ಬಳ್ಳಾರಿ

ಧಾರ್ಮಿಕ ಕಾರ್ಯದಿಂದ ನೆಮ್ಮದಿ

Published On :

ಕನ್ನಡಪ್ರಭ ವಾರ್ತೆ, ಕಂಪ್ಲಿ, ಮಾ. 13
ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಸುಖಿ ಹಾಗೂ ನೆಮ್ಮದಿ ಜೀವನ ನಡೆಸಲು ಸಾಧ್ಯ ಎಂದು ಕಲ್ಯಾಣ ಚೌಕಿಮಠ ಒಡೆಯರ್ ಹಾಗೂ ನವ ಚಂಡಿಯಾಗದ ಸಂಕಲ್ಪ ಕರ್ತೃ ಕೆ.ಎಂ. ಚನ್ನಮಲ್ಲಯ್ಯ ಶಾಸ್ತ್ರಿ ತಿಳಿಸಿದರು.
ಇಲ್ಲಿನ ಕಲ್ಯಾಣ ಚೌಕಿಮಠದ ಆವರಣದಲ್ಲಿ ಲೋಕ ಕಲ್ಯಾಣಾರ್ಥ ಬುಧವಾರದಿಂದ ಹಮ್ಮಿಕೊಂಡಿರುವ ನವ ಚಂಡಿಯಾಗ ಸಂಕಲ್ಪದ ಧ್ವಜಾರೋಹಣ ನೆರವೇರಿಸಿ, ಯಾಗಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ನಮ್ಮ ಆಲೋಚನೆಯಂತೆ ಬದುಕು ರೂಪುಗೊಳ್ಳುವುದರಿಂದ ಉತ್ತಮ ಆಲೋಚನೆ ಹಾಗೂ ಸಂಕಲ್ಪಗಳನ್ನು ಹೊಂದಿದ್ದಲ್ಲಿ ಜೀವನದಲ್ಲಿ ಉತ್ತಮ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಗುರು ದೊಡ್ಡಬಸವೇಶ್ವರ ಗುರುಕುಲ ಮಾದರಿ ವೈದಿಕ ಪಾಠಶಾಲೆ ಪ್ರಾಚಾರ್ಯ ಕೆ.ಎಂ. ಬಸವರಾಜಶಾಸ್ತ್ರಿ ಮಾತನಾಡಿ, ಲೋಕ ಕಲ್ಯಾಣಾರ್ಥ, ಜನ್ಮದಾರಿದ್ರ್ಯ ನಿವಾರಣಾರ್ಥ, ಶಾಂತಿ ಸಮೃದ್ಧಿಗಾಗಿ ನವ ಚಂಡಿಯಾಗ ಹಮ್ಮಿಕೊಂಡಿದ್ದು, ಬುಧವಾರ ಗಂಗಾ ಪೂಜೆಯೊಂದಿಗೆ ಯಾಗ ಮಂಟಪ ಪ್ರವೇಶಿಸಿ, ಮಹಾಗಣಪತಿ ಪೂಜಾ, ನವ ಚಂಡಿಪೂಜೆ ಸೇರಿ ಸಕಲ ಪರಿವಾರ ದೇವತೆಗಳ ಪೂಜೆ ನೆರವೇರಿಸಲಾಯಿತು ಎಂದರು.
ಜೆ. ಹೊಸಳ್ಳಿಯ ಗುರುಪಟ್ಟದ ಸ್ವಾಮಿಮಠದ ಶಂಭುಲಿಂಗ ದೇವರು ಪ್ರಧಾನ ಗುರುಬ್ರಹ್ಮರಾಗಿ, ಶ್ರೀಶೈಲ ದೇವಸ್ಥಾನದ ಪ್ರಧಾನ ಅರ್ಚಕ ವೇದಾಚಾರ್ಯ ಚಂದ್ರಶೇಖರಚಾರ್ಯ ಸ್ವಾಮೀಜಿ ಯಾಗ ಗಣರಾಗಿ ನವ ಚಂಡಿಯಾಗ ನೆರವೇರಿಸಿದರು. ಯಾಗದಲ್ಲಿ ಹೊಸಮಠದ ಚಂದ್ರಶೇಖರಶಾಸ್ತ್ರಿ, ಮಲ್ಲಿಕಾರ್ಜುನಗೌಡ, ಯು.ಎಂ. ವಿದ್ಯಾಶಂಕರ, ಎಸ್.ಡಿ. ಬಸವರಾಜ್, ಜೆ.ಎಂ. ಚನ್ನಬಸವ, ಕೋಟೆ ರಾಕೇಶ್, ರಾಘವೇಂದ್ರ, ಟಿ.ಎಚ್.ಎಂ. ಗುರುಮೂರ್ತಿ, ಬಾಳಿಕಾಯಿ ಚನ್ನಬಸಪ್ಪ, ಪಂಚಯ್ಯಸ್ವಾಮಿ ಬೆನಕನಾಳಮಠ, ಕೋರಿ ಶರಣಪ್ಪ, ತಿಪ್ಪೇಸ್ವಾಮಿ, ಜೀರು ಬಾಬು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.
ಶುಕ್ರವಾರ ದುರ್ಗಾ ಪರಮೇಶ್ವರಿ ನೂತನ ಪಂಚಲೋಹ ಮೂರ್ತಿ ಪ್ರತಿಷ್ಠಾಪನೆ, ಜಗದ್ಗುರು ರೇಣುಕಾಚಾರ್ಯರ ಜಯಂತಿ, ಗಂಗೆಸ್ಥಳ ಮೆರವಣಿಗೆ ಹಾಗೂ ಗುರು ದೊಡ್ಡಬಸವೇಶ್ವರ ಗುರುಕುಲ ಮಾದರಿ ವೈದಿಕ ಹಾಗೂ ಜ್ಯೋತಿಷ್ಯ ಪಾಠಶಾಲೆಯ 3ನೇ ವಾರ್ಷಿಕೋತ್ಸವ ಸಮಾರಂಭದ ಅಂಗವಾಗಿ ಧರ್ಮ ಜಾಗೃತಿ ಸಭೆ ನಡೆಯಲಿದೆ ಎಂದು ಕೋರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.