ಬಳ್ಳಾರಿ

ಪಿಯು ಪರೀಕ್ಷಾ ಮಂಡಳಿ ಎಡವಟ್ಟು: ವಿದ್ಯಾರ್ಥಿಗೆ ಸೊನ್ನೆ

Published On :

ಕೊಟ್ಟೂರು: ಪದವಿ ಪೂರ್ವ ಪರೀಕ್ಷಾ ಮಂಡಳಿ ಎಷ್ಟೇ ಆಧುನಿಕರಣಗೊಂಡಿದ್ದರೂ ಆವಾಂತರಗಳಿಂದ ಮುಕ್ತಗೊಳ್ಳದೇ ವಿದ್ಯಾರ್ಥಿಗಳಿಗೆ ತೊಂದರೆ ನೀಡುತ್ತಿರುವುದನ್ನು ಮಾತ್ರ ನಿಲ್ಲಿಸಿಲ್ಲ.
ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಾಗ ಕೊಟ್ಟೂರಿನ ಇಂದು ಪಪೂ ಮಹಾವಿದ್ಯಾಲಯದ ಪ್ರತಿಭಾನ್ವಿತ ವಿದ್ಯಾರ್ಥಿ ಟಿ. ಗುರುರಾಜ್ ಕಲಾ ವಿಭಾಗದಲ್ಲಿ ಶಿಕ್ಷಣ ವಿಷಯದಲ್ಲಿ ಸೊನ್ನೆ ಅಂಕಗಳನ್ನು ಪಡೆದು ಅನುತ್ತೀರ್ಣನಾಗಿದ್ದ. ಅಚ್ಚರಿ ಎಂದರೆ ಈ ವಿದ್ಯಾರ್ಥಿ ಶಿಕ್ಷಣ ವಿಷಯ ಹೊರತುಪಡಿಸಿ ಇನ್ನುಳಿದ ಐದು ವಿಷಯಗಳಲ್ಲಿ ಶೇ. 93.8ರಷ್ಟು ಅಂಕ ಪಡೆದಿದ್ದು, ಜೇಷ್ಠತೆ ಗಳಿಸುವ ಸ್ಪಷ್ಟ ಭರವಸೆ ಹೊಂದಿದ್ದರೂ ಫಲಿತಾಂಶ ಅನುತ್ತೀರ್ಣ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಘೋಷಿಸಿತ್ತು. ಇದರಿಂದಾಗಿ ಗುರುರಾಜ್‌ನ ಪೋಷಕರು, ಪ್ರಾಧ್ಯಾಪಕರು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಅನುತ್ತೀರ್ಣ ಫಲಿತಾಂಶದಿಂದ ಬಹಳವಾಗಿ ನೊಂದಿದ್ದ ಗುರುರಾಜ್ ಪರವಾಗಿ ಅವನ ಸಹೋದರ ಬೆಂಗಳೂರಿಗೆ ತೆರಳಿ ಪಿಯುಸಿ ಪರೀಕ್ಷಾ ಮಂಡಳಿಗೆ ದೂರು ಸಲ್ಲಿಸಿ, ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದರು. ಅಧಿಕಾರಿಗಳು ಮರು ಮೌಲ್ಯಮಾಪನ ಕೈಗೊಂಡಾಗ ಶಿಕ್ಷಣ ವಿಭಾಗದಲ್ಲಿ ಗುರುರಾಜ್ 100 ಅಂಕ ಪಡೆದಿರುವುದು ಸ್ಪಷ್ಟವಾಗಿದೆ. ಮೊದಲ ಮೌಲ್ಯಮಾಪನದಲ್ಲಿ 100 ಅಂಕಗಳ ಬದಲಾಗಿ 000 ಶೂನ್ಯ ಅಂಕ ಎಂದು ತಪ್ಪಾಗಿ ನಮೋದಿಸಲಾಗಿತ್ತು.
ಮೌಲ್ಯಮಾಪನ ಗೈದ ಪ್ರಾದ್ಯಾಪಕರು ಮಾಡಿದ ತಪ್ಪಿನಿಂದಾಗಿ ಗುರುರಾಜ್‌ನಿಗೆ ಅನುತ್ತೀರ್ಣದ ಶಿಕ್ಷೆ ಶಿಕ್ಷೆ ಅನುಭವಿಸಬೇಕಾಗಿತ್ತು. ಪಿಯುಸಿ ಮಂಡಳಿಯ ಅಧಿಕಾರಿಗಳು ತಾವೇ ಪ್ರಕಟಿಸಿದ್ದ ಫಲಿತಾಂಶವನ್ನು ಹಿಂಪಡೆದು ಗುರುರಾಜ್ ಶಿಕ್ಷಣ ವಿಷಯದಲ್ಲಿ 100 ಅಂಕ ಪಡೆದಿದ್ದಾನೆ ಎಂದು ಸಾರಿದರು.
ರಾಜ್ಯ ಮಟ್ಟದ ಕಲಾವಿಭಾಗದಲ್ಲಿ 5ನೇ ಸ್ಥಾನ ಪಡೆಯುವ ಸಾಧ್ಯತೆ ಇರುವ ಗುರುರಾಜ್ 569 ಅಂಕ ಪಡೆದಿರುವುದನ್ನು ಪರೀಕ್ಷಾ ಮಂಡಳಿ ಅಧಿಕಾರಿಗಳು ಇದೀಗ ಧೃಡೀಕರಿಸಿದ್ದಾರೆ.
ಮೌಲ್ಯ ಮಾಪಕರ ಅಜಾಗರೂಕತೆಯಿಂದಾಗಿ ಗುರುರಾಜನ ಶೈಕ್ಷಣಿಕ ಬದುಕು ಹಳಿತಪ್ಪುವ ಹಾದಿಯತ್ತ ಸಾಗಿತ್ತು. ಇದಕ್ಕಾರು ಹೊಣೆ ಎಂಬುದನ್ನು ಇದೀಗ ಪಿಯುಸಿ ಅಧಿಕಾರಿಗಳೇ ತಿಳಿಸಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.