ಬಳ್ಳಾರಿ

124 ದಿನಗಳ ಬಳಿಕ ಇಬ್ರಾಹಿಂ ಪತ್ತೆ

124 ದಿನಗಳ ಬಳಿಕ ಇಬ್ರಾಹಿಂ ಪತ್ತೆ
Published On :

ಬಳ್ಳಾರಿ/ಸಂಡೂರು: 2013ರಂದು ಒಡಿಶಾದಲ್ಲಿ ಐಬಿಎಂ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾಗ ಕಾಣೆಯಾಗಿದ್ದ ಬಳ್ಳಾರಿ ಜಿಲ್ಲೆಯ ಇಬ್ರಾಹಿಂ ಷರೀಫ್ ಶುಕ್ರವಾರ ಬೆ. 6.30ಕ್ಕೆ ಒಡಿಶಾದ ಭುವನೇಶ್ವರ ಪಟಿಯಾ ಪ್ರದೇಶದಲ್ಲಿರುವ ಅವರ ಮನೆಗೆ ಮರಳಿದ್ದಾರೆ.
4 ತಿಂಗಳಿಂದ ಮಗನ ಬರುವಿಕೆಗೆ ಕಾಯುತ್ತಿದ್ದ ಪೋಷಕರಿಗೆ ಶುಕ್ರವಾರ ಶುಭ ದಿನವಾಗಿತ್ತು. ಸಂಡೂರಿನ ಯಶವಂತನಗರದ ನಿವಾಸದಲ್ಲಿ ಷರೀಫ್ ಪೋಷಕರು, ಸಂಬಂಧಿಕರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಮಗ ಕಾಣೆಯಾಗಿದ್ದರಿಂದ ತಂದೆ ಗಿಡ್ಡಸಾಬ್ ಹಾಗೂ ಇತರ ಕುಟುಂಬ ವರ್ಗದವರು ಚಿಂತೆಯಲ್ಲಿ ಕಾಲ ಕಳೆಯುತ್ತಿದ್ದರು. ಶುಕ್ರವಾರ ಬೆಳಗ್ಗೆ 6.30ಕ್ಕೆ ಒಡಿಶಾದ ಭುವನೇಶ್ವರದಿಂದ ಷರೀಫ್ ಪತ್ನಿ ಕರೆ ಮಾಡಿ, ಗಂಡ ಮನೆಗೆ ಮರಳಿರುವ ಶುಭ ವಾರ್ತೆಯನ್ನು ತಿಳಿಸಿದ್ದಾರೆ. ಆದರೆ, ಷರೀಫ್ ಏನೂ ಮಾತನಾಡುವ ಸ್ಥಿತಿಯಲ್ಲಿ ಇಲ್ಲವೆಂದು ತಿಳಿಸಿದ್ದಾರೆ. ಮಗ ಮರಳಿದ್ದರಿಂದ ಗಿಡ್ಡಸಾಬ್ ಹಾಗೂ ಕುಟುಂಬಸ್ಥರು ಸಂತೋಷ ವ್ಯಕ್ತಪಡಿಸಿದ್ದಾರೆ.  
ಕೆಲಸ ಮಾಡಿದ್ದು ಸಾಕು: ಇಬ್ರಾಹಿಂ ಷರೀಫ್ ಅವರ ತಂದೆ ಗಿಡ್ಡಸಾಬ್ ಮಾತನಾಡಿ, ಬೆಳಗ್ಗೆ ನನ್ನ ಸೊಸೆ ಫೋನ್ ಮಾಡಿ ಷರೀಫ್ ಬಂದಿದ್ದಾನೆ ಎಂದು ಹೇಳಿದಳು. ಅದನ್ನು ಕೇಳಿ ಎಲ್ಲಿಲ್ಲದ ಸಂತೋಷವಾಯಿತು. ಮಗನ ಬರುವಿಕೆಗಾಗಿ ಪ್ರಾರ್ಥನೆ ಸಲ್ಲಿಸಿದ್ದೇನೆ. ಮಗ ಬಂದಿರುವುದು ತೀವ್ರ ಖುಷಿಯಾಗಿದೆ. ಶೀಘ್ರವೇ ನಾವು ಒಡಿಶಾಗೆ ತೆರಳುತ್ತೇವೆ. ಮಗ ಅಲ್ಲಿ ಕೆಲಸ ಮಾಡಿದ್ದು ಸಾಕು. ರಾಜಿನಾಮೆ ಕೊಡಿಸಿ ಮನೆಗೆ ಕರೆತರುತ್ತೇವೆ ಎಂದು 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ. ಸಹೋದರ ಜಿಲಾನ್ ಮಾತನಾಡಿ, ಷರೀಫ್ನನ್ನು ಹುಡುಕಿ ಕೊಡುವಂತೆ ಒಡಿಶಾ ಮತ್ತು ಕರ್ನಾಟಕ ಸರ್ಕಾರದ ಮೋರೆ ಹೋಗಿದ್ದೆವು. ಸಹೋದರ ಮನೆಗೆ ಬಂದಿರುವುದು ಖುಷಿಯಾಗಿದೆ ಎಂದರು. ಭುವನೇಶ್ವರದಲ್ಲಿ ಪೊಲೀಸ್ ಕಮಿಷನರ್ ಆರ್.ಪಿ. ಶರ್ಮಾ ತಮ್ಮ ಕಚೇರಿಯಲ್ಲಿ ಇಬ್ರಾಹಿಂ ಷರೀಫ್ ಅವರನ್ನು ವಿಚಾರಣೆ ಮಾಡಿದ್ದಾರೆ. ಆದರೆ, ಮಾನಸಿಕವಾಗಿ ಅಘಾತವಾಗಿರುವುದರಿಂದ ಅವರು ಯಾವ ಮಾಹಿತಿಯನ್ನೂ ಕೊಡುವ ಸ್ಥಿತಿಯಲ್ಲಿರಲಿಲ್ಲ. ಹೀಗಾಗಿ, ಅವರನ್ನು ಆರೋಗ್ಯ ತಪಾಣೆಗೆ ಆಸ್ಪತ್ರೆಗೆ ಕಳುಹಿಸಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.