ಬಳ್ಳಾರಿ

ರೈಲು ಮಾರ್ಗ ಲೋಕಾರ್ಪಣೆ: ಕಿಕ್ಕಿರಿದು ಸೇರಿದ್ದ ಜನಸ್ತೋಮ

Published On :

ಕೊಟ್ಟೂರು: ಕಳೆದ ಸೋಮವಾರ ಶ್ರೀಗುರುಕೊಟ್ಟೂರೇಶ್ವರ ಸ್ವಾಮಿ ಜಾತ್ರೆ ಸಂದರ್ಭದಲ್ಲಿ ಸೇರಿದ್ದ ಜನಸ್ತೋಮದಷ್ಟೇ ಈ ಸೋಮವಾರ ಕೊಟ್ಟೂರು-ಹರಿಹರ ರೈಲು ಮಾರ್ಗದ ಉದ್ಘಾಟನಾ ಸಮಾರಂಭದಲ್ಲೂ ಸೇರಿತ್ತು.
ರೈಲು ಬರುವಿಕೆಯನ್ನು ಭಾವನಾತ್ಮಕವನ್ನಾಗಿ ಸ್ವೀಕರಿಸುವ ಇಲ್ಲಿನ ಜನತೆ ಈ ಮಹತ್ವದ ಸಮಾರಂಭದಲ್ಲಿ ಸಡಗರ ಸಂಭ್ರಮಗಳೊಂದಿಗೆ ಪಾಲ್ಗೊಂಡು ಸಂಭ್ರಮಿಸಿದರು.
ಕೊಟ್ಟೂರು ರೈಲು ಚಾಲನೆಗೊಳ್ಳುವುದು ನಮ್ಮೂರಿನ ಹೆಮ್ಮೆಯ ವಿಷಯ ಎಂದೇ ಭಾವಿಸಿ ಜನತೆ ರೈಲು ನಿಲ್ದಾಣದತ್ತ ತಂಡೋಪತಂಡವಾಗಿ ಆಗಮಿಸಿದ್ದರು. ಹೊಸ ರೈಲು ಮಾರ್ಗ ಚಾಲನೆಗೊಳ್ಳುವ ಖುಷಿಗೆ ಇಲ್ಲಿನ ಯುವ ಮುಖಂಡ ಪಿ.ಜಿ. ಪಾಟೀಲ್ ಆರಾಧ್ಯದೈವ ಶ್ರೀಗುರುಕೊಟ್ಟೂರೇಶ್ವರ ಸ್ವಾಮಿಗೆ ಮಹಾರುದ್ರಾಭಿಷೇಕ ಸೇವೆ ನೆರವೇರಿಸಿ ಅಭಿಮಾನ ಮೆರೆದರು.
ವೇದಿಕೆಗೇರಿದ ಶಾಸಕ: ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸುವಾಗ ನಿರ್ಲಕ್ಷಿಸಲಾಗಿದೆ ಎಂದು ಮುನಿಸಿಕೊಂಡಿದ್ದ ಸ್ಥಳೀಯ ಶಾಸಕ ಎಸ್. ಭೀಮಾನಾಯ್ಕ ಮೊದ ಮೊದಲು ಸಮಾರಂಭದ ವೇದಿಕೆಗೆ ಆಗಮಿಸದೇ ಸಾರ್ವಜನಿಕರ ಗ್ಯಾಲರಿಯಲ್ಲಿ ಕುಳಿತುಕೊಂಡಿದ್ದರು. ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವನಾಯ್ಕ ಅವರನ್ನು ಕರೆದರು.
ಇದಕ್ಕೊಪ್ಪದ ಶಾಸಕ ಭೀಮಾನಾಯ್ಕ ಸಾರ್ವಜನಿಕರ ಗ್ಯಾಲರಿಯಲ್ಲೇ ಕುಳಿತಿದ್ದರು. ನಂತರ ಜಿಲ್ಲಾಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್,  ಶಾಸಕ ಭೀಮಾನಾಯ್ಕರಿದ್ದ ಸ್ಥಳಕ್ಕೆ ಆಗಮಿಸಿ ಅವರನ್ನು ವೇದಿಕೆಯತ್ತ ಕರೆದೊಯ್ಯುವಲ್ಲಿ ಯಶಸ್ವಿಯಾದರು.
ಪೌರ ಸನ್ಮಾನ: ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೊಟ್ಟೂರು ಪಟ್ಟಣ ಪಂಚಾಯಿತಿ ಆಡಳಿತ ಸನ್ಮಾನಿಸಿತು. ಶಾಸಕ ಎಸ್. ಭೀಮಾನಾಯ್ಕ, ಮುಖಂಡ ಎಂ.ಎಂ.ಜೆ. ಹರ್ಷವರ್ಧನ್, ಪಟ್ಟಣಪಂಚಾಯಿತಿ ಅಧ್ಯಕ್ಷೆ ಅನುಸೂಯಾ ಸೆರೆಗಾರ್, ಉಪಾಧ್ಯಕ್ಷ ಎಸ್. ಗುರುಶಾಂತಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಮಾ ಮಂಜುನಾಥಗೌಡ, ಶ್ರೀಗುರುಕೊಟ್ಟೂರೇಶ್ವರ ಸ್ವಾಮಿಯ ಬೆಳ್ಳಿಯ ಭಾವಚಿತ್ರ ನೀಡಿ, ಶಾಲು ಹೊದಿಸಿ ಸನ್ಮಾನಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.