ವಿದ್ಯಾರ್ಥಿಗಳಿಗೆ ಮಾದರಿಯಾದ ರಜತ್
ಕೊಟ್ಟೂರು: ತಡರಾತ್ರಿ ವರೆಗೂ ಟ್ಹಿವಿ ನೋಡಿಯೂ, ಟ್ಯೂಷನ್ ಸಹ ಹೋಗದೆ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ. 91 ಅಂಕ ಪಡೆದ ಪಟ್ಟಣದ ರಜತ್ ಚೆನ್ನಶೆಟ್ಟಿ ವಿದ್ಯಾರ್ಥಿಗಳ, ಪಾಲಕರ ಹುಬ್ಬೇರುವಂತೆ ಮಾಡಿದ್ದಾನೆ.
ಪಟ್ಟಣದ ಇಂದು ಪದವಿ ಪೂರ್ವ ಮಹಾವಿದ್ಯಾಲಯದ ರಜತ್ ತರಗತಿಯಲ್ಲಿ ಪ್ರಾಧ್ಯಾಪಕರು ಹೇಳುವ ವಿಷಯವನ್ನು ಅತ್ಯಂತ ಏಕಾಗ್ರತೆಯಿಂದ ಮನದಟ್ಟು ಮಾಡಿಕೊಳ್ಳುತ್ತಿದ್ದ ರಜತ್, ಪರೀಕ್ಷೆಗಾಗಿ ಹಗಲಿರುಳು ಓದಿನಲ್ಲಿ ನಿರತನಾಗುತ್ತಿರಲಿಲ್ಲ. ಪರೀಕ್ಷೆ ಸಮೀಪಿಸುವ ದಿನಗಳಲ್ಲಿ ರಜತ್ ಪ್ರತಿದಿನ 12 ರಿಂದ 1.30ರ ವರೆಗೆ ಟೀವಿ ನೋಡುವ ಹವ್ಯಾಸ ರೂಢಿಸಿಕೊಂಡಿದ್ದ. ಇದಕ್ಕೆ ಮನೆಯವರೂ ಆಕ್ಷೇಪ ವ್ಯಕ್ತಪಡಿಸಿದೂ ರಜತ್ ಟೀವಿ ನೋಡುವ ಪ್ರವೃತ್ತಿ ನಿಲ್ಲಿಸಿದ್ದಿಲ್ಲ. ಆದರೂ ಈ ಬಾರಿಯ ಪರೀಕ್ಷೆಯಲ್ಲಿ ರಜತ್ 551 ಅಂಕ ಪಡೆಯುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ.
ಟ್ಯೂಷನ್ ಇಲ್ಲ: ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಟ್ಯೂಷನ್ ಹೋಗುವುದು ಸಾಮಾನ್ಯ. ಆದರೆ ರಜತ್ ಟ್ಯೂಷನ್ ಹೋಗದೆ ತನ್ನ ಇತರ ಸಹಪಾಠಿಗಳಿಗಿಂತ ಹೆಚ್ಚು ಅಂಕ ಪಡೆದಿದ್ದಾನೆ.
ರಜತ್ ಮೊದಲಿನಿಂದಲೂ ಚುರುಕು ವಿದ್ಯಾರ್ಥಿ. ಆದರೂ ನಿರಂತರ ಓದುವತ್ತ ಮುಂದಾಗುತ್ತಿರಲಿಲ್ಲ. ಓದಿನ ಕಡೆಗೆ ಗಮನ ಹರಿಸುವಂತೆ ಪದೇ ಪದೇ ಪ್ರಾಧ್ಯಾಪಕರು ತಿಳಿ ಹೇಳಿದರೂ ಕೇಳುತ್ತಿರಲಿಲ್ಲ. ಆದರೂ ರಜತ್ ತನ್ನ ಬುದ್ಧಿವಂತಿಕೆ ಬಳಕಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವುದು ಹೆಮ್ಮೆ ತಂದಿದೆ ಎಂದು ಪ್ರಾ. ಎಚ್.ಎನ್. ಭದ್ರಿ ಅಭಿಪ್ರಾಯಪಟ್ಟಿದ್ದಾರೆ.
ರಜತ್ ಎಂಜಿನಿಯರಿಂಗ್ ಇಲ್ಲವೇ ಕೃಷಿ ವಿಜ್ಞಾನ ಪದವಿ ಕಲಿಕೆಯತ್ತ ಆಸಕ್ತಿ ಹೊಂದಿದ್ದು, ಆತನ ನಿರ್ಧಾರ ಆಧರಿಸಿ ಅವನಿಗೆ ಪ್ರೋತ್ಸಾಹ ನೀಡಲಾಗುವುದು ಎಂದು ರಜತ್ನ ಚಿಕ್ಕಪ್ಪ ಆನಂದ ಚೆನ್ನಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

