ಆಟೋ ಚಾಲಕರಿಗೆ ಡ್ರೈವಿಂಗ್ ಲೈಸೆನ್ಸ್ ಭೀತಿ
ಹಗರಿಬೊಮ್ಮನಹಳ್ಳಿ: ಹಳದಿ ನಂಬರ್ ಪ್ಲೇಟ್ ಹೊಂದಿರುವ ಸಾರಿಗೆ ವಾಹನ ಚಾಲನೆ ಮಾಡಲು ಅಗತ್ಯವಾಗಿರುವ ವಾಹನ ಚಾಲನಾ ಪರವಾನಗಿ ಪತ್ರ (ಡ್ರೈವಿಂಗ್ ಲೈಸನ್ಸ್) ಹೊಂದಲು 8ನೇ ತರಗತಿ ಪಾಸ್ ಇಲ್ಲವೆ 10ನೇ ತರಗತಿ ವಿದ್ಯಾಹರ್ತೆ ಕಡ್ಡಾಯಗೊಳಿಸಿ ಸಾರಿಗೆ ಇಲಾಖೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಈ ಆದೇಶ ಈಗ ಹಗರಿಬೊಮ್ಮನಹಳ್ಳಿ ತಾಲೂಕಿನ ಅನಕ್ಷರಸ್ಥ ಆಟೋರೀಕ್ಷಾ ಚಾಲಕರ ಪಾಲಿಗೆ ಬಿಸಿತುಪ್ಪವಾಗಿ ಪರಿಣಮಿಸಿದ್ದು, ಲೈಸೆನ್ಸ್ನಿಂದ ವಂಚಿತರಾಗುವ ಭೀತಿ ಎದುರಿಸುತ್ತಿದ್ದಾರೆ.
ಮುಖ್ಯವಾಗಿ ಬಿಸಿಲೂರಿನಲ್ಲಿ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿನ ನಿರುದ್ಯೋಗಿ ಯುವಕರು ಜೀವನ ನಿರ್ವಹಣೆಗಾಗಿ ಅವಲಂಬಿಸಿರುವುದು ಆಟೋರಿಕ್ಷಾ, ಸರಕು ಸಾಗಾಣಿಕೆ ಆಟೋಚಾಲನೆಯನ್ನು. ಈ ಪೈಕಿ ಬಹುಸಂಖ್ಯೆಯಲ್ಲಿ ಅಕ್ಷರ ಬಾರದವರೇ ಹೆಚ್ಚು. ಕಡ್ಡಾಯ ವಿದ್ಯಾರ್ಹತೆ, ಇಂಥ ನೂರಾರು ಅಕ್ಷರ ಕಲಿಯದ ನಿರುದ್ಯೋಗಿ ಯುವಕರ ಪಾಲಿಗೆ ಬರ ಸಿಡಿಲಿನಂತೆ ಅಪ್ಪಳಿಸಿದ್ದು, ಒಂದು ವೇಳೆ ಇಲಾಖೆ ಕಠಿಣ ಕ್ರಮ ಕೈಗೊಂಡರೆ ಮುಂದೆ ಕುಟುಂಬ ನಿರ್ವಹಣೆ ಹೇಗೆಂಬ ಚಿಂತೆ ಒಂದೆಡೆಯಾದರೆ, ಇನ್ನೊಂದೆಡೆ ಲೈಸೆನ್ಸ್ ಇಲ್ಲದೆ ಓಡಿಸಿದರೆ ಆಟೋಗಳನ್ನು ಸಿಜ್ ಮಾಡಿ ಕ್ರಮ ಕೈಗೊಳ್ಳುವ ಆತಂಕ ಮನೆ ಮಾಡಿದೆ. ಕೃಷಿ ನಂಬಿಕೊಂಡಿದ್ದ ರೈತ ಕುಟುಂಬದ ಬಹುತೇಕ ಯುವಕರು ನಿರುದ್ಯೋಗದಿಂದ ಬಚಾವ್ ಆಗಲು ಪಟ್ಟಣಗಳತ್ತ ಗುಳೆ ಹೊದರೆ, ಹಲವರು ಇದ್ದೂರಲ್ಲೇ ಉಳಿದು ಆಟೋರಿಕ್ಷಾ, ಟಾಟಾ ಏಸ್ನಂಥ ಸರಕು ಸಾಗಾಣಿಕೆ, ಮಿನಿ ವಾಹನಗಳ ಚಾಲನೆ ಮಾಡಿಕೊಂಡು ಬರ ನಿರ್ವಹಣೆ, ನೀರುದ್ಯೋಗ ನಿವಾರಿಸಿಕೊಂಡು ಬದುಕು ಕಟ್ಟಿಕೊಂಡಿದ್ದರು.
ಬ್ರೇಕ್ ಹಾಕಿದ ಸಾರಿಗೆ ಇಲಾಖೆ: ಇತ್ತಿಚಿನ ದಿನಗಳಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಅಧಿಕವಾಗುತ್ತಿದ್ದು, ರಸ್ತೆ ಸಂಚಾರ ನಿಯಮಗಳನ್ನು ವಾಹನ ಚಾಲಕರು ಸರಿಯಾಗಿ ಪಾಲಿಸದಿರುವುದೇ ಅಪಘಾತಗಳಿಗೆ ಕಾರಣ. ಚಾಲಕರಲ್ಲಿ ಓದು-ಬರಹ ಬಾರದವರು ಅಧಿಕ ಸಂಖ್ಯೆಯಲ್ಲಿರುವುದರಿಂದ ಸಂಚಾರಿ ನಿಯಮಗಳು ಉಲ್ಲಂಘನೆಯಾಗುತ್ತಿವೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕಾಗಿ ಅಪಘಾತ ರಹಿತ ಸಂಚಾರ ಮೂಲ ಉದ್ದೇಶ ಹಿನ್ನೆಲೆಯಲ್ಲಿ ವಾಹನ ಚಾಲನೆಗೆ ಕಡ್ಡಾಯ ವಿದ್ಯಾರ್ಹತೆ ಮಾನದಂಡಕ್ಕೆ ಇಲಾಖೆ ಮುಂದಾಗುವಂತೆ ಮಾಡಿತು ಎನ್ನುತ್ತವೆ ಇಲಾಖೆ ಮೂಲಗಳು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

