ಉತ್ತಮ ಆಡಳಿತಕ್ಕೆ ಮಾನ್ಯತೆ ನೀಡಿ
ಕೊಟ್ಟೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಲವು ಜನಪರ ಯೋಜನೆ ಜಾರಿಗೊಳಿಸುವ ಮೂಲಕ ರಾಜ್ಯದ ಜನರ ಹಿತ ಕಾಪಾಡುತ್ತಿದೆ. ಇದಕ್ಕೆ ಒತ್ತಾಸೆಯಾಗಿ ಜನತೆ ನಿಲ್ಲಬೇಕು. ಈ ನಿಟ್ಟಿನಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತನೀಡುವ ಮೂಲಕ ಅತ್ಯುತ್ತಮ ಆಡಳಿತಕ್ಕೆ ಮಾನ್ಯತೆ ನೀಡಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಶಾಸಕ ಎಂ.ಪಿ. ರವೀಂದ್ರ ಮನವಿ ಮಾಡಿದರು.
ಸಮೀಪದ ಮಲ್ಲನಾಯಕನಹಳ್ಳಿಯಲ್ಲಿ ನಡೆದ ಕಾಂಗ್ರೆಸ್ ಮರು ಸೇರ್ಪಡೆ ಕಾರ್ಯಕ್ರಮದಲ್ಲಿ ಕೆಜೆಪಿ ಮುಖಂಡ ಪಿ.ಎಚ್. ದೊಡ್ಡರಾಮಣ್ಣ, ಅವರ ಬೆಂಬಲಿಗರನ್ನು ಪಕ್ಷಕ್ಕೆ ಸ್ವಾಗತಿಸಿ ಅವರು, ಅಭಿವೃದ್ಧಿಯತ್ತ ಮತ್ತಷ್ಟು ರಾಜ್ಯ ಕೊಂಡೊಯ್ಯಬೇಕು. ಎನ್.ವೈ. ಹನುಮಂತಪ್ಪ ಸಜ್ಜನ ರಾಜಕಾರಣಕ್ಕೆ ಹೆಸರಾದವರು. ಇಂಥವರನ್ನು ಲೋಕಸಭೆಗೆ ಕಳಿಸಿ ಮತದಾರರು ಪ್ರಬುದ್ಧತೆ ತೋರಬೇಕು ಎಂದರು.
ಅಭ್ಯರ್ಥಿ ಎನ್.ವೈ. ಹನುಮಂತಪ್ಪ ಮಾತನಾಡಿ, ಲೋಕಸಭಾ ಚುನಾವಣೆಗೆ ತಾವು ಈ ಹಿಂದೆ ನಿಂತಾಗ ಜನತೆ ತಮ್ಮನ್ನು ಆಶೀರ್ವದಿಸಿದರಾದರು, ಗೆಲವಿನತ್ತ ಕೊಂಡೊಯ್ಯಲಿಲ್ಲ. ಈ ಸಲ ಗೆಲುವಿನತ್ತ ಕೊಂಡೊಯ್ಯಲು ನಿರ್ಧರಿಸಿದ್ದಾರೆ. ಜನರ ಆಜ್ಞೆಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತೇನೆ ಎಂದರು.
ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಮಾತನಾಡಿದರು. ಮುಖಂಡ ಪಿ.ಎಚ್. ದೊಡ್ಡ ರಾಮಣ್ಣ, ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಕಾಂಗ್ರೆಸ್‌ನ್ನು ಕಳೆದ ವಿಧಾನಸಬಾ ಚುನಾವಣೆ ಕಾಲಕ್ಕೆ ತೊರೆದು ತಪ್ಪು ಮಾಡಿದೆ. ಇನ್ಯಾವತ್ತೂ ಕಾಂಗ್ರೆಸ್ ತೊರೆಯಲ್ಲ. ಹನುಮಂತಪ್ಪ ಗೆಲವಿಗೆ ಶ್ರಮಿಸುವೆ ಎಂದರು.
ಎಂ.ಯು. ಪರಮೇಶ್ವರಯ್ಯ, ಪಿ.ಎಚ್. ಸಣ್ಣರಾಮಣ್ಣ, ಹರಾಳು ಕೊಟ್ರುಗೌಡ, ಕನ್ನಾಕಟ್ಟೆ ಹಾಲನಗೌಡ, ಜಿ. ಕೊಮಾರಪ್ಪ, ಡಿ. ನಾಗೇಶ್, ಪಿ.ಎಚ್. ಗಿರಿರಾಜ, ಪಿ.ಎಚ್. ಜಾನಕಿ ರಾಮಣ್ಣ, ಮತ್ತಿತರರು ಕಾಂಗ್ರೆಸ್ ಸೇರ್ಪಡೆಗೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

