ಬಳ್ಳಾರಿ

ಪರಿಸರ ಕುರಿತು ಕಾಲ್ನಡಿಗೆ ಜಾಥಾ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಜು.1
ಪ್ರತಿಷ್ಠತ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆ ವತಿಯಿಂದ ಪರಿಸರ ಕುರಿತಾಗಿ ಜಾಗೃತಿ ಮೂಡಿಸುವ ಕಾಲ್ನಡಿಗೆಯ ಜಾಥಾ, ಗಿಡ ನೆಡುವ ಕಾರ್ಯಕ್ರಮ, ವಿದ್ಯಾರ್ಥಿಗಳಿಗೆ ಶಿಕ್ಷಣದ ಅರಿವು ಕಾರ್ಯಕ್ರಮ ಹಾಗೂ ರಕ್ತದಾನದ ಶಿಬಿರದ ಮೂಲಕ ಚಾರ್ಟರ್ಡ್ ಅಕೌಂಟೆಂಟ್ಸ್ ದಿನವನ್ನು ಆಚರಿಸಲಾಯಿತು.
ಚಾರ್ಟರ್ಡ್ ಅಕೌಂಟೆಂಟ್ಸ್‌ಗಳು ಬೆಳಗ್ಗೆ 7ಕ್ಕೆ ಬಳ್ಳಾರಿ ನಗರದ ದುರ್ಗಮ್ಮ ದೇವಸ್ಥಾನದಿಂದ ಸಂಸ್ಥೆಯ ಶಾಖೆಯ ವರೆಗೆ ನಗರದ ಪ್ರಮುಖ ಬೀದಿಗಳಲ್ಲಿ ಪರಿಸರ ಜಾಗೃತಿ ಕುರಿತಾಗಿ 150ಕ್ಕೂ ಹೆಚ್ಚು ಚಾರ್ಟಡ್ ಅಕೌಂಟೆಂಟ್ಸ್ ಸದಸ್ಯರು ಹಾಗೂ ವಿದ್ಯಾರ್ಥಿಗಳ ಜಾಥಾದಲ್ಲಿ ಪಾಲ್ಗೊಂಡು, ಪರಿಸರ ಜಾಗೃತಿ ಮೂಡಿಸಿದರು. ಅಲ್ಲದೆ ಸಂಸ್ಥೆಯ ಹಿರಿಯ ಸದಸ್ಯರು ಗಿಡ ನೆಡುವ ಮೂಲಕ ಪರಿಸರ ಬೆಳೆಸುವ ಸಂದೇಶವನ್ನು ನೀಡಿದರು.
ಸಂಸ್ಥೆಯ ದಕ್ಷಿಣ ಭಾರತ ಪ್ರಾದೇಶಿಕ ವಲಯದ ಆಡಳಿತ ಮಂಡಳಿ ಸದಸ್ಯರಾದ ಪಿ.ಆರ್. ಸುರೇಶ್ ಸಂಸ್ಥೆಯ ಧ್ವಜಾರೋಹಣ ನೆರವೇರಿಸಿ, ಬಳ್ಳಾರಿಯಲ್ಲಿ ಶಾಖೆ ಮಾಡಿರುವ ಸಾಧನೆಯನ್ನು ಸ್ಮರಿಸಿದರು. ದಿನಾಚರಣೆಯ ಅಂಗವಾಗಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಿಎ ಶಿಕ್ಷಣದ ಅರಿವು ಕಾರ್ಯಕ್ರಮ, ರಕ್ತದಾನ, 120 ಜನರಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು. ಇನ್ನು ಗಾಂಧಿ ನಗರದ ಅಂಗನವಾಡಿ ಶಾಲೆಯ 170 ಮಕ್ಕಳಿಗೆ ಕಲಿಕಾ ಸಾಮಗ್ರಿಯನ್ನು ವಿತರಿಸಲಾಯಿತು. ಸಂಜೆ ಸಂಸ್ಥೆ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯ ಬಳ್ಳಾರಿ ಶಾಖೆ ಅಧ್ಯಕ್ಷ ಲಕ್ಷ್ಮೀ ನಾರಾಯಣ, ಮಾಜಿ ಅಧ್ಯಕ್ಷ  ಜಯಪ್ರಕಾಶ ಗುಪ್ತಾ, ಪನ್ನರಾಜ್, ಚಂದ್ರಪ್ಪ, ರಮೇಶ ಮತ್ತು ರಾಜಶೇಖರ, ಭರತ ಕುಮಾರ್.ಜೆ. ಗುಪ್ತ, ಸಿದ್ದರಾಮೇಶ್ವರಗೌಡ. ಎ, ರಾಮಕೃಷ್ಣ ಬಿ., ರಾಜಶೇಖರ್, ಕೆ. ರಾಜೇಶ್ ಬಾಗ್ರೇಚ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.