ಪರಿಸರ ಸಂರಕ್ಷಣೆಗೆ ಕನಿಷ್ಠ 125 ಗಿಡ ನೆಡಿ: ನಾಗರಾಜ
ಹೊಸಪೇಟೆ: ವಾಸವಿ ಜಯಂತಿಯಂದು ಹಿರಿಯರ ಪಾದಪೂಜೆ ನಡೆಸಬೇಕು ಹಾಗೂ ಪರಿಸರ ಸಂರಕ್ಷಣೆಗೆ ಕನಿಷ್ಠ 125 ಗಿಡಗಳನ್ನು ನೆಡಬೇಕೆಂದು ವಾಸವಿ ಇಂಟರ್ನ್ಯಾಷನಲ್ ಕ್ಲಬ್ ಜಿಲ್ಲಾ ಘಟಕದ ಗೌವರ್ನರ್ ಕೆ.ಆರ್. ನಾಗರಾಜ ಹೇಳಿದರು.
ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ವಾಸವಿ ಇಂಟರ್ನ್ಯಾಷನಲ್ ಕ್ಲಬ್ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮೇ 19ರಂದು ನಡೆಯುವ ವಾಸವಿ ಜಯಂತಿಯಲ್ಲಿ ತಂದೆ-ತಾಯಿಗಳು, ಇಲ್ಲವೇ ಅತ್ತೆ, ಮಾವಂದಿರ ಪಾದಪೂಜೆ ನಡೆಸಬೇಕು. ಅವರಿಲ್ಲದಿದ್ದರೆ ಹಿರಿಯರ ಪಾದಪೂಜೆ ನಡೆಸಿ, ಗೌರವ ಸಲ್ಲಿಸಬೇಕು. ವಾಸವಿ ಇಂಟರ್ನ್ಯಾಷನಲ್ ಕ್ಲಬ್ ಹೆಸರಾಗುವಂತೆ ಕೆಲಸ ಮಾಡಬೇಕೆಂದರು.
ಸಮಾರಂಭವನ್ನು ಎಂ.ಎಲ್. ಉದಯಕುಮಾರ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕೆ.ಎನ್. ರಾಜೇಶ್ವರಿ, ಡಾ. ವೆಂಕಟಚಲಪತಿ ಶೆಟ್ಟಿ, ಕೆ. ಪೋತಣ್ಣ ಶೆಟ್ಟಿ, ಕೆ.ಎಸ್. ಸುಬ್ರಹ್ಮಣ್ಯ ಗುಪ್ತ, ಎಂ.ಇ. ಮಾಲತೇಶ, ಅರ್ಯವೈಶ್ಯ ಸಂಘದ ಅಧ್ಯಕ್ಷ ಕೆ. ಸೀತಾರಾಮ ಶೆಟ್ಟಿ, ಆರ್ಯವೈಶ್ಯ ಸೇವಾಸಮಿತಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಅವೋಪ ರಾಜ್ಯಾಧ್ಯಕ್ಷ ಸಂಜೀವಪ್ಪ ಶೆಟ್ಟಿ ಇತರರು ಸಭೆಯಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭ ಅಧ್ಯಕ್ಷ ಕೆ.ಎಸ್. ಸುಬ್ರಹ್ಮಣ್ಯ ಗುಪ್ತ, ಕಾರ್ಯದರ್ಶಿ ಬಿ. ಸತೀಶ್ಕುಮಾರ್, ಖಜಾಂಚಿ ವೈ. ಸೋಮಶೇಖರ್, ಉಪಾಧ್ಯಕ್ಷ ಪಿ.ಎಸ್. ಮಲ್ಲಿಕಾರ್ಜುನ, ಡಿ.ಆರ್. ಬದ್ರಿನಾಥ್, ಪಿ.ಎಸ್. ಶ್ರೀನಿವಾಸ, ಜಂಟಿ ಕಾರ್ಯದರ್ಶಿ ಚಿನ್ನಿರಾಮಕುಮಾರ್, ಪಿಆರ್ಒ ಅಮದುಲ್ ಶ್ರೀಧರ, ನಿರ್ದೇಶಕರಾಗಿ ಎಚ್. ಮಂಜುನಾಥ, ಪಿ. ಸುಬ್ರಹ್ಮಣ್ಯ, ಎಸ್. ವೆಂಕಟೇಶ್ ಶೆಟ್ಟಿ, ಭೂಪಾಳ್ ಶ್ರೀಪಾದ, ಮನಸಾಲಿ ರಮೇಶ್, ಕಾಕುಬಾಳು ರಾಜೇಂದ್ರ, ಎಸ್. ವಿಶ್ವನಾಥ, ಕಾಕುಬಾಳು ಶ್ರೀನಿವಾಸ, ರಮೇಶ ಗುಪ್ತ, ಭೂಪಾಳ್ ಪ್ರಹ್ಲಾದ್, ತಲ್ಲಂ ಶ್ರೀಗಣೇಶ್ ಅಧಿಕಾರ ಪದಗ್ರಹಣ ಸ್ವೀಕರಿಸಿದರು.
ನಾಗೇಶ್ವರ ರಾವ್ ಸ್ವಾಗತಿಸಿದರು. ರೇಖಾ ಸುಬ್ರಹ್ಮಣ್ಯ ಪ್ರಾರ್ಥಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

