು ಕೂಡಿಸುವ ಮತ್ತು ಕಳೆಯುವ ಲೆಕ್ಕಗಳನ್ನು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತ, ತಾವು ಗಣಿತ ವಿಷಯದಲ್ಲಿ ವೀಕ್, ಸರಿಯಾಗಿ ವಿದ್ಯಾಭ್ಯಾಸ ಮಾಡಿದ್ರೆ ಎಂಜಿನಿಯರ್ ಆಗುತ್ತಿದ್ದೆ, ಆದರೆ ತಮಗೆ ರಾಜಕಾರಣದಲ್ಲಿ ಸಹಕಾರ ಕ್ಷೇತ್ರ ಒಲಿಯಲ್ಲಿಲ್ಲ, ವಿದ್ಯಾಭ್ಯಾಸದಲ್ಲಿ ಗಣಿತ ವಿಷಯ ಒಗ್ಗಲಿಲ್ಲ ಎಂದು ಹೇಳಿದರು.
ಜಿಪಂ ಸದಸ್ಯೆ ನಳಿನಾ ಅಧ್ಯಕ್ಷತೆ ವಹಿಸಿದ್ದರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐಗೋಳ್ ಚಿದಾನಂದ, ವಾರದ್ಗೌಸ್ ಮೋಹಿದ್ದೀನ್, ಅಟವಾಳಗಿ ಕೊಟ್ರೇಶ, ಸಿಪಿಐ ಪ್ರಕಾಶ ರಾಠೋಡ್, ಶಿಕ್ಷಕ ಎಂ. ಧರ್ಮಶೀಲ, ಮುಕ್ತುಯಾರ್ ಅಹ್ಮದ್, ಟಿ.ಪಿ. ವೀರೇಂದ್ರ, ಸಿ.ಎಂ. ಕಾಲಿಬಾವಿ, ಪವಿತ್ರಾ, ಶಕುಂತಲಾ, ಅಶೋಕ, ಈಟಿ ಹನುಮೇಶ, ಕೋರಿ ಹಾಲೇಶ, ಇ. ವಾಸಪ್ಪ, ಧರ್ಮನಾಯ್ಕ, ಹಾಲಿಬಾಯಿ, ಕೌಶಲ್ಯಬಾಯಿ, ರೆಹಮಾನ್, ಖಾಜಸಾಬ್, ಹನುಮಂತಪ್ಪ ಸೇರಿದಂತೆ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

