ಆರೋಗ್ಯ ಕಾರ್ಡ್ ಯೋಜನೆ ಬಹೂಪಯೋಗಿ
ಕೊಟ್ಟೂರು: ಮಣಿಪಾಲ ಆರೋಗ್ಯ ಕಾರ್ಡ್ ಯೋಜನೆ ಬಹೂಪಯೋಗಿ ಆಗಿದೆ. ಬಡ, ಮಧ್ಯಮ ವರ್ಗದವರ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಗೆ ಸಹಕಾರಿಯಾಗಿದೆ ಎಂದು ಮಣಿಪಾಲ ಕಸ್ತೂರಬಾ ಆಸ್ಪತ್ರೆಯ ಸಹಾಯಕ ಅಧೀಕ್ಷಕ ಮೋಹನ ಶೆಟ್ಟಿ ಹೇಳಿದರು.
ಪಟ್ಟಣದ ಹಿರೇಮಠದ ಕೊಟ್ಟೂರೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಣಿಪಾಲ ಆರೋಗ್ಯ ಕಾರ್ಡ್ ಯೋಜನೆ ಡಯಾಗ್ನೋಸ್ಟಿಕ್ ಮತ್ತು ಲ್ಯಾಬರೋಟರಿ ಪರೀಕ್ಷೆಗಳು ಸೇರಿದಂತೆ ಮತ್ತಿತರ ವಿವಿಧ ಬಗೆಯ ರೋಗ ತಪಾಸಣೆಯ ಶುಲ್ಕದಲ್ಲಿ 20ರಷ್ಟು ಕಡಿತವಾಗುತ್ತದೆ. ಒಳ ರೋಗಿಗಳಿಗೆ ಮಣಿಪಾಲ ಕಸ್ತೂರಬಾ ಆಸ್ಪತ್ರೆಗೆ ವರ್ಷವೊಂದರಲ್ಲಿ ಎಷ್ಟೇ ಬಾರಿ ದಾಖಲಾದರೂ ಒಳರೋಗಿ ಶುಲ್ಕದಲ್ಲಿ 20 ರಿಯಾಯಿತಿ ದೊರಕುತ್ತದೆ. ಔಷಧಗಳ ಖರೀದಿಯಲ್ಲಿಯೂ ಶೇ.10ರ ವರೆಗೆ ರಿಯಾಯಿತಿ ಘೋಷಿಸಲಾಗಿದೆ. ಪೂರ್ವ ನಿಗದಿತ ಕಾಯಿಲೆಗಳಿಗೂ ರಿಯಾಯಿತಿ ಪಡೆಯಬಹುದಾಗಿರುವ ವಿಶಿಷ್ಟ ಅಂಶವನ್ನು ಮಣಿಪಾಲ ಆರೋಗ್ಯ ಕಾರ್ಡ್ ಹೊಂದಿದೆ ಎಂದು ತಿಳಿಸಿದರು. ಕಾರ್ಡ್ ಯೋಜನೆಗೆ ಒಳಪಡಿಸಲು ಆರ್ಥಿಕ ಮಾನದಂಡದ ಕಟ್ಟುಪಾಡುಗಳಿಲ್ಲ. ಬಡ, ಶ್ರೀಮಂತ, ಮಧ್ಯಮ, ಕೆಳವರ್ಗದ ಪ್ರತಿಯೊಬ್ಬರೂ ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಕುಟುಂಬದ ಸದಸ್ಯರಲ್ಲಿ ಒಬ್ಬರಿಗಾದಲ್ಲಿ ರು. 250, ಒಟ್ಟು ಕುಟುಂಬ ಸದಸ್ಯರಿಗಾದಲ್ಲಿ ರು. 500 ದರದಲ್ಲಿ ಆರೋಗ್ಯ ಕಾರ್ಡ್ ಲಭ್ಯವಿರುತ್ತದೆ. ಕುಟುಂಬದ ಸದಸ್ಯರಲ್ಲಿ ಕಾರ್ಡ್ದಾರರು ಪತ್ನಿ ಹಾಗೂ 25 ವರ್ಷ ಪ್ರಾಯಕ್ಕಿಂತ ಕೆಳಗಿರುವ ಮದುವೆಯಾಗದ ಎಷ್ಟೇ ಮಕ್ಕಳಿದ್ದರೂ ಯೋಜನೆಗೆ ಒಳಪಡುತ್ತಾರೆ. ಪ್ರತಿ ಸದಸ್ಯರಿಗೆ ರು. 100 ದರವನ್ನು ಹೆಚ್ಚುವರಿಯಾಗಿ ಪಾವತಿಸುವ ಮೂಲಕ ಆರೋಗ್ಯ ಕುಟುಂಬ ಕಾರ್ಡ್ ಪಡೆದುಕೊಳ್ಳಲು ಅವಕಾಶವಿರುತ್ತದೆ. ಕಾರ್ಡ್ಗಳ ನವೀಕರಣದಲ್ಲಿ ಶೇ. 10ರ ರಿಯಾಯಿತಿ ತೋರಿಸಲಾಗಿದೆ ಎಂದು ತಿಳಿಸಿದರು.
ಆರೋಗ್ಯ ಕಾರ್ಡ್ನ ಸ್ಥಳೀಯ ವ್ಯವಸ್ಥಾಪಕ ಡಾ. ಕೊಟ್ರೇಶ್ ಮಾತನಾಡಿ, ಪ್ರಸಕ್ತ 2014ರ ಸಾಲಿಗೆ ಮಣಿಪಾಲ ಆರೋಗ್ಯ ಕಾರ್ಡ್ ಪಡೆಯಲಿಚ್ಛಿಸುವವರು ಡಾ. ಕೊಟ್ರೇಶ್ 9481960458, ಈಶಮ್ಮ 9972429784, ಹೊಸಪೇಟೆ ವೀರಾಂಜಿನೇಯ 9900266571, ಸಮೀರ್ ಕುಲಕರ್ಣಿ 9483208264, ಶಿವಪ್ಪ 9480111338, ಬಸವನಗೌಡ 9900731424ಗೆ ಸಂಪರ್ಕಿಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

