ಬಳ್ಳಾರಿ

ಹಲ್ಲೆ ಆರೋಪ: ಜು.3ರಂದು ಸಿಐಡಿ ಅಧಿಕಾರಿ ಪುತ್ರ ವಿಚಾರಣೆ

Published On :

ಬಳ್ಳಾರಿ: ಸಿಐಡಿ ಪೊಲೀಸರ ವಶದಲ್ಲಿದ್ದ ವಿಮ್ಸ್ ಆಸ್ಪತ್ರೆ ವೈದ್ಯರ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಕ್ಕೆ ಸಂಬಂಧಿಸಿ ಜು. 3ರಂದು ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಡಿವೈಎಸ್ಪಿ ಪುತ್ರ ಅರ್ಜುನ್‌ಗೆ ಕೋರ್ಟ್ ಸೂಚಿಸಿದೆ. ವಿಮ್ಸ್‌ನಲ್ಲಿ ವೈದ್ಯಕೀಯ ಸೀಟುಗಳ ಪ್ರವೇಶ ಪರೀಕ್ಷೆ ಹಗರಣದ ಆರೋಪದಡಿ, ಸಿಐಡಿ ಅಧಿಕಾರಿಗಳು 19 ಮಂದಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದರು. ಇವರಲ್ಲಿ ವಿಮ್ಸ್‌ನ ವೈದ್ಯ ಡಾ. ವಿನಾಯಕ ಪ್ರಸನ್ನ ಅವರೂ ಒಬ್ಬರು. ವಿಚಾರಣೆ ನಡೆಯುತ್ತಿದ್ದ ವೇಳೆ ಸೇವೆಯಲ್ಲಿದ್ದ ಸಿಐಡಿ ಡಿವೈಎಸ್‌ಪಿ ಚಲಪತಿ ಪುತ್ರ ಅರ್ಜುನ್ ಅವರು ಡಾ. ವಿನಾಯಕ ಅವರೊಂದಿಗೆ ವಾದ ನಡೆಸಿ ಹಲ್ಲೆಗೆ ಮುಂದಾಗಿದ್ದರೆಂದು ಹೇಳಲಾಗಿದೆ.
ಕೃಷ್ಣಮೃಗ ಬೇಟೆ: 4 ಬಂಧನ
ಬ್ಯಾಡಗಿ: ಕೃಷ್ಣಮೃಗ ಬೇಟೆಯಾಡಿ ಚರ್ಮ, ಮಾಂಸ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಪತ್ತೆ ಹಚ್ಚಿರುವ ಪೊಲೀಸರು, ನಾಲ್ವರು ಆರೋಪಿಗಳನ್ನು ಭಾನುವಾರ ಬೆಳಗಿನ ಜಾವ ಬಂಧಿಸಿದ್ದಾರೆ. ಆರೋಪಿಗಳಾದ ಎಚ್.ಎಂ. ನಾಯಕ್, ನಿಂಗಪ್ಪ ಮಲ್ಲಪ್ಪ ಬೆಳಕೇರಿ, ಸೋಮಶೇಖರ ಯಲ್ಲಪ್ಪ ಕೋರಿ ಹಾಗೂ ಕುಬೇರ ಸಿದ್ದಪ್ಪ ಆಡಿನವರ ಅವರನ್ನೀಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳಿಂದ ಲೈಸನ್ಸ್ ಹೊಂದಿರದ ಒಂದು ನಾಡ ಬಂದೂಕು, 10 ಕೆಜಿಯಷ್ಟು ಜಿಂಕೆ ಮಾಂಸ, 2 ಚರ್ಮ, 1 ಕೊಂಬು, 2 ಮಚ್ಚು ಹಾಗೂ 2 ಆಟೋಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.