ಸ್ವಪ್ರಯತ್ನದಿಂದ ಅಭಿವೃದ್ಧಿ ಹೊಂದಿ: ಉಜ್ಜಿನಿಶ್ರೀ
ಬಳ್ಳಾರಿ: ಪ್ರತಿಯೊಬ್ಬರೂ ತಮ್ಮಲ್ಲಿನ ಸಾಮರ್ಥ್ಯವನ್ನು ಗುರುತಿಸಿಕೊಂಡು, ಸ್ವಪ್ರಯತ್ನದಿಂದ ಅಭಿವೃದ್ಧಿ ಹೊಂದಬೇಕು ಎಂದು ಉಜ್ಜಿನಿ ಪೀಠದ ಶ್ರೀ ಸಿದ್ಧಲಿಂಗರಾಜ ದೇಶೀಕೇಂದ್ರ ಸ್ವಾಮೀಜಿ ಹೇಳಿದರು.
ನಗರದ ರಾಘವ ಕಲಾಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಪಂಡಿತ ಪುಟ್ಟರಾಜ ಕವಿಗವಾಯಿಗಳ ಸೇವಾ ಸಂಘ ಏರ್ಪಡಿಸಿದ್ದ ಪಂ. ಪುಟ್ಟರಾಜ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ನಮ್ಮ ಅಭಿವೃದ್ಧಿಯೊಂದಿಗೆ ಸಮಾಜದಲ್ಲಿನ ಇತರರ ಅಭಿವೃದ್ಧಿಗೂ ಸಹಕರಿಸಬೇಕು. ನಮ್ಮ ಪ್ರಯತ್ನ, ಚಿಂತನೆಗಳು ಸಮಾಜದ ಉದ್ಧಾರಕ್ಕೆ ಬಳಕೆಯಾಗಬೇಕು. ಎಲ್ಲರೂ ಸಾರ್ಥಕ ಜೀವನ ನಡೆಸುವ ಗುರಿ-ಸಂಕಲ್ಪಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಂಪಿ ಮೂರುಸಾವಿರ ದೇವರ ಮಠದ ವಾಮದೇವ ಮಹಾಂತ ಸ್ವಾಮೀಜಿ ಮಾತನಾಡಿದರು. ನಂತರ ಪ್ರಸಿದ್ಧ ಹಿಂದೂಸ್ತಾನಿ ಗಾಯಕ ಧಾರವಾಡದ ಪಂಡಿತ್ ಸೋಮನಾಥ ಮರಡೂರು ಅವರಿಗೆ ಡಾ. ಪಂಡಿತ್ ಪುಟ್ಟರಾಜ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಲಿಂ.ಸಿ.ಎಂ.ವೀರಭದ್ರಯ್ಯ ರಚಿಸಿದ ಶ್ರೀ ವೀರಭದ್ರೇಶ್ವರ ಸುತ್ತಿ ಮತ್ತು ಸಂಕಲ್ಪ ಎಂಬ ಪುಸ್ತಕ ಹಾಗೂ ಮಠಂ ಗುರುಪ್ರಸಾದ್ ರಚಿಸಿದ ಪಂಚಾಂಗ ಬಿಡುಗಡೆಗೊಳಿಸಲಾಯಿತು.
ಗದುಗಿನ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಉದ್ಘಾಟಿಸಿದರು. ಕಮ್ಮರಚೇಡು ಮಠದ ಕಲ್ಯಾಣ ಸ್ವಾಮೀಜಿ, ಪಂಚವಣಿಗಿ ಮಠದ ಅಭಿನವ ಸಿದ್ಧಲಿಂಗ ಸ್ವಾಮೀಜಿ, ಕುರುಗೋಡಿನ ರಾಘವಾಂಕ ಮಠದ ರಾಘವಾಂಕ ಮಲ್ಲಿಕಾರ್ಜುನ ಸ್ವಾಮೀಜಿ, ಪಂಪಾಪತಿ ಶಾಸ್ತ್ರಿ, ಮುತ್ತಿನಪೆಂಡಿ ಮಠದ ಶಿವರುದ್ರ ತಾತ ಇತರರು ನೇತೃತ್ವ ವಹಿಸಿದ್ದರು.
ಮಾಜಿ ಸಂಸದ ಕೆ.ಸಿ. ಕೊಂಡಯ್ಯ, ಬಿಜೆಪಿ ಮುಖಂಡ ಗುತ್ತಿಗನೂರು ವಿರೂಪಾಕ್ಷಗೌಡ, ಬುಡಾ ಮಾಜಿ ಅಧ್ಯಕ್ಷ ಗುರುಲಿಂಗನಗೌಡ, ರೈತ ಮುಖಂಡ ದರೂರು ಪುರುಷೋತ್ತಮಗೌಡ, ಎರ್ರೆಂಗಳಿ ತಿಮ್ಮಾರೆಡ್ಡಿ, ರೂಪನಗುಡಿ ಬಸವರಾಜ ಇದ್ದರು. ಸಂಘದ ಅಧ್ಯಕ್ಷ ಎಂ. ಮೃತ್ಯುಂಜಯಸ್ವಾಮಿ ಸ್ವಾಗತಿಸಿದರು. ಸಿದ್ಧರಾಮ ಕಲ್ಮಠ ನಿರೂಪಿಸಿ, ವಂದಿಸಿದರು. ನಂತರ ಪಂ. ಸೋಮನಾಥ ಮರಡೂರರಿಂದ ವಚನ ಗಾಯನ ಕಾರ್ಯಕ್ರಮ ಜರುಗಿತು. ದೊಡ್ಡಯ್ಯ ಗವಾಯಿ ಹಾರ್ಮೋನಿಯಂ ಮತ್ತು ಶಂಕರ ಬಿನ್ನಾಳ್ ತಬಲಾ ಸಾಥ್ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

