ಸಾಮರಸ್ಯದಿಂದ ಬದುಕಿದರೆ ಅನಿಷ್ಟ ಪದ್ಧತಿ ನಿರ್ಮೂಲನೆ
ಹೂವಿನಹಡಗಲಿ: ಸಮಾಜದ ಪ್ರತಿಯೊಬ್ಬರೂ ಸಹಕಾರ, ಸಹಬಾಳ್ವೆ, ಪರಸ್ಪರ ಪ್ರೀತಿ, ವಿಶ್ವಾಸದಿಂದ ಸಾಮರಸ್ಯ ಮನೋಭಾವನೆಗಳಿಂದ ಕೂಡಿ ಬಾಳಬೇಕಿದೆ. ಆಗ ಸಮಾಜದಲ್ಲಿನ ಅನಿಷ್ಟ ಪದ್ಧತಿಗಳನ್ನು ನಿರ್ಮೂಲನೆ ಮಾಡಬಹುದು ಎಂದು ಡಿವೈಎಸ್ಪಿ ಆರ್.ಎಸ್. ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.
ಇಲ್ಲಿನ ಪುರಸಭೆ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ಪ. ಜಾತಿ ಮತ್ತು ಪ. ಪಂಗಡಗಳ ದೌರ್ಜನ್ಯ ಪ್ರತಿಬಂಧಕ ಅಧಿನಿಯಮ ಕುರಿತು ಸೋಮವಾರ ಆಯೋಜಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಕೇವಲ ಕಾಯ್ದೆ, ಕಾನೂನುಗಳಿಂದ ಸಮಾನತೆ ಸಿಗಲು ಸಾಧ್ಯವಿಲ್ಲ. ಸಮಾಜದಲ್ಲಿ ಪ್ರತಿಯೊಬ್ಬರೂ ಪರಸ್ಪರ ಒಪ್ಪಿಕೊಳ್ಳುವ ಮೂಲಕ ಸಂಬಂಧಗಳನ್ನು ಗಟ್ಟಿಗೊಳಿಸಬೇಕಿದೆ. ಸಮಾಜಕ್ಕೆ ಅಂಟಿ ಅನಿಷ್ಟವಾಗಿರುವ ವರ್ಗ ಮತ್ತು ಜಾತಿ ಸಂಘರ್ಷಗಳನ್ನು ನಿಯಂತ್ರಣ ಮಾಡಲು ಸಂವಿಧಾನದ ಪರಿಕಲ್ಪನೆಯನ್ನು ಪ್ರತಿಯೊಬ್ಬರಲ್ಲಿಯೂ ಅರಿವು ಮೂಡಬೇಕಿದೆ ಸಲಹೆ ನೀಡಿದರು. ದೇಶದಲ್ಲಿನ ಅಸಮಾನತೆ ತೊಲಗಿಸಲು ಸಾಕಷ್ಟು ದಾರ್ಶನಿಕರು, ಚಿಂತಕರು, ಹೋರಾಟಗಾರರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಪ್ರತಿಯೊಬ್ಬರ ಬದುಕಿನಲ್ಲಿ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಉಪನ್ಯಾಸಕ ಕೆ. ಸತೀಶ ಮಾತನಾಡಿ, ಮನುಷ್ಯ ಮನುಷ್ಯರಲ್ಲೆ ಪರಸ್ಪರ ಶೋಷಣೆ ಉಂಟಾದಾಗ 1955ರಲ್ಲಿ ಮೊದಲ ಬಾರಿಗೆ ಮಾನವ ಹಕ್ಕುಗಳ ರಕ್ಷಣೆಗಾಗಿ ಕಾಯಿದೆ ರೂಪಗೊಂಡಿತ್ತು. ನಂತರ 1977ರಲ್ಲಿ ಕೆಲ ಮಾರ್ಪಾಡುಗಳಿಂದ ತಿದ್ದುಪಡಿ ಮಾಡಲಾಗಿತ್ತು. ಜಾತಿ ಸಂಘರ್ಷಕ್ಕಾಗಿ 1989ರಲ್ಲಿ ಪ.ಜಾ ಮತ್ತು ಪ.ಪಂಗಳ ದೌರ್ಜನ್ಯ ಪ್ರತಿಬಂಧಕ ಅದಿನಿಯಮ ಜಾರಿಗೆ ಬಂದಿದೆ ಎಂದು ಮಾಹಿತಿ ನೀಡಿದರು. ಸಿಪಿಐ ಪ್ರಕಾಶ ರಾಠೋಡ್ ಮಾತನಾಡಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸೋಮಣ್ಣ ಚಿಣ್ಣೂರು, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಕೆ.ಎಂ. ಜಯದೇವಯ್ಯ ಮಾತನಾಡಿದರು. ನಿಲಯ ಮೇಲ್ವಿಚಾರಕ ಉದಯಕುಮಾರ್, ಪರಶುರಾಮ ಕುರಿ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ನೂರಾರು ಜನರು ಭಾಗವಹಿಸಿ ಮಾಹಿತಿ ಪಡೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

