ಬಳ್ಳಾರಿ

1253 ದೂರು: ಟ್ಯಾಂಕರ್ ನೀರು ಪೂರೈಕೆ

Published On :

ಬಳ್ಳಾರಿ: ರಾಜ್ಯಾದ್ಯಂತ ಕಳೆದ 5 ದಿನಗಳಲ್ಲಿ ಸುಮಾರು 1253 ದೂರುಗಳು ಬಂದಿದ್ದು, ಈ ಪೈಕಿ ಅಸಮರ್ಪಕ ವ್ಯವಸ್ಥೆ, ಕುಡಿವ ನೀರಿನ ಸಂಪರ್ಕ, ಶುದ್ಧ ನೀರು, ಯಾಂತ್ರಿಕ ಲೋಪ ಇತರೆ ಸಮಸ್ಯೆಗಳ ಕುರಿತು ಬಂದ ಒಟ್ಟು 161 ದೂರುಗಳು ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆಗಳದ್ದಾಗಿವೆ. 222 ದೂರುಗಳು ಇತ್ಯರ್ಥವಾಗಿದ್ದು, 1031 ದೂರುಗಳು ಬಾಕಿಯಿವೆ ಎಂದು ಪಂಚಾಯತ್ ರಾಜ್ಯ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು.
ಗ್ರಾಮೀಣ ಭಾಗದ ಕುಡಿವ ನೀರಿಗೆ ಸಂಬಂಧಿಸಿದಂತೆ ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಒಟ್ಟು 114 ಸಮಸ್ಯಾತ್ಮಕ ಜನವಸತಿ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ.
ತುರ್ತು ಕ್ರಮ ಕೈಗೊಳ್ಳಿ: ರಾಜ್ಯ ಸರ್ಕಾರ ಕುಡಿವ ನೀರಿಗಾಗಿ ಹಲವಾರು ಕ್ರಮ ಕೈಗೊಂಡು ಹಣ ಬಿಡುಗಡೆ ಮಾಡಿದೆ. 2013-14ನೇ ಸಾಲಿನಲ್ಲಿ ಮೂರು ಜಿಲ್ಲೆಗಳಿಗೆ ರು.1984 ಕೋಟಿ ಬಿಡುಗಡೆ ಮಾಡಿದ್ದು, ಈ ಪೈಕಿ ರು.1740 ಕೋಟಿ ವ್ಯಯಿಸಲಾಗಿದೆ. ರು.244 ಕೋಟಿ ಜಿಪಂನಲ್ಲಿ ಬಾಕಿಯಿದೆ. ನೀರಿನ ಸಂಕಷ್ಟ ಕುರಿತು ಸಿಎಂ ಸಿದ್ದರಾಮಯ್ಯನವರೂ ಜಿಲ್ಲೆಗೆ ರು.100 ಕೋಟಿ ವಿಶೇಷ ಅನುದಾನದಡಿ ಬಿಡುಗಡೆ ಮಾಡಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಿಗೆ ಹಂಚಿಕೆ ಮಾಡಿ ಏ. 27ರಂದು ಆದೇಶ ಹೊರಡಿಸಿದ್ದಾರೆ. ರಾಷ್ಟ್ರೀಯ ಕುಡಿವ ನೀರಿನ ಯೋಜನೆಯಡಿ ರು.176 ಕೋಟಿ, ನೈಸರ್ಗಿಕ ವಿಪತ್ತು ನಿರ್ವಹಣಾ ಪರಿಹಾರ ನಿಧಿ (ಸಿಆರ್‌ಎಫ್) ಬಳಸಿಕೊಳ್ಳಬಹುದು. ಅಧಿಕಾರಿಗಳು ಕುಡಿವ ನೀರಿನ ಬಗ್ಗೆ ನಿರ್ಲಕ್ಷ್ಯ ವಹಿಸದೆ ಆದ್ಯತೆ ಮೇರೆಗೆ ತುರ್ತು ಕ್ರಮ ಕೈಗೊಳ್ಳಬೇಕೆಂದು ತಾಕೀತು ಮಾಡಿದರು.
ಬಳ್ಳಾರಿ ಜಿಲ್ಲೆಯ13 ಗ್ರಾಮಗಳಲ್ಲಿ ಶೇ. 25ಕ್ಕಿಂತ ಕಡಿಮೆ, ಅಂದರೆ ತಲಾ 12 ಲೀಟರ್ ನೀರು ಕೊಡಲಾಗುತ್ತಿದೆ. 200 ಗ್ರಾಮಗಳಿಗೆ ಶೇ. 50ಕ್ಕಿಂತ ಕಡಿಮೆ, 346 ಗ್ರಾಮಗಳು ಶೇ. 75ಕ್ಕಿಂತ ಕಡಿಮೆ, 196 ಗ್ರಾಮಗಳು ಶೇ. 75ಕ್ಕೂ ಹೆಚ್ಚಳ ನೀರು ಪೂರೈಕೆ ಮಾಡಲಾಗುತ್ತಿದ್ದು, ಶೇ. 100 ನೀರು ಶುದ್ಧ ನೀರು ಪೂರೈಕೆ ಕೇವಲ 30 ಗ್ರಾಮಗಳು ಮಾತ್ರ. ಕೊಪ್ಪಳದಲ್ಲಿ ಕೇವಲ 23 ಗ್ರಾಮಗಳಿಗೆ ಶೇ. 100ರಷ್ಟು ಶುದ್ಧ ನೀರು ಪೂರೈಕೆಯಾದರೆ, ರಾಯಚೂರಿನಲ್ಲಿ 413 ಗ್ರಾಮಗಳಿಗೆ ಸರಬರಾಜಾಗಲಿವೆ. ಈ ವರ್ಷ ರಾಷ್ಟ್ರೀಯ ಗ್ರಾಮೀಣ ಕುಡಿವ ನೀರಿನ ಯೋಜನೆಯಡಿ ಶೇ. 80ರಷ್ಟು ಹಳ್ಳಿಗಳನ್ನು ಒಳಪಡಿಸಲಾಗುತ್ತಿದ್ದು, ಶೇ. 100ರಷ್ಟು ಅಭಿವೃದ್ಧಿಪಡಿಸಲು ಕ್ರಮಕೈಗೊಳ್ಳಲಾಗುತ್ತಿದ್ದು, ಅಧಿಕಾರಿಗಳು, ಶಾಸಕರಿಗೆ ಸೂಚಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.