ಎನ್ನೆಸ್ಸೆಸ್ನಿಂದ ಬದುಕಿಗೆ ಹೊಸ ಆಯಾಮ
ಹೂವಿನಹಡಗಲಿ: ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಭಾಗವಹಿಸಿ ಅದು ನೀಡುವ ಅನುಭವ ಬದುಕಿಗೆ ಹೊಸ ಆಯಾಮ ನೀಡುತ್ತದೆ ಎಂದು ಉಪನ್ಯಾಸಕ ಶಾಂತಮೂರ್ತಿಬಿ. ಕುಲಕರ್ಣಿ ಅಭಿಪ್ರಾಯಪಟ್ಟರು.
ತಾಲೂಕಿನ ಕೊಂಬಳಿಯಲ್ಲಿ ಜಿಬಿಆರ್ ಪದವಿ ಕಾಲೇಜಿನ ಎನ್ನೆಸ್ಸೆಸ್ ಘಟಕಗಳ ವಾರ್ಷಿಕ ವಿಶೇಷ ಸೇವಾ ಶಿಬಿರದಲ್ಲಿ ಸಮಾರೋಪದಲ್ಲಿ ಮಾತನಾಡಿ, ಎನ್ನೆಸ್ಸೆಸ್ ಕೇವಲ ಶೈಕ್ಷಣಿಕ ಕಾರ್ಯಕ್ರಮ ಅಲ್ಲದೆ, ಬದುಕನ್ನು ರೂಪಿಸಿಕೊಳ್ಳುವ ಉತ್ತಮ ವೇದಿಕೆಯಾಗಿದೆ ಎಂದ ಅವರು, ವಿದ್ಯಾರ್ಥಿಗಳು ಶಿಬಿರದಲ್ಲಿ ತಮ್ಮ ನಿಷ್ಠೆ, ಪ್ರಾಮಾಣಿಕ ಹಾಗೂ ಸೇವಾ ಮನೋಭಾವನೆಯಿಂದ ಶ್ರಮಿಸಿ, ಕೀರ್ತಿ ತಂದಿದ್ದಾರೆ ಎಂದು ಶ್ಲಾಘಿಸಿದರು.
ರೈತ ಕೊಂಬಳಿ ಸೊಪ್ಪಿನ ಬಾಳಪ್ಪ, ಪ್ರಭಾರಿ ಪ್ರಾಚಾರ್ಯ ಎನ್. ವರಕುಮಾರಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಪೂ ಕಾಲೇಜಿನ ಪ್ರಾಚಾರ್ಯ ಡಾ.ಎ.ಎಂ. ರಾಜಶೇಖರಯ್ಯ, ಬಿ. ಶಾಂತಪ್ಪ, ಗ್ರಾಪಂ ಉಪಾಧ್ಯಕ್ಷೆ ನಿರ್ಮಲಾ ಗುಜ್ಜಲ, ಪಪೂ ಕಾಲೇಜಿನ ಎನ್ನೆಸ್ಸೆಸ್ ಅಧಿಕಾರಿ ಎಲ್. ಅಂದಾನಪ್ಪ, ಉಪನ್ಯಾಸಕ ಪ್ರಭು ಸೊಪ್ಪಿನ ಉಪಸ್ಥಿತರಿದ್ದರು. ಶಿಬಿರಾರ್ಥಿ ಕೆ. ನಂದಕುಮಾರ್, ಎಚ್.ಎಂ. ವಾಣಿಶ್ರೀ, ನವೀನ್ಕುಮಾರ್, ಅಜೇಯ, ಅಕ್ಕಿ ಜಗದೀಶ್, ಕೆ. ಜಯಪ್ರಕಾಶ್ ಅನಿಸಿಕೆ ಹಂಚಿಕೊಂಡರು.
ಬಿ ಘಟಕದ ಶಿಬಿರಾಧಿಕಾರಿ ಡಾ.ಎಚ್.ಕೆ. ಮಹೇಶ್ ಸ್ವಾಗತಿಸಿದರು. ಉಪನ್ಯಾಸಕ ಪರಶುರಾಮ ನಾಗೋಜಿ ನಿರ್ವಹಿಸಿದರು. ಎ ಘಟಕದ ಶಿಬಿರಾಧಿಕಾರಿ ಡಾ.ವೈ. ಚಂದ್ರಬಾಬು ವಂದಿಸಿದರು. ನಂತರ ನಡೆದ ಶಿಬಾರಾರ್ಥಿಗಳ ಸೋರುತಿಹವು ಸಂಬಂಧಗಳು ಎಂಬ ನಾಟಕ ಪ್ರದರ್ಶನ ಜನಮನ ಸೆಳೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

